ದೇವದತ್ತ್ ಪಡಿಕ್ಕಲ್ ಬಗ್ಗೆ ಸುನಿಲ್ ಗವಾಸ್ಕರ್ ನುಡಿದ ಭವಿಷ್ಯ ನಿಜವಾಯ್ತೆ ನೋಡಿ

ಐಪಿಎಲ್ ಪಂದ್ಯ ಶುರುವಾದರೆ ಸಾಕು ಎಲ್ಲಾ ಕಡೆಯಲ್ಲೂ ಒಂದು ತರಹದ ಹಬ್ಬದ ವಾತಾವರಣ ಇರುತ್ತದೆ. ಎಲ್ಲರೂ ಟಿವಿಯ ಮುಂದೆಯೆ ಇರುತ್ತಾರೆ. ಹಾಗೆಯೆ ಐಪಿಎಲ್ ಪಂದ್ಯದಲ್ಲಿ ಆಟ ಆಡಿ ತಮ್ಮ ಜೀವನ ರೂಪಿಸಿಕೊಂಡವರು ಇದ್ದಾರೆ. ಹೆಸರು ಪಡೆದು ಕ್ರಿಕೆಟ್ ಟೀಂ ಅನ್ನು ಮುನ್ನಡಿಸಿದವರು ಇದ್ದಾರೆ. ಇಲ್ಲೊಬ್ಬ ಇಪ್ಪತ್ತು ವರ್ಷದ ಕ್ರಿಕೆಟ್ ಆಟಗಾರನ ಬಗೆಗೆ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಹುಡುಗ ಯಾರು? ಅವರ ಬಗ್ಗೆ ಸುನಿಲ್ ಗವಾಸ್ಕರ್ ಎನು ಹೇಳಿದ್ದಾರೆ ಎನ್ನುವುದನ್ನು ಇಲ್ಲಿ ತಿಳಿಯೋಣ.

ಆರ್.ಸಿ.ಬಿ ತಂಡದಲ್ಲಿ ದೇವದೂತನಂತೆ ಆಡುತ್ತಿರುವ ಹುಡುಗನ ಹೆಸರು ದೇವದತ್ತ್ ಪಡಿಕ್ಕಲ್. ಇವನು ಕನ್ನಡಿಗ ಎನ್ನುವುದು ನಮ್ಮ ಹೆಮ್ಮೆ. ಮೊದಲಿಗೆ ಐಪಿಎಲ್ ಗೆ ಪಾದಾರ್ಪಣೆ ಮಾಡಿದಾಗಲೆ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಹೆಸರುವಾಸಿಯಾಗಿದ್ದ. ಇದೀಗ ಬಲಿಷ್ಠ ತಂಡವೆಂದು ಹೆಸರಾದ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲೂ ಅರ್ಧ ಶತಕವನ್ನು ದಾಖಲಿಸಿದ್ದಾನೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 40 ಬಾಲ್ ಗೆ 4 ಬೌಂಡರಿ ಹಾಗೂ 2 ಸಿಕ್ಸ್ ಬಾರಿಸುವುದರ ಮೂಲಕ ತಂಡಕ್ಕೆ 54 ರನ್ ತಂದುಕೊಟ್ಟಿದ್ದಾನೆ. ಮಿಸ್ ಫೀಲ್ಡಿಂಗ್ ಮಾಡಿದರೆ ವಿರಾಟ್ ಕೊಹ್ಲಿಯು ಸಹಜವಾಗಿ ಸಿಟ್ಟಾಗುತ್ತಾರೆ. ಆದರೆ ದೇವದತ್ತ್ ಮಿಸ್ ಫೀಲ್ಡ್ ಮಾಡಿದಾಗ ಸಿಟ್ಟಾಗದೆ ಅವನ್ನು ಹುರಿದುಂಬಿಸಿದರು. ಇದು ಒಬ್ಬ ಅದ್ಭುತ ನಾಯಕನ ಲಕ್ಷಣಗಳಲ್ಲಿ ಒಂದು ಎನ್ನುತ್ತಾರೆ ಸುನಿಲ್ ಗವಾಸ್ಕರ್. ಕನ್ನಡದ ಹುಡುಗ ದೇವದತ್ತ್ ಪಡಿಕ್ಕಲ್ ಇಷ್ಟರಮಟ್ಟಿಗೆ ನಾಯಕನ ನಂಬಿಕೆಗೆ ಪಾತ್ರರಾಗಿದ್ದಾನೆ. ಎರಡು ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಮುಂದಿನ ಪಂದ್ಯಗಳಲ್ಲಿಯೂ ಒಳ್ಳೆಯ ಆಟದ ಪ್ರದರ್ಶನ ನೀಡಲಿ, ಆರ್.ಸಿ.ಬಿ ತಂಡಕ್ಕೆ ಅಡಿಪಾಯವಾಗಿ ಇಂಡಿಯಾದ ಟೀಂ ನಲ್ಲಿ ಹೇಗೆ ಆಡಬೇಕೆಂದು ಮಾದರಿಯಾಗಲಿ ಎಂದು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ತಿಳಿಸಿದರು.

ಇಡಿ ಜಗತ್ತು ಹಾಗೂ ಅನುಭವಿ ಆಟಗಾರರ ನಡುವೆ ಹೇಗೆ ಆಡಬೇಕೆಂದು ತಿಳಿದುಕೊಂಡಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದರು ಹಾಗೆಯೆ ಕ್ರಿಕೆಟ್ ದಿಗ್ಗಜರಾದ ಜಿ.ಆರ್. ವಿಶ್ವನಾಥ್ ಅವರು ದೇವದತ್ತ್ ಪಡಿಕ್ಕಲ್ ಅವರ ಬಗೆಗೆ ಮೆಚ್ಚುಗೆಯ ಮಾತನಾಡಿದ್ದಾರೆ ಎಂದು ಸಹ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಗುಂಡಪ್ಪ ವಿಶ್ವನಾಥ್ ಅವರು ಒಬ್ಬ ಕ್ರಿಕೆಟಿಗನ ಬಗ್ಗೆ ಮಾತನಾಡುತ್ತಾರೆ ಎಂದರೆ ವಿಷೇಶ. ಅದರಲ್ಲೂ ಒಬ್ಬ ಯವ ಕ್ರಿಕೆಟಿಗನ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ ಎಂದರೆ ಅವನು ಒಬ್ಬ ಉತ್ತಮ ಆಟಗಾರನಾಗಿರಬೇಕು. ಯಾಕೆಂದರೆ ಗುಂಡಪ್ಪ ವಿಶ್ವನಾಥ್ ಅವರು ರಾಹುಲ್ ದ್ರಾವಿಡ್ ಹಾಗೂ ಕೆ.ಎಲ್. ರಾಹುಲ್ ಅವರ ಬಗ್ಗೆಯೂ ಮಾತನಾಡಿದ್ದರು. ಅವರು ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನದೊಂದುಗೆ ಹೆಸರು ಮಾಡಿದ್ದಾರೆ‌. ಇಂದು ದೇವದತ್ತ್ ಪಡಿಕ್ಕಲ್ ಅವರ ಬಗ್ಗೆಯೂ ಮಾತನಾಡಿದ್ದಾರೆ ಅಂದಾಗ ಈ ಯುವಕನು ಯಶಸ್ಸು ಕಾಣುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ದೇವದತ್ತ್ ಪಡಿಕ್ಕಲ್ ಹುಟ್ಟಿದ್ದು ಕೇರಳದಲ್ಲಿ ಬೇಳೆದಿದ್ದು ಹೈದರಾಬಾದ್ ನಲ್ಲಿ. ಆದರೆ ಸ್ಪಷ್ಟವಾಗಿ ಕನ್ನಡ ಮಾತನಾಡುವ ಪಡಿಕ್ಕಲ್ ಭವಿಷ್ಯ ರೂಪಿತವಾಗಿದ್ದು ಮಾತ್ರ ಬೆಂಗಳೂರಿನಲ್ಲಿ. ಎರಡು ಪಂದ್ಯದಲ್ಲಿ ಅರ್ಧ ಶತಕವನ್ನು ದಾಖಲಿಸಿದ ಪಡಿಕ್ಕಲ್ ತನ್ನ ಪ್ರತಿಭೆ ತೋರಿದ್ದಾನೆ. ಆದಷ್ಟು ಬೇಗ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ. ಯುವಕರು ತಮ್ಮ ಪ್ರತಿಭೆಯ ಮೇಲೆ ಗಮನ ಹರಿಸಿ, ಅದನ್ನೆ ಗುರಿಯಾಗಿಸಿಕೊಂಡು ಮುನ್ನೆಡೆದರೆ ತಮ್ಮ ಗುರಿ ಸಾಧಿಸಬಹುದು ಎಂಬುದಕ್ಕೆ ದೇವದತ್ತ್ ಪಡಿಕ್ಕಲ್ ಒಂದು ಉದಾಹರಣೆಯಾಗಿದ್ದಾರೆ. ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸೊಣ.

Leave a Comment

error: Content is protected !!