ಕ್ಯಾಮರದಂತಿರುವ ಈ ಮನೆ ವಿಶೇಷತೆ ಏನು ಗೊತ್ತೇ? ನೋಡಿ

ಪ್ರಪಂಚದಾದ್ಯಂತ ಕೆಲವು ಅಚ್ಚರಿ ಸಂಗತಿಗಳು ನಡೆಯುತ್ತವೆ ಆದರೆ ಅದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇಂಥ ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಪ್ರಪಂಚದಾದ್ಯಂತ ನಡೆಯುವ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ದೇಶದಲ್ಲಿ ಪರಿಸರ ಮಾಲಿನ್ಯ ಪ್ಲಾಸ್ಟಿಕ್ ನಿಂದ ಆಗುತ್ತಿದೆ. ಬೆಂಗಳೂರಿನಲ್ಲಿ ಒಂದು ದಿನಕ್ಕೆ 5,000 ಟನ್ ವೇಸ್ಟ್ ಪ್ರೊಡ್ಯೂಸ್ ಆಗುತ್ತದೆ ಇದರಲ್ಲಿ 25% ಪುನರ್ ಬಳಕೆ ಮಾಡಲಾಗುತ್ತದೆ ಉಳಿದ ಪ್ಲಾಸ್ಟಿಕ್ಕನ್ನು ಸುಟ್ಟು ಹಾಕಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವೇಸ್ಟ್ ಪ್ಲಾಸ್ಟಿಕ್ ಗಳನ್ನು ಬಳಸಿ ರೋಡ್ ಗಳನ್ನು ತಯಾರಿಸಲಾಗುತ್ತಿದೆ ಪ್ಲಾಸ್ಟಿಕ್ ನಿಂದ ಪೊಲಿಬೆಂಡ್ ಎಂಬ ಪೌಡರ್ ಅನ್ನು ಎಕ್ಸಟ್ರಾಕ್ಟ್ ಮಾಡಿ ಬೈಟಮಿನ್ ಎಂಬ ಮಿಕ್ಚರ್ ಜೊತೆ ಸೇರಿಸಿ ರೋಡ್ ತಯಾರಿಸಲಾಗುತ್ತದೆ. ಈ ರೋಡ್ ನೀರನ್ನು ಹೀರಿಕೊಳ್ಳುವುದಿಲ್ಲ ಬಹಳಷ್ಟು ದಿನದವರೆಗೆ ಬಾಳಿಕೆ ಬರುತ್ತದೆ ಪ್ಲಾಸ್ಟಿಕ್ ನಿಂದಲೇ ಬೆಂಗಳೂರಿನಲ್ಲಿ 2,000 ಕಿಲೋಮೀಟರ್ ಉದ್ದದ ರೋಡನ್ನು ನಿರ್ಮಿಸಲಾಗಿದೆ. ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಕುಟುಂಬದವರಿಗೆ ಕೊಡುವ ಬದಲು ತಾನು ಸಾಕಿದ ಬೆಕ್ಕು, ಡ್ರೈವರ್ಸ್ ಗಳಿಗೆ ಬರೆದಿದ್ದಾನೆ. ಬೆಕ್ಕಿಗೆ 66 ಕೋಟಿ ಮೌಲ್ಯದ ಆಸ್ತಿಯನ್ನು ಬರೆದಿದ್ದಾನೆ. ಈ ಬೆಕ್ಕು ವರ್ಲ್ಡ್ ವೆಲ್ತಿಯಸ್ಟ್ ಕ್ಯಾಟ್ ಎಂದು ಗಿನ್ನಿಸ್ ರೆಕಾರ್ಡ್ ಸೇರಿದೆ.

ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ನಾವು ತಿಂದ ಆಹಾರ ಜೀರ್ಣವಾಗಲು ಉಪಯೋಗವಾಗುವ ಆಸಿಡ್ ಇರುತ್ತದೆ ಅದು ಎಷ್ಟು ಡೇಂಜರ್ ಎಂದರೆ ಬ್ಲೇಡನ್ನು ಕೂಡ ಜೀರ್ಣ ಮಾಡುತ್ತದೆ. ಈ ಆಸಿಡ್ ನಮ್ಮ ದೇಹದ ಮೇಲೆ ಬಿದ್ದರೆ ದೇಹ ಸುಟ್ಟು ಹೋಗುತ್ತದೆ. ನಮ್ಮ ಜೀರ್ಣಾಂಗದಲ್ಲಿ ಆಸಿಡ್ ಇದ್ದರೂ ಸುಡದೆ ಇರಲು ಕಾರಣ ಜೀರ್ಣಾಂಗದಲ್ಲಿ ಮ್ಯೂಕಸ್ ಎಂಬ ಲೇಯರ್ ಇರುತ್ತದೆ ಅದು ರಕ್ಷಿಸುತ್ತದೆ. ಅಮೆಜಾನ್ ಕಾಡುಗಳಲ್ಲಿ ವೈಟ್ ಬೆಲ್ಬರ್ಡ್ ಎಂಬ ಪಕ್ಷಿ ಇದೆ. ಇದು ಕೂಗುವಾಗ ಇದರ ಸೌಂಡ್ 125 ಡೆಸಿಬಲ್ ಇರುತ್ತದೆ. ಖಡಕನಾಥ್ ಎಂಬ ಕೋಳಿ ಇದೆ ಇದು ನೋಡಲು ಕಪ್ಪಾಗಿರುತ್ತದೆ ಹಾಗೂ ಇದರ ಮೊಟ್ಟೆಯು ಕಪ್ಪಾಗಿರುತ್ತದೆ, ಇದರ ಮಾಂಸ ಕೂಡ ಕಪ್ಪಾಗಿರುತ್ತದೆ, ಇದರ ಚಿಕನ್ ತಿನ್ನುವುದು ದೇಹಕ್ಕೆ ಒಳ್ಳೆಯದು ಇದು ಒಂದು ಕೆ.ಜಿಗೆ 2-2,500 ರೂಪಾಯಿ ಇರುತ್ತದೆ.

ರವಿ ಹೊಂಗಲ್ ಎಂಬ ಫೋಟೋಗ್ರಾಫರ್ ತನ್ನ ಮನೆಯನ್ನು ಕ್ಯಾಮೆರಾದಂತೆ ನಿರ್ಮಿಸಿಕೊಂಡಿದ್ದಾರೆ ಅಲ್ಲದೆ ತನ್ನ ಮಕ್ಕಳಿಗೆ ಕ್ಯಾಮೆರಾ ಕಂಪನಿ ಹೆಸರನ್ನೇ ಇಟ್ಟಿದ್ದಾರೆ. ಪಾರ್ಲೆ-ಜಿ ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬಿಸ್ಕೆಟ್. ಚೀನಾದಲ್ಲಿ ಒಬ್ಬಳು ಯುವತಿ ಇದ್ದಾಳೆ, ಅವಳು ಬಡಕುಟುಂಬದಿಂದ ಬಂದವಳು, ತಂದೆ-ತಾಯಿಗೆ ವಯಸ್ಸಾಗಿದೆ. ಅವಳಿಗೆ 20 ಜನ ಬಾಯ್ ಫ್ರೆಂಡ್ಸ್ ಇದ್ದಾರೆ, ಅವರಿಗೆ ಹೊಸ ಮೊಬೈಲ್ ಗಳನ್ನು ಕೊಡಿಸಲು ಹೇಳುತ್ತಾಳೆ ಅವರು ಕೊಡಿಸಿದ ಮೊಬೈಲ್ ಗಳನ್ನು ಮಾರಿ 12,00,000 ರೂಪಾಯಿ ಸಂಪಾದಿಸಿ ತಂದೆ-ತಾಯಿಗೆ ಒಂದು ಮನೆಯನ್ನು ಕೊಡಿಸುತ್ತಾಳೆ. ಮುಂಗಾರುಮಳೆ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ 50 ಕೋಟಿ ಸಂಪಾದಿಸಿದ ಚಿತ್ರವಾಗಿದೆ ಅಲ್ಲದೆ ಈ ಚಿತ್ರ ಒಂದು ವರ್ಷಕ್ಕಿಂತ ಹೆಚ್ಚು ಮಲ್ಟಿಫ್ಲೆಕ್ಸ್ ನಲ್ಲಿ ಓಡಿದ ಮೊದಲ ಚಿತ್ರವಾಗಿದೆ.

17ವರ್ಷದ ಒಬ್ಬ ಯುವಕ ತನ್ನ ಸ್ಕೂಟರ್ ಓಡಿಸುವಾಗ ಆಕ್ಸಿಡೆಂಟಾಗಿ ಸಾಯುತ್ತಾನೆ. ಇವನು ಸಾಯುವ ಒಂದು ವರ್ಷದ ಮೊದಲು ಇವನ ಅಣ್ಣ ಸಾಯುತ್ತಾನೆ ಇವನ ಅಣ್ಣನನ್ನು ಗುದ್ದಿದ ಟ್ಯಾಕ್ಸಿ ಇವನನ್ನು ಗುದ್ದಿರುತ್ತದೆ ಅಲ್ಲದೆ ಅಣ್ಣನನ್ನು ಗುದ್ದುವಾಗ ಇದ್ದ ಡ್ರೈವರ್ ನೇ ತಮ್ಮನನ್ನು ಗುದ್ದುತ್ತಾನೆ ಮತ್ತು ಅಣ್ಣ ತಮ್ಮ ಇಬ್ಬರೂ ಸತ್ತಿದ್ದು ಅದೇ ಜಾಗದಲ್ಲಿ ಆಗಿರುತ್ತದೆ. ಅಣ್ಣ ಆಕ್ಸಿಡೆಂಟ್ ಆಗುವಾಗ ಓಡಿಸಿದ್ದು ಅದೇ ಸ್ಕೂಟರ್. ಫಿಲೋಫೋಬಿಯ ಎಂಬ ಸಿಂಡ್ರೋಮ್ ಇರುವವರು ಪ್ರೀತಿಯಲ್ಲಿ ಬೀಳಲು ಭಯ ಪಡುತ್ತಾರಂತೆ. ಒಬ್ಬ ಮಹಿಳೆಯು ಉಳಿದವರಿಗಿಂತ ಹೆಚ್ಚು ಕಣ್ಣಿನ ತೀಕ್ಷ್ಣತೆಯನ್ನು ಹೊಂದಿದ್ದಾಳೆ. ಈಕೆ 1.6 ಕಿ.ಮೀ ದೂರದಲ್ಲಿರುವ ವ್ಯಕ್ತಿಯನ್ನು ಗುರುತಿಸುತ್ತಾಳೆ.

Leave a Comment

error: Content is protected !!