ಇಂಟರ್ನೆಟ್ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿರೋ ಕಾಫಿನಾಡು ಚಂದುವಿನ ಡಿಮಾಂಡ್ ಹೇಗಿದೆ ನೋಡಿ ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಬಹುದು.. ಇಂದು ಬೀದಿಯಲ್ಲಿ ಬಿದ್ದಿರುವ ಮನುಷ್ಯನು ಕೂಡ ನಾಳೆ ಸಿಂಹಾಸನದ ಮೇಲೆ ಕೂರಬಹುದು. ಇಂಥ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಉತ್ತರ ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು ರಾತ್ರೋರಾತ್ರಿ ತನ್ನ ಹಾಡಿನ ಮೂಲಕ ದೇಶಾದ್ಯಂತ ವೈರಲ್ ಆಗಿದ್ದಳು. ಹಾಗೆ ಕಣ್ ಸನ್ನೆ ಮಾಡುವ ಮೂಲಕ ಚಿತ್ರ ನಟಿಯೊಬ್ಬಳು ಒಂದೇ ರಾತ್ರಿಯಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಪಡೆದುಕೊಂಡಿದ್ದಳು.

ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಬಳಿ ಇವೆ. ಇದೀಗ ನಮ್ಮದೇ ರಾಜ್ಯದ ಕಾಫಿ ನಾಡು ಚಂದು ಎಂಬ ಚಿಕ್ಕಮಗಳೂರಿನ ಯುವಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿ ಮಾಡಿದ್ದಾನೆ. ಕಾಫಿನಾಡು ಚಂದು ಫೇಮಸ್ ಆಗೋಕೆ ಕಾರಣ ಈತನ ವಿಭಿನ್ನ ಶೈಲಿಯ ಹಾಡುಗಳು. ಈತ ವಿಭಿನ್ನವಾಗಿ ಹಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾನೆ. ಕಾಫಿನಾಡು ಚಂದುವಿನ ಹ್ಯಾಪಿ ಬರ್ತ್ ಡೇ ಹಾಡುಗಳು ಕರ್ನಾಟಕದೆಲ್ಲೆಡೆ ಸಿಕ್ಕಾಪಟ್ಟೆ ಫೇಮಸ್.

ಕೆಟ್ಟದಾಗಿ ಹ್ಯಾಪಿ ಬರ್ತಡೆ ಸಾಂಗ್ ಹಾಡಿದರು ಕೂಡ ಈತನ ಹಾಡಿಗೆ ಮಿಲಿಯನ್ಕೆ ಗಟ್ಟಲೆ ವೀಕ್ಷಣೆ ಪಡೆದು ಕೊಳ್ಳುತ್ತೆ. ಹಾಗೆ ಈತ ಕೆಲವೇ ದಿನದಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಪಡೆದಿದ್ದಾನೆ. ಕಾಫಿನಾಡು ಚಂದುವಿನ ಮೂಲ ಕಸುಬು ಆಟೊ ಓಡಿಸುವುದು. ಈತ ಆಟೋ ಡ್ರೈವರ್. ಆಟೋ ಓಡಿಸಿ ದಿನಗೂಲಿ ಮಾಡಿ ಈತ ಜೀವನ ನಡೆಸುತ್ತಾನೆ. ಪ್ರತಿದಿನಕ್ಕೆ ಕಾಫಿನಾಡು ಚಂದು ಆಟೋ ಓಡಿಸಿ 400 ರೂಪಾಯಿಯಿಂದ 500 ರೂಪಾಯಿಯನ್ನು ಸಂಪಾದನೆ ಮಾಡುತ್ತಾನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ಮೇಲೆ ಈತನ ಜೀವನವೇ ಬದಲಾಗಿದೆ.

ಎಲ್ಲಿ ಹೋದರೂ ಕೂಡ ಕಾಫಿನಾಡು ಚಂದು ನನ್ನು ಗುರುತು ಹಿಡಿಯುತ್ತಾರೆ. ಮತ್ತು ಈತನ ಜತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಾಫಿನಾಡು ಚಂದ್ರು ಎಲ್ಲೇ ಹೋದರೂ ಹ್ಯಾಪಿ ಬರ್ತಡೇ ಸಾಂಗ್ಸ್ ಹಾಡೋದಕ್ಕೆ ಹೇಳುತ್ತಾರೆ. ಒಟ್ಟಿನಲ್ಲಿ ಕಾಫಿನಾಡು ಚಂದ್ರು ಎಲ್ಲಿ ಹೋದರೂ ಡಿಮಾಂಡಪ್ಪೋ ಡಿಮಾಂಡು. ಕಾಫಿನಾಡು ಚಂದುವಿಗೆ ಈತನ ಜನಪ್ರಿಯತೆಯೇ ದೊಡ್ಡ ಸಮಸ್ಯೆಯಾಗಿದೆ. ಯಾಕೆಂದರೆ ಇದೀಗ ಕಾಫಿ ನಾಡು ಚಂದುವಿಗೆ ದಿನಕ್ಕೆ 400 ರೂಪಾಯಿ ದುಡಿಯೋಕೆ ಕೂಡ ಸಾಧ್ಯವಾಗ್ತಿಲ್ಲ.

ಸ್ವತಃ ಕಾಫಿನಾಡು ಚಂದು ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾನೆ. ಎಲ್ಲಿ ಹೋದರೂ ಜನರು ಈತನನ್ನು ಮುತ್ತಿಕೊಳ್ಳುತ್ತಾರೆ. ಮತ್ತು ಚಂದುವಿಗೆ ಅವನ ಕೆಲಸ ಮಾಡೋಕೆ ಟೈಂ ಸಿಗ್ತಾ ಇಲ್ಲ ಆಟೊ ಓಡಿಸಿ ಹಣ ಸಂಪಾದನೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ಚಂದು ಹೋಟೆಲ್ ಗೆ ಹೋದರೆ ಅಲ್ಲೂ ಕೂಡ ಜನ ಮುತ್ತಿಗೆ ಹಾಕುತ್ತಾರೆ. ಹಾಗೆ ಆಟೊ ಓಡಿಸುವುದು ಕೂಡ ಜನ ಮುತ್ತಿಗೆ ಹಾಕುತ್ತಾರೆ. ಒಟ್ಟಿನಲ್ಲಿ ಚಂದುವಿಗೆ ವಿಶ್ರಾಂತಿಯಿಂದ ತನ್ನ ಪಾಡಿಗೆ ತಾನು ಕೆಲಸ ಮಾಡೋಕೆ ಜನರು ಬಿಡುತ್ತಿಲ್ಲ. ಈತನ ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ.

ನನಗೆ ಇತ್ತೀಚೆಗೆ ಒಂದು ದಿನ ಹೊಟ್ಟೆ ತುಂಬ ಊಟ ಮಾಡೋಕೆ ಕೂಡಾ ಇಲ್ಲ ಅಷ್ಟೇ ಅಲ್ಲದೆ ನನಗೆ ದಿನಗೂಲಿ ಸಂಪಾದಿಸೋದು ತುಂಬಾ ಕಷ್ಟಕರವಾಗುತ್ತದೆ ಎಂದು ಚಂದು ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾನೆ. ಚಂದುವಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಫ್ಯಾನ್ಸ್ ಇದ್ದರೂ ಕೂಡ ಚಂದುವಿನ ಆರ್ಥಿಕ ಸಮಸ್ಯೆ ಏನೂ ಕಡಿಮೆಯಾಗಿಲ್ಲ. ಜನರು ಚಂದುವಿಗೆ ಅವನ ಪಾಡಿಗೆ ಅವನು ಆಟೊ ಓಡಿಸಿಕೊಂಡು ಜೀವನ ನಡೆಸುವುದಕ್ಕೆ ಸಹಾಯ ಮಾಡಬೇಕು. ಅವನೂ ಒಬ್ಬ ಮನುಷ್ಯ ಅವನಿಗೊಂದು ಜೀವನ ಇದೆ ಎಂಬುದನ್ನು ಮರೆಯಬಾರದು.

Leave a Comment

error: Content is protected !!