ಮನುಷ್ಯ ಸತ್ತ ನಂತರ ಆತ್ಮ ಏನಾಗುತ್ತೆ ವಿಜ್ಞಾನಿಗಳು ಇದರ ಬಗ್ಗೆ ಹೇಳೋದೇನು ಓದಿ

ಎಲ್ಲರಿಗೂ ನಾವು ಬದುಕಿದ್ದಾಗ ಹೇಗಿರುತ್ತೇವೆ ಏನಾಗಿರ್ತೀವಿ ಅನ್ನೋದು ಗೊತ್ತಿರುತ್ತೆ ಆದರೆ ಸತ್ತ ನಂತರ ನಾವು ಹೇಗಿರುತ್ತೇವೆ ಏನ್ ಆಗಿರುತ್ತೇವೆ ಅನ್ನೋದು ಯಾರಿಗೂ ಗೊತ್ತಿರಲ್ಲ ಅಲ್ವಾ ಕೆಲವೊಂದಿಷ್ಟು ಜನ ನಾವು ಸತ್ತ ನಂತರ ನಮ್ಮ ಆತ್ಮ ಪರಮಾತ್ಮನನ್ನು ಸೇರುತ್ತದೆ ಎಂದು ಹೇಳುತ್ತಾರೆ ಇನ್ನು ಕೆಲವೊಂದು ಸಲ ಇದು ಮೂಢನಂಬಿಕೆ ಎಂದು ಅದನ್ನು ಅಲ್ಲಗಳೆಯುತ್ತಾರೆ ಹಾಗಿದ್ದರೆ ನಾವು ಸತ್ತ ನಂತರ ಏನಾಗುತ್ತದೆ ಮನುಷ್ಯನ ದೇಹದಲ್ಲಿ ನಿಜವಾಗಲೂ ಆತ್ಮ ಅನ್ನೋದು ಇದೆಯಾ ಅಥವಾ ಆತನ ಬರಿ ಕಲ್ಪನೆ ಅಷ್ಟೇನಾ ಅದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ವ್ಯಕ್ತಿ ಸತ್ತ ನಂತರ ಆ ವ್ಯಕ್ತಿಯ ದೇಹದಲ್ಲಿ ಏನೇನೆಲ್ಲ ಬದಲಾವಣೆ ಆಗುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ಈ ಭೂಮಿಯಲ್ಲಿ ಒಂದಲ್ಲ ಒಂದು ದಿನ ಯಾವುದೇ ವ್ಯಕ್ತಿ ಇರಬಹುದು ಶ್ರೀಮಂತ-ಬಡವ ಯಾವುದೇ ರೀತಿ ವ್ಯಕ್ತಿಯಾಗಿರಬಹುದು ಅಥವಾ ಭೂಮಿ ಮೇಲಿನ ಯಾವುದೇ ಒಂದು ಜೀವಿಯೂ ಆಗಿರಬಹುದು ಯಾವುದು ಶಾಶ್ವತವಲ್ಲ ಒಂದಲ್ಲ ಒಂದು ದಿನ ಮರಣವನ್ನು ಹೊಂದುತ್ತಾರೆ ಎಲ್ಲರಿಗೂ ಒಂದು ಅಂತ್ಯ ಅನ್ನುವುದು ಇರುತ್ತದೆ. ಆದರೆ ಇಂದಿಗೂ ಸಹ ಕೆಲವರು ವ್ಯಕ್ತಿಗಳಲ್ಲಿ ಸತ್ತನಂತರ ಏನಾಗುತ್ತಾರೆ ವ್ಯಕ್ತಿಯ ಆತ್ಮಕ್ಕೆ ಜೀವ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳು ಉಂಟಾಗಿವೆ.

ಇದರ ಸಲುವಾಗಿ ಜರ್ಮನಿಯಲ್ಲಿ ಒಂದು ರಿಸರ್ಚ್ ಅನ್ನು ಮಾಡಲಾಗಿದೆ. ಕೆಲವೊಂದಿಷ್ಟು ಕೋಮಾ ಸ್ಥಿತಿಯಲ್ಲಿ ಇರುವಂತಹ ಪೇಷಂಟ್ ಗಳ ಮೇಲೆ ಈ ಪ್ರಯೋಗ ನಡೆದಿತ್ತು ಅದು ಏನಂದ್ರೆ ಕೋಮಾ ಸ್ಟೇಜಲ್ಲಿ ಇದ್ದಂತಹ ಕೆಲವೊಂದಿಷ್ಟು ವ್ಯಕ್ತಿಗಳು ಹಾಗೂ ಇನ್ನೇನು ಮರಣ ಹೊಂದಿದರು ಎನ್ನುವಂತಹ ವ್ಯಕ್ತಿಗಳು ಅಚಾನಕ್ಕಾಗಿ ಬದುಕಿ ಬಿಟ್ಟಿದ್ದರು ಅಂತಹ ವ್ಯಕ್ತಿಗಳನ್ನು ಪ್ರಯೋಗಕ್ಕೆ ಒಳಪಡಿಸಿ ಅವರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಿದರು. ಇದಕ್ಕೆ ಎನ್ಡಿ ಇ ಎಂದು ಹೆಸರನ್ನು ಇಡಲಾಯಿತು ಎನ್ ಡಿ ಇ ಅಂದರೆ, ನಿಯರ್ ಡೆತ್ ಎಕ್ಸ್ಪೀರಿಯನ್ಸ್ ಎಂದರ್ಥ.

ಈ ಒಂದು ರಿಪೋರ್ಟರ್ ಪ್ರಕಾರ ಪ್ರಯೋಗಕ್ಕೆ ಒಳಪಡಿಸಿದ ವ್ಯಕ್ತಿಗಳು ತಮ್ಮ ಅನಿಸಿಕೆಯನ್ನು ಹೇಳುವುದೇನೆಂದರೆ ಸತ್ತ ನಂತರ ನಾನು ನನ್ನ ದೇಹದಿಂದ ಹೊರ ಹೋಗಿ ನನ್ನ ಮೃತ ದೇಹವನ್ನು ನೋಡಿದೆ, ನಾನು ನನ್ನ ಪೂರ್ವಜರ ಜೊತೆ ಮಾತನಾಡಿದೆ, ನನಗೆ ಒಂದು ಜ್ಯೋತಿ ಕಾಣಿಸಿತು ಹೀಗೆ ಹಲವಾರು ರೀತಿಯಲ್ಲಿ ತಾವು ಅನುಭವಿಸಿದ್ದನ್ನು ಹೇಳಿದ್ದಾರೆ. ಆದರೆ ಈ ಹೇಳಿಕೆಗಳನ್ನು ಡಾಕ್ಟರ್ಸ್ ಮತ್ತು ವಿಜ್ಞಾನ ಅಲ್ಲಗಳೆದು ತಮ್ಮದೇ ಆದ ವಿಮರ್ಶೆಯನ್ನು ನೀಡಿದರು.

ಹಾಗಾಗಿ ಇದರ ಬಗ್ಗೆ ಮನುಷ್ಯ ಸತ್ತ ನಂತರ ಆತ್ಮ ಇದೆಯೋ ಇಲ್ಲ ಎಂಬುದನ್ನು ತಿಳಿಯುವ ಸಲುವಾಗಿ ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ನೇಷನ್ಸ್ ಹಾಗೂ ಆಸ್ಟ್ರಿಯಾದ ಡಾಕ್ಟರ್ಗಳು ಮತ್ತು ಸೈಂಟಿಸ್ಟ್ ಗಳು ಕೆಲವೊಂದು ರಿಸರ್ಚ್ ಗಳನ್ನು ನಡೆಸುತ್ತಾರೆ. ಈ ರಿಸರ್ಚ್ ನಲ್ಲಿ ಅವರು ಕೆಲವೊಂದಿಷ್ಟು ಎನ್ ಡಿ ಇ ರಿಪೋರ್ಟ್ ಗಳನ್ನು ಕಲೆಕ್ಟ್ ಮಾಡಿ ಅದರಲ್ಲಿರುವ ವ್ಯಕ್ತಿಗಳು ತಾನು ಸತ್ತ ನಂತರ ತನ್ನ ದೇಹದಿಂದ ಹೊರ ಬಂದು ತನ್ನ ದೇಹವನ್ನು ನಾನು ನೋಡಿಕೊಂಡೆ ಎಂಬ ಇಂತಹ ಅಂಶಗಳನ್ನು ಗಮನಿಸುತ್ತಾರೆ. ಇದನ್ನು ಸಾಬೀತುಪಡಿಸಲು ಸೈಂಟಿಸ್ಟ್ ಗಳು ಒಂದು ಪರೀಕ್ಷೆಯನ್ನು ಮಾಡ್ತಾರೆ ಹಾಗೆ ಆಪರೇಷನ್ ಟೇಬಲ್ ಮೇಲೆ ಒಂದು ಚೀಟಿಯಲ್ಲಿ ಪ್ಲೀಜ್ ರೀಡ್ ದಿಸ್ ಎಂದು ಬರೆದಿಟ್ಟು ನಂತರ ತಮ್ಮ ನಿಯರ್ ಡೆತ್ ಎಕ್ಸ್ಪೀರಿಯನ್ಸ್ ಗಳನ್ನು ಹಂಚಿಕೊಂಡವರ ಬಳಿ ಆ ಚೀಟಿಯಲ್ಲಿ ಏನಿದೆ ಅದನ್ನು ಓದಿದ್ದೀರಾ ಎಂದು ಕೇಳಿದಾಗ ಸತ್ತ ಅಂತಹ ಯಾವ ವ್ಯಕ್ತಿಗಳು ಸಹ ಚೀಟಿಯಲ್ಲಿ ಏನು ಬರೆದಿತ್ತು ಎಂಬುದನ್ನು ಹೇಳಲೇ ಇಲ್ಲ. ಈ ರಿಸರ್ಚ್ ಎಂದ ಒಂದಿಷ್ಟು ಹೇಳಿಕೆಯನ್ನು ನೀಡಲಾಯಿತು ಅದೇನು ಅಂದ್ರೆ ಮನುಷ್ಯ ಸತ್ತ ನಂತರ ಆತ್ಮ ಅನ್ನೋದು ಇರಲ್ಲ ಮನುಷ್ಯ ಸಾಯುವ ಕೊನೆಗಳಿಗೆಯಲ್ಲಿ ಮನುಷ್ಯನ ಮೆದುಳು ನಿಧಾನವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಇದರಿಂದಾಗಿ ಮೆದುಳು ತನ್ನ ಕಂಟ್ರೋಲ್ ಕಳೆದುಕೊಳ್ಳುತ್ತದೆ. ಇದರಿಂದ ನಿದ್ರೆಯಲ್ಲಿ ಕನಸು ಕಾಣುವಂತಹ ಹಂತವನ್ನು ತಲುಪುತ್ತದೆ.

ಮನುಷ್ಯನ ನಿದ್ದೆಯಲ್ಲಿ ಎನ್1, ಎನ್2, ಎನ್3 ಹಾಗೂ ರೆಮ್ ಸ್ಟೇಜ್. ಮನುಷ್ಯನಿಗೆ ಮಲಗಿದ ತಕ್ಷಣ ಕನಸು ಕಾಣಲು ಶುರುವಾಗುವುದು ಇಲ್ಲ ಬದಲಾಗಿ ಮೂರು ಹಂತಗಳನ್ನು ದಾಟಿಕೊಂಡು ಬಂದನಂತರ ನಾಲ್ಕನೆಯ ಹಂತದಲ್ಲಿ ಮನುಷ್ಯ ಮಲಗಿದ 90 ನಿಮಿಷಗಳ ನಂತರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ನಮ್ಮ ಸಬ್ ಕಾನ್ಶಿಯಸ್ ಮೈಂಡ್ ಎಚ್ಚರವಿದ್ದಾಗ ಏನನ್ನು ಕಂಡಿರುತ್ತೇವೆ ಅದನ್ನೇ ಕನಸಿನ ಮೂಲಕ ಹೊರಹಾಕಲ್ಪಡುತ್ತದೆ.

ಆದರೆ ಇನ್ನೆರಡು ಎಕ್ಸ್ಪೀರಿಯನ್ಸ್ ಅಲ್ಲಿ ವ್ಯಕ್ತಿಯು ಸಾಯುವ ಸಮಯದಲ್ಲಿ ಆತನ ಮೆದುಳು ಕಾರ್ಯನಿರ್ವಹಿಸುವುದನ್ನು ನಿಧಾನಗೊಳಿಸಿದ ತಕ್ಷಣವೇ ಈ ರೆಂ ಸ್ಟೇಜಿಗೆ ಜಾರುತ್ತಾನೆ ಹಾಗಾಗಿ ಇದೇ ತರಹ ಅನುಭವಗಳನ್ನು ಸತ್ತನಂತರ ವ್ಯಕ್ತಿಗಳು ಹೊಂದಿದ್ದಾರೆ ಎನ್ನುವುದನ್ನು ರಿಸರ್ಚ್ ಹೇಳಿದ್ದು.

ಆ ರಿಸರ್ಚ್ ನ ಪ್ರಕಾರ, ಕೆಲವೊಂದಿಷ್ಟು ಸತ್ತ ಅಂತಹ ವ್ಯಕ್ತಿಗಳು ಅವರು ಸಾಯುವ ಮುನ್ನ ಆಪರೇಷನ್ ಥಿಯೇಟರ್ ನಲ್ಲಿ ಇರುವಂತಹ ದೀಪ ಅದನ್ನು ನೋಡಿ ಹಾಗೂ ಸತ್ತ ನಂತರ ತಮ್ಮ ಆತ್ಮ ದೇಹದಿಂದ ಹೊರಬರುತ್ತದೆ ಎಂಬುದನ್ನು ಗಾಢವಾಗಿ ನಂಬಿರುವುದರಿಂದ ಅವರಿಗೆ ತಮ್ಮ ದೇಹದಿಂದ ಹೊರಬಂದ ಮೃತದೇಹವನ್ನು ನೋಡಿರುವುದು ಅಥವಾ ದೂರದಲ್ಲಿ ಏನೋ ಒಂದು ಬೆಳಕು ಕಾಣಿಸುತ್ತಿರುವುದು ಅನುಭವ ಉಂಟಾಗುತ್ತದೆ ಅಂದರೆ ವಿಜ್ಞಾನಿಗಳು ಹಾಗೂ ಡಾಕ್ಟರ್ಗಳ ಪ್ರಕಾರ ಅಂತಹ ವ್ಯಕ್ತಿಗಳು ತಮ್ಮ ರೆಂ ಸ್ಟೇಷನ್ನಲ್ಲಿ ಅಂತ ಕನಸುಗಳನ್ನು ಕಂಡು ಆ ತರಹದ ಅನುಭವನ್ನು ಪಡೆದಿರುತ್ತಾರೆ ಎಂದು ತಿಳಿಸುತ್ತಾರೆ. ಹಾಗಾಗಿ ಇಂದಿಗೂ ಕೂಡ ವಿಜ್ಞಾನ ಮನುಷ್ಯನ ದೇಹದಲ್ಲಿ ಆತ್ಮ ಇದೆ ಎಂಬುವುದನ್ನು ಒಪ್ಪುತ್ತಿಲ್ಲ.

ವಿಜ್ಞಾನ ಮತ್ತು ವಿಜ್ಞಾನಿಗಳ ಪ್ರಕಾರ ಮನುಷ್ಯ ಸತ್ತಮೇಲೆ ಅದು ಒಂದು ಕೇವಲ ಮೃತದೇಹ. ಹಾಗಾದ್ರೆ ಮನುಷ್ಯ ಸತ್ತಮೇಲೆ ಮಹಾನ್ ಮನುಷ್ಯನ ದೇಹದಲ್ಲಿ ಏನೇನೆಲ್ಲ ಬದಲಾವಣೆ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.

ಮನುಷ್ಯ ಸತ್ತ ನಂತರ ಮೊದಲ ಮನುಷ್ಯನ ಹೃದಯ ಬಡಿತ ನಿಂತು ಹೋಗುತ್ತದೆ ಹಾಗೂ ಹೃದಯ ಬಡಿತ ನಿಂತ ಮೇಲೆ ಹೃದಯದಿಂದ ಮೆದುಳಿಗೆ ಸರಬರಾಜಾಗುತ್ತಿರುವ ಮತ್ತು ರಕ್ತ ಇದು ಸಹ ನಿಲ್ಲುತ್ತದೆ ಇದರಿಂದಾಗಿ ಮೆದುಳು ಕೂಡ ಉಳಿದಂತಹ ಆಮ್ಲಜನಕವನ್ನು ಉಪಯೋಗಿಸಿಕೊಂಡು ನಿಧಾನವಾಗಿ ತನ್ನ ಕಾರ್ಯವನ್ನು ನಿಲ್ಲಿಸುತ್ತದೆ. ನಮ್ಮ ಶರೀರಕ್ಕೆ ಬೇಕಾದಂತಹ ಹಲವಾರು ಹಾರ್ಮೋನ್ ಗಳು ಮೆದುಳಿನಿಂದ ಬರುವುದು ನಿಲ್ಲುತ್ತದೆ ಇದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಸೂಚನೆಗಳು ಮೆದುಳಿನಿಂದ ಸಿಗದೇ ಇರುವುದರಿಂದ ನಮ್ಮ ದೇಹದ ಅಂಗಗಳು ಸಹ ಅವುಗಳ ಕಾರ್ಯವನ್ನು ನಿಲ್ಲಿಸುತ್ತವೆ ಇದರ ನಂತರ ನಡೆಯುವ ಪ್ರಕ್ರಿಯೆಗೆ ಪೋಸ್ಟ ಡೆತ್ ಪ್ರೋಸೆಸ್ ಅಂತ ಕರೆಯುತ್ತಾರೆ.

ನಮ್ಮ ಶರೀರದ ಎಲ್ಲ ಅಂಗಾಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ ಸಂಪೂರ್ಣವಾಗಿ ನಾವು ಹೊಂದಿದ್ದೇವೆ ಎಂದು ಅರ್ಥ ಆದರೂ ನಮ್ಮ ದೇಹದಲ್ಲಿ ಜೀವ ಇಲ್ಲದೆ ಇದ್ದರೂ ಸಹ ನಮ್ಮ ದೇಹದಲ್ಲಿರುವ ಕೆಲವೊಂದಿಷ್ಟು ಬ್ಯಾಕ್ಟೀರಿಯಾಗಳು ಜೀವಂತವಾಗಿರುತ್ತವೆ. ಇವು ನಾವು ಸತ್ತ ನಂತರ ನಮ್ಮ ದೇಹದಲ್ಲಿ ನಮ್ಮ ಚರ್ಮದ ಮೇಲಿರುವ ಜೀವಾಣುಗಳನ್ನು ತಿನ್ನುತ್ತವೆ. ಅಲ್ಲದೆ ವ್ಯಕ್ತಿ ಮರಣ ಹೊಂದಿದ ನಂತರ ದೇಹದಲ್ಲಿ ಯಾವುದೇ ಶಕ್ತಿ ಉತ್ಪನ್ನ ಆಗದೇ ಇರುವ ಕಾರಣ ದೇಹ ಸಂಪೂರ್ಣವಾಗಿ ತಣ್ಣಗಾಗುತ್ತದೆ ರಕ್ತ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ ಹಾಗೂ ಕ್ಯಾಲ್ಸಿಯಂ ಸ್ನಾಯುಗಳಲ್ಲಿ ಇರುವ ಪೋಷಕಾಂಶಗಳ ಜೊತೆ ಬೆರೆಯುತ್ತದೆ ಈ ಪ್ರಕ್ರಿಯೆಯಿಂದ ಶರೀರ ಕೊಳೆಯಲು ಪ್ರಾರಂಭಿಸುತ್ತದೆ. ನಂತರ ದೇಹದ ಬಣ್ಣ ಬದಲಾವಣೆಗೊಂಡು ನೀಲಿ ಬಣ್ಣಕ್ಕೆ ತಿರುಗುತ್ತದೆ ಅನೇಕ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ.

ಈ ಪ್ರಕ್ರಿಯೆಯಲ್ಲಿ ನಮ್ಮ ದೇಹದೊಳಗಿರುವ ಬ್ಯಾಕ್ಟೀರಿಯಾಗಳು ಅಂಗಾಂಗಗಳನ್ನೆಲ್ಲ ತಿನ್ನುತ್ತಾ ಬರುತ್ತವೆ ಇದರಿಂದ ಪಪ್ಯೂಟ್ರೀಸೈನ್ ಎಂಬ ಅನಿಲ ಬಿಡುಗಡೆಯಾಗಿ ದೇಹದಿಂದ ಕೆಟ್ಟದಾಗಿ ದುರ್ನಾಥ ಬರಲು ಪ್ರಾರಂಭಿಸುತ್ತದೆ ಅನಂತರ ದೇಹ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಶರೀರದ ದುರ್ವಾಸನೆ ಕೆಲವೊಂದಿಷ್ಟು ಹುಳುಗಳಿಗೆ ಹಾಗೂ ನೊಣಗಳಿಗೆ ಆಕರ್ಷಿತವಾಗಿ ಅವುಗಳು ಸತ್ತಂತ ದೇಹವನ್ನು ತಿನ್ನಲು ಶುರು ಮಾಡುತ್ತವೆ ಹೀಗೆ ಹುಳಗಳು ಬ್ಯಾಕ್ಟೀರಿಯಾ ನೊಣಗಳು ತಿಂದುಳಿದ ನಂತರ ನಮ್ಮ ದೇಹದಲ್ಲಿ ಕೇವಲ ಉಳಿಯುವುದು ಮೂಳೆ ಮತ್ತು ಕೂದಲು ಮಾತ್ರ ಕಾಲಕಳೆದಂತೆ ಇವುಗಳು ಸಹ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತವೆ. ಇದು ವಿಜ್ಞಾನಗಳ ಹಾಗೂ ವಿಜ್ಞಾನದ ಪ್ರಕಾರ ಮನುಷ್ಯ ಸತ್ತ ನಂತರ ಮನುಷ್ಯ ದೇಹದಲ್ಲಿ ಆಗುವ ಪರಿಣಾಮಗಳು

Leave a Comment

error: Content is protected !!