ಚಾರ್ಲಿ ೭೭೭ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಕುರಿತು ನಟ ಜಗ್ಗೇಶ್ ಹಿಗೇಳಿದ್ಯಾಕೆ?
ಇಂದಿನ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಚಿತ್ರಗಳು ಭರ್ಜರಿಯಾಗಿ ಹಿಟ್ ಆಗಿದ್ದವು ಇತ್ತೀಚೆಗೆ ಪಾನ್ ಇಂಡಿಯಾ ಅಲ್ಲಿ ತುಂಬಾನೇ ಹೆಸರುವಾಸಿ ಹಾಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಆ ಸಿನಿಮಾನೇ ಚಾರ್ಲಿ 777 ದೇಶದಾದ್ಯಂತ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದ್ದು ಸಿನಿಮಾ ವೀಕ್ಷಕರಲ್ಲಿ ಕೂಡ ಒಳ್ಳೆಯ ಭಾವನೆ ಉಂಟು ಮಾಡುವುದರಲ್ಲಿ ಯಶಸ್ವಿಯಾಗಿದೆ
ಮೊದಲ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಆಗಿದ್ದು ಸಿನಿಮಾ 20 ಕೋಟಿ ಗಳಿಕೆ ಮಾಡಿದ್ದು ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ಪಾತ್ರವನ್ನು ಜನರು ಮನಸಾರೆ ಹೊಗಳಿದ್ದಾರೆ
ರಕ್ಷಿತ್ ಶೆಟ್ಟಿ ಅವರು ಉಡುಪಿ ಜಿಲ್ಲೆಯಲ್ಲಿ ಜನಿಸಿದ್ದು ಕಾರ್ಕಳ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ(NMAMIT)ದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದ ನಂತರ, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.
ಇವರು ನಮ್ ಏರಿಯಾ ಅಲ್ಲಿ ಒಂದಿನ , ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಉಳಿದವರು ಕಂಡಂತೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ವಾಸ್ತುಪ್ರಕಾರ ಹಾಗೂ ತಾವೇ ಸ್ವತಃ ನಿರ್ಮಿಸಿದ ಕಿರಿಕ್ ಪಾರ್ಟಿ ಮತ್ತು ಹಾಗೇ ರಿಕ್ಕಿ ಪುಣ್ಯಕೋಟಿ ಅವನೇ ಶ್ರೀಮನ್ ನಾರಾಯಣ ಮುಂತಾದ ಸಿನಿಮಾ ಅಲ್ಲಿ ನಟಿಸಿದ್ದಾರೆ
ರಕ್ಷಿತ್ ಶೆಟ್ಟಿ ಅವರ ಅಭಿನಯ ಎಂದರೆ ಸಾಕು ಜನರಲ್ಲಿ ಕುತೂಹಲ ಮೂಡುವುದು ಸಹಜ ಅವರ ಪ್ರತಿಯೊಂದು ಸಿನಿಮಾ ಕೂಡ ವಿಭಿನ್ನವಾಗಿದ್ದು ಅದಕ್ಕೆ ತಕ್ಕ ಹಾಗೆ ವಿಭಿನ್ನ ಪಾತ್ರ ಮಾಡುವುದು ಅವರ ಶೈಲಿಯಾಗಿದೆ ಚಾರ್ಲಿ ಸಿನಿಮಾ ಸ್ವತಃ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಶ್ರಮ ಹಾಕಿದ್ದು ಅದಕ್ಕೆ ತಕ್ಕ ಫಲ ಕೊಟ್ಟಿದೆ ಹಾಗೂ ಅನೇಕ ಕಡೆಗಳಲ್ಲಿ ಮೊದಲ ಪ್ರೀಮಿಯರ್ ಸಿನಿಮಾ ಆಗಿದ್ದು ದೇಶದ ಎಲ್ಲಾ ಕಡೆ ಒಳ್ಳೆಯ ಗಳಿಕೆ ಹಾಗೂ ಮೆಚ್ಚುಗೆಗೆ ಪಾತ್ರ ಆಗಿದೆ ಈ ಸಿನಿಮಾ ಒಂಥರಾ ಶೈಲಿ ಇದ್ದು ಇಲ್ಲಿ ನಾಯಿ ಅಂದರೆ ತಪ್ಪು ನಿಯತ್ತಿರುವ ಪ್ರಾಣಿ ಇಲ್ಲೇ ನಾಯಕ ಪಾತ್ರ ಹೊಂದಿದ್ದು ನಾಯಿಗೆ ಇರುವ ನಿಯತ್ತು ಮನುಷ್ಯನಿಗೆ ಇಲ್ಲ ಎನ್ನುವುದನ್ನು ಈ ಚಿತ್ರ ನೋಡಿದ ಜನರಲ್ಲಿ ಅಭಿಪ್ರಾಯ ಮೂಡುವುದು
ಚಾರ್ಲಿ ಎನ್ನುವ ಆಕೆಯು ಒಮ್ಮೆ ತನಗೆ ಓಟ ಇಟ್ಟರೆ ಸದಾ ತನ್ನ ಮನೆಯ ಮಾಲೀಕನ ಕಾಯುವನು ಎನ್ನುದರ ಚಿತ್ರಣ ಇದರಲ್ಲಿ ಸಹಜವಾಗಿ ಮೂಡಿ ಬಂದಿದೆ ಸಹಜವಾಗಿ ರಕ್ಷಿತ್ ಶೆಟ್ಟಿ ಅವರು ಅಭಿನಯ ಒಳ್ಳೆಯ ರೀತಿಯಲ್ಲಿ ನಟನೆ ಮಾಡಿದ್ದು ಪ್ರೇಕ್ಷಕರ ಗಮನ ಸೆಳೆದಿದ್ದಾರೆ ಹಾಗೂ ಶ್ವಾನ ಪ್ರಿಯರು ಒಮ್ಮೆ ನೋಡಿದರೆ ಚಾರ್ಲಿ ಅಭಿನಯಕ್ಕೆ ಫಿದಾ ಆಗಿ ಕಣ್ಣೀರು ಇಟ್ಟಿರುತ್ತಾರೆ ಒಂದು ಅದ್ಬುತ ಚಿತ್ರ ಎಂದರೆ ತಪ್ಪಲ್ಲ ಚಾರ್ಲಿ ಕೊನೆಯ ಆಸೆಯನ್ನು ನೆರವೇರಿಸಲು ರಕ್ಷಿತ್ ಅವರು ಪಡುವ ಸಾಹಸ ಕಷ್ಟ ನೋಡಿದರೆ ಎಂಥಹಾ ಸಿನಿ ಪ್ರೇಕ್ಷಕರ ಮನನೊಂದು ಕಣ್ಣೀರು ಇಡುವ ಪ್ರಸಂಗ ಬರುವುದು
ಈ ಸಿನಿಮಾ ಅನ್ನು ಅನೇಕ ಗಣ್ಯರು ಸಿನಿಮಾ ನಟರು ಹಾಗೂ ರಾಜ್ಯದ ಮುಖ್ಯಮಂತ್ರಿ ಅವರು ಕೂಡ ನೋಡಿದ್ದು ಒಳ್ಳೆಯ ಪ್ರಸಂಶೆ ನೀಡಿದ್ದಾರೆ ನವರಸ ನಾಯಕ ಜಗ್ಗೇಶ್ ಅವರು ಕೂಡ ಒಳ್ಳೆಯ ಅಭಿಪ್ರಾಯ ನೀಡಿದ್ದು ರಕ್ಷಿತ್ ಶೆಟ್ಟಿ ಅವರನ್ನು ಹಿಂದಿಯ ಸಿನಿಮಾದ ಅಮೀರ್ ಖಾನ್ ಗೆ ಹೋಲಿಸಿದ್ದಾರೆ ಹಾಗೂ ಸಿನಿಮಾ ನೋಡಿದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಹಾಡಿ ಹೊಗಳಿದ್ದಾರೆ ಮತ್ತು ಒಳ್ಳೆಯ ಸಿನಿಮಾ ಇಂತಹ ಸಿನಿಮಾ ನಮ್ಮ ಚಿತ್ರರಂಗದಲ್ಲಿ ಇನ್ನು ಹೆಚ್ಚೆಚ್ಚು ಬರಲಿ ಎಂದು ಹಾರೈಸಿದರು ಆದಷ್ಟು ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ಹೋಗಿ ನೋಡಿ ಆನಂದಿಸಿ ಕನ್ನಡವನ್ನು ಉಳಿಸಿ ಬೆಳೆಸಿ ಹಾಗೂ ಚಾರ್ಲಿ ಸಿನಿಮಾ ಅನ್ನು ನೋಡದೆ ಇರುವವರು ಒಮ್ಮೆ ಹತ್ತಿರದ ಚಿತ್ರ ಮಂದಿರಕ್ಕೆ ಹೋಗಿ ನೋಡಿ ಎಂದು ಮನವಿಯನ್ನು ಮಾಡಿದ್ದಾರೆ