9 ವರ್ಷಗಳಿಂದ ಕರಿದ ಎಣ್ಣೆಯಿಂದಲೇ ಓಡುತ್ತಿದೆ ಈ ಕಾರ್! ಇದರ ಮೈಲೇಜ್ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ

ಕಾರನ್ನು ಓಡಿಸಬೇಕೆಂದರೆ ಪೆಟ್ರೋಲ್ ಡೀಸೆಲ್ ಅಥವಾ ಗ್ಯಾಸ್ ಅವಶ್ಯಕತೆ ಇರುತ್ತದೆ ಆದರೆ ಇದ್ಯಾವುದೂ ಇಂಧನದ ಅವಶ್ಯಕತೆ ಇಲ್ಲದೆ ಕಾರನ್ನು ಓಡಿಸಬಹುದು ಎಂದು ಬೆಂಗಳೂರಿನ ಮೂಲದ ಅವಿನಾಶ್ ಎಂಬ ಯುವಕ ತೋರಿಸಿಕೊಟ್ಟಿದ್ದಾನೆ. ಅದು ಏನೆಂದರೆ ಕರಿದ ಎಣ್ಣೆ ಯಿಂದ ಕಾರನ್ನು ಚಲಾಯಿಸೋದು ಸಾಧ್ಯ ಎಂಬುದನ್ನು ಈತ ತೋರಿಸಿಕೊಟ್ಟಿದ್ದಾನೆ ಸುಮಾರು 9ವರ್ಷಗಳಿಂದ ಈತ ಕರಿದ ಎಣ್ಣೆಯಿಂದಲೇ ತನ್ನ ಕಾರನ್ನು ಚಲಾಯಿಸುತ್ತಿದ್ದ ಎಂಬ ವಿಷಯ ಕೂಡ ಇದೀಗ ಬೆಳಕಿಗೆ ಬಂದಿದೆ.

ಅವಿನಾಶ್ ನಾರಾಯಣಸ್ವಾಮಿ ಎಂಬ ಬೆಂಗಳೂರಿನ ಮೂಲದ ವ್ಯಕ್ತಿ ಕರಿದ ಎಣ್ಣೆಯನ್ನು ಜೈವಿಕ ಇಂಧನವಾಗಿ ಬದಲಾಯಿಸಿದ್ದಾನೆ. 2013 ನೇ ಇಸವಿಯಿಂದಲೇ ಅವಿನಾಶ್ ಈ ಬದಲಾವಣೆಯನ್ನು ಕಂಡು ಹಿಡಿದಿದ್ದ. ಇದೀಗ ಸುಮಾರು 9ವರ್ಷಗಳು ಕಳೆದ ನಂತರ ಈತನ ಆವಿಷ್ಕಾರ ಬೆಳಕಿಗೆ ಬಂದಿದೆ ಮತ್ತು ಎಲ್ಲೆಡೆ ಇದೀಗ ಅವಿನಾಶ್ ಗೆ ಪ್ರಶಂಸೆಯ ಸುರಿಮಳೆ ಸಿಗುತ್ತಿದೆ. ಹಾಗಿದ್ದರೆ ಕರಿದ ಎಣ್ಣೆಯನ್ನು ಇಂಧನವಾಗಿ ಬದಲಾಯಿಸುವುದು ಹೇಗೆ ಗೊತ್ತಾ

ಕರಿದ ಎಣ್ಣೆಯನ್ನು ಇಂಧನವಾಗಿ ಬದಲಾಯಿಸಬೇಕೆಂದರೆ ನೀವು ಖರೀದಿ ಎಣ್ಣೆಯನ್ನು ಕೆಮಿಕಲ್ ಪ್ರೊಸೆಸ್ ಮಾಡಬೇಕಾಗುತ್ತೆ . ಖರೀದಿ ಎಣ್ಣೆಯಲ್ಲಿರುವ ಫ್ಯಾಟಿ ಆ್ಯಸಿಡ್ ಅಂಶವನ್ನು ತೆಗೆದು ಫ್ಯೂರಿಫಿಕೇಶನ್ ಮಾಡಬೇಕು. ಹಾಗೆ ಕೆಮಿಕಲ್ ಪ್ರೊಸೆಸ್ ಮಾಡಿದ ನಂತರ ಕರಿದ ಎಣ್ಣೆ ಬಯೋಡೀಸೆಲ್ ಆಗಿ ಬದಲಾಗುತ್ತದೆ ಯಾವಾಗ ಕರಿದ ಎಣ್ಣೆ ಬಯೋಡೀಸೆಲ್ ಆಗಿ ಬದಲಾಗಿತ್ತು ಆಗ ನೀವು ನಿಮ್ಮ ಕಾರಿಗೆ ಈ ಎಣ್ಣೆಯನ್ನು ಇಂಧನವಾಗಿ ಬಳಸಬಹುದು ಇದರಿಂದ ನಿಮ್ಮ ಕಾರಿನ ಎಂಜಿನ್ ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ವಿಧಾನವನ್ನು ವಿಜ್ಞಾನಿಗಳು ಪ್ರಯೋಗಿಸಿ ಸಫಲರಾಗಿದ್ದಾರೆ.

ಈ ರೀತಿಯ ವಿಧಾನವನ್ನು ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ವಿಜ್ಞಾನಿಗಳೇ ಸೂಚನೆ ನೀಡಿದ್ದಾರೆ. ಈ ವಿಷಯವನ್ನು ಆಳವಾಗಿ ಅರಿತ ಅವಿನಾಶ್ ತಾನು ಕೂಡ ಈ ವಿಧಾನವನ್ನು ಪ್ರಯತ್ನಿಸಲು ಹೊರಡುತ್ತಾನೆ. 1 ಲೀಟರ್ ಸೀಮೆಎಣ್ಣೆಯನ್ನು ಖರೀದಿ ಮಾಡಿ ನಂತರ ಆರರಿಂದ 7 ಗಂಟೆಗಳ ಕಾಲ ಪುರಿಫಿಕೇಶನ್ ಮತ್ತು ಕೆಮಿಕಲ್ ವಿಧಾನಗಳನ್ನು ಅನುಸರಿಸುತ್ತಾನೆ. ಕೆಲವು ಗಂಟೆಗಳ ಸತತ ಪರಿಶ್ರಮದಿಂದ ಅವಿನಾಶ್ ಯಶಸ್ವಿಯಾಗಿ ಕರಿದ ಎಣ್ಣೆ ಯನ್ನು ಬಯೊಡೀಸೆಲ್ ಆಗಿ ಬದಲಾಯಿಸುತ್ತಾನೆ.

ಆ ದಿನದಿಂದ ಇಲ್ಲಿಯವರೆಗೂ ಕೂಡ ಅವಿನಾಶ್ ಕರಿದ ಎಣ್ಣೆ ಯನ್ನು ಬಯೊಡೀಸೆಲ್ ಆಗಿ ಬದಲಾಯಿಸಿ ತನ್ನ ಕಾರನ್ನು ಓಡಿಸುತ್ತಿದ್ದಾನೆ. 9ವರ್ಷಗಳಿಂದ ಅವಿನಾಶ್ ತನ್ನ ಫೋರ್ಡ್ ಕಾರನ್ನು ಕೋರಿದೆ ಎಣ್ಣೆಯಲ್ಲಿಯೇ ಓಡಿಸುತ್ತಿದ್ದಾನೆ. ಇಲ್ಲಿಯವರೆಗೂ ಸುಮಾರು 2 ಲಕ್ಷ ಕಿಲೋಮೀಟರ್ ಗಳನ್ನು ಅವಿನಾಶ್ ಕರಿದ ಎಣ್ಣೆಯಲ್ಲಿ ಓಡಿಸಿದ್ದಾನೆ. ಅವಿನಾಶ್ ನ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಈ ಕರಿದ ಎಣ್ಣೆಯ ಇಂಧನ ಮೀ ಬೆಸ್ಟ್ ಯಾಕೆಂದರೆ 1ಲೀಟರ್ ಖರೀದಿ ಹೆಣ್ಣಿಗೆ ಸುಮಾರು ಮುಕ್ಕಾಲು ಲೀಟರ್ ಜೈವಿಕ ಇಂಧನ ಬಯೋ ಡೀಸೆಲ್ ದೊರಕುತ್ತೆ.

ಕರಿದ ಎಣ್ಣೆ ಯನ್ನು 1ಲೀ ಲೀಟರ್ ಜೈವಿಕ ಇಂಧನವನ್ನಾಗಿ ಬದಲಾಯಿಸಲು ಸುಮಾರು ಒಂದೂವರೆಯಿಂದ 2ಲೀಟರ್ ಕರಿದ ಎಣ್ಣೆ ಬೇಕಾಗುತ್ತದೆ ಮತ್ತು ಇದರ ಬೆಲೆ ಅರವತ್ತರಿಂದ ಅರವತ್ತೈದು ರೂಪಾಯಿಗಳು ಖರ್ಚಾಗುತ್ತದೆ. ಪೆಟ್ರೋಲ್ ಡೀಸೆಲ್ ಗಳಿಗೆ ಕೊಡುವ ಬೆಲೆಗಿಂತ ಅರ್ಧದಷ್ಟು ಬೆಲೆ ಇದರಲ್ಲಿ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೆ ಕರಿದ ಎಣ್ಣೆ ಯಿಂದ ತಯಾರಿಸಿರುವ ಇಂಧನ ಹದಿನೈದ ರಿಂದ ಇಪ್ಪತ್ತು ಕಿಲೋ ಮೀಟರ್ ಮೈಲೇಜ್ ಕೂಡ ಬರುತ್ತೆ. ಆದರೆ 1ವಿಚಾರವೇನೆಂದರೆ ಎಣ್ಣೆಯನ್ನು ಜೈವಿಕ ಇಂಧನವನ್ನಾಗಿ ಬದಲಾಯಿಸಲು ನಮಗೆ ಸಮಯ ಬೇಕಾಗುತ್ತೆ ಅಷ್ಟೆ.

Leave a Comment

error: Content is protected !!