ಕೆಮ್ಮು, ನೆಗಡಿ, ಜ್ವರದಿಂದ ಮುಕ್ತಿ ನೀಡುವ ಕಷಾಯ

ಮಳೆಗಾಲ ಹಾಗೂ ಚಳಿಗಾಲದಲ್ಲಿ ಶೀತ ಕೆಮ್ಮು , ನೆಗಡಿ ಹೆಚ್ಚಾಗಿ ಬರುತ್ತವೆ.ಇನ್ನು ಈ ಸಾಮಾನ್ಯ ರೋಗಗಳು ದೊಡ್ಡವರಿಂ ಹಿಡಿದು ಚಿಕ್ಕವರಲ್ಲಿ ಕಂಡುಬರುತ್ತದೆ. ಇವುಗಳಿಂದ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ , ಊಟ ಮಾಡುವಾಗ ಗಂಟಲಿನಲ್ಲಿ ತುಂಬಾನೆ ನೋವು ಕಾಣಿಸಿಕೊಳ್ಳುತ್ತೆ.

ಇನ್ನು ಮಕ್ಕಳಿಗೆ ಶೀತ, ಕೆಮ್ಮು ಭಾಧಿಸಿದರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತವೆ. ಈ ಮೆಡಿಸಿನ್ ಬಳಸೋದಕ್ಕಿಂತ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಮನೆಮದ್ದುಗಳನ್ನು ತಯಾರಿಸಬಹುದು. ಮನೆಯಲ್ಲಿಯೇ ಒಂದು ಟಾನಿಕ್ ತಯಾರಸಿಬಹುದು ಹೇಗೆ ಅನ್ನೋದನ್ನ ತಿಳಿಯೋಣ.

ಒಂದು ಚಿಕ್ಕ ಪಾತ್ರೆಗೆ ಒಂದು ಕ್ಲಾಸ್ ನೀರು ಹಾಕಿ ನಂತರ 7 ರಿಂದ 8 ಕಿಳು ಮೆಣಸು , ಎರಡು ಏಲಕ್ಕಿ, ನಾಲ್ಕು ಲವಂಗ, ಅರ್ದ ಚಮಚ ಒಂಕಾಳಿನ ಪುಡಿ , ನಾಲ್ಕು ತುಳಸಿ ಎಲೆಗಳು, ಅರ್ಧ ಚಮಚ ಅರಿಸಿಣ ಪುಡಿ, ಅರ್ಧ ಚಮಚ ಶುಂಠಿ , ಒಂದು ಚೂರು ಬೆಲ್ಲವನ್ನು ಹಾಕಿ ಐದು ನಿಮಿಷ ಚೆನ್ನಾಗಿ ಕುದಿಸಬೇಕು.ಇದಾದ ನಂತರ ಸೊಸಿಕೊಂಡು ರಸವನ್ನು ತೆಗೆದು ಕಶಾಯದ ರೀತಿಯಲ್ಲಿ ಸೇವಿಸಬೇಕು.

ದೊಡ್ಡವರಾದರೆ ದಿನಕ್ಕೆ ಮೂರು ಬಾರಿ ಈ ಕಷಾಯ ಸೇವಿಸಬಹುದು, ಇನ್ನು ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಈ ಕಶಾಯ ನೀಡಬಹುದು.ಇದರಿಂದ ಶೀತ ನೆಗಡಿ , ಜ್ವರದಿಂದ ಮುಕ್ತಿ ಹೊಂದಬಹುದು.

Leave a Comment

error: Content is protected !!