ಕೇವಲ ಹತ್ತು ಸಾವಿರ ರೂಪಾಯಿಯಿಂದ ಮೋಟೊ ಬೈಸಿಕಲ್ ಆವಿಷ್ಕರಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ. ಇವನ ಆವಿಷ್ಕಾರವನ್ನು ನೋಡಿ ಶಿಕ್ಷಕರೇ ದಂಗಾದರು
ವಿಜ್ಞಾನದ ಮೇಲಿನ ಆಸಕ್ತಿ ಒಂದಾಗಿ ಚಿತ್ರದುರ್ಗದ ಸಂಪಿಗೆ ದುರ್ಗದ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಒಬ್ಬ ಮೋಟೋ ಬೈಸಿಕಲ್ ತಯಾರಿಸಿದ್ದಾರೆ ಹೆಸರು ಸುಮಂತ್. ಪೆಟ್ರೋಲ್ ಡೀಸೆಲ್ ಇಲ್ಲದೆ ಕೇವಲ ಸೌರ ಶಕ್ತಿ ಹಾಗೂ ವಿದ್ಯುತ್ ಶಕ್ತಿ ಬಳಕೆಯಿಂದ ಇದನ್ನು ಓಡಿಸಬಹುದು ಇದು ಈ ಮೋಟೋ ಬೈಸಿಕಲ್ ನ ವಿಶೇಷತೆ.
೪೦km ಸ್ಪೀಡಿನಲ್ಲಿ ಸುಮಾರು ೬೦km ಮೈಲೇಜ್ ನೀಡುತ್ತದೆ ಜೊತೆಗೆ ಮಾಮೂಲಿ ಸೈಕಲ್ ರೀತಿಯೂ ಪೆಡಲ್ ತಿಳಿಯಬಹುದು ಇದರಿಂದ ಡೈನಮೋ ಚಾರ್ಜ್ ಆಗುತ್ತೆ. ಇದರಿಂದಾಗಿ ಪರಿಸರ ಸ್ನೇಹಿಯಾದ ಈ ಸೈಕಲ್ ವಿಶೇಷವಾಗಿದೆ. ದಿನಕ್ಕೆ ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ಇಟ್ಟರೆ ಫುಲ್ ಚಾರ್ಜ್ ಆಗುತ್ತೆ ವಿದ್ಯುತ್ ಇಂದ ಒಂದು ಘಂಟೆಯಲ್ಲಿ ಚಾರ್ಜ್ ಆಗುತ್ತೆ. ಇತ್ತೀಚೆಗೆ ನಡೆದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಂತ್ ಸೈಕಲ್ ಆವಿಷ್ಕಾರದಿಂದ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದ್ದಾರೆ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ.
ಇದರಲ್ಲಿ ಸಾಮಾನ್ಯ ಬ್ಯಾಟರಿಗಳನ್ನು ಬಳಸಲಾಗಿದೆ. ಸರ್ಕಾರದಿಂದ ಬರುವ ಹಣವನ್ನು ಬಳಸಿಕೊಂಡು ಈ ಮೋಟೋ ಬೈಸಿಕಲ್ ತಯಾರಿಸಲಾಗಿದ್ದು ಒಟ್ಟು ವೆಚ್ಚ ಹತ್ತು ಸಾವಿರ ಆಗಿದೆ. ಸರ್ಕಾರ ಕೊಟ್ಟ ಸೈಕಲ್ ಮತ್ತು ಹತ್ತು ಸಾವಿರ ರೂಪಾಯಿಯಲ್ಲಿ ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿ ಖರೀದಿಸಿ ಈ ಆವಿಷ್ಕಾರ ಮಾಡಲಾಗಿದೆ. ಕರ್ನಾಟಕದ ಮಂಡ್ಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆದಿತ್ತು.
ಹತ್ತು ಸಾವಿರ ರೂಪಾಯಿಯಲ್ಲಿ ಇಂದಿನ ಕಾಲಮಾನಕ್ಕೆ ಬೈಕುಗಳ ಬಿಡಿ ಭಾಗಗಳು ಸಿಗುವುದಿಲ್ಲ ಹೀಗಿರುವಾಗ ಹತ್ತನೇ ತರಗತಿ ಓದುತ್ತಿರುವ ಈ ಹುಡುಗ ಮೋಟೋ ಬೈಸಿಕಲ್ ಆವಿಷ್ಕಾರ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಆ ಹುಡುಗನ ಭವಿಷ್ಯ ಉಜ್ವಲ ಆಗಲಿ ಎಂದು ಹಾರೈಸೋಣ