ಮದುವೆಯಾಗಿ ಎರಡೇ ತಿಂಗಳಿಗೆ ಗರ್ಭಿಣಿಯಾದ ಅಲಿಯಾ ಭಟ್. ಬೆಚ್ಚಿ ಬೆರಗಾದ ನೆಟ್ಟಿಗರು
ನಟಿ ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಈಕೆ ಮಹೇಶ್ ಭಟ್ ಎಂಬ ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕನ ಮಗಳು. ಅಲಿಯಾ ಭಟ್ ಅವರು ತಮ್ಮ ಸೌಂದರ್ಯ ಮತ್ತು ನಟನೆ ಎಂದರೆ ಬಾಲಿವುಡ್ ನಲ್ಲಿ ಫೇಮಸ್ ಆಗಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆ ಸುದ್ದಿ ಆಗಾಗ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿತ್ತು ಆದರೆ ಇದೇ ವರ್ಷದ ಏಪ್ರಿಲ್ 24 ರಂದು ಆಲಿಯಾ ಮತ್ತು ರಣಬೀರ್ ಇಬ್ಬರೂ ಸಪ್ತಪದಿ ತುಳಿದಿದ್ದ್ದಾರೆ. ಮತ್ತು ಎಲ್ಲಾ ಗಾಳಿಸುದ್ದಿಗೆ ಬ್ರೇಕ್ ನೀಡಿದರು.
ನಟ ರಣಬೀರ್ ಕಪೂರ್ ಅವರು ಕೂಡ ಬಾಲಿವುಡ್ ನ ಖ್ಯಾತ ನಟ ಇವರು ನೋಡೋಕೆ ತುಂಬಾ ಹ್ಯಾಂಡ್ಸಮ್ ನಟ ಅಷ್ಟೇ ಅಲ್ಲದೆ ನಟನೆಯಲ್ಲೂ ಕೂಡ ಇವರು ಎತ್ತಿದ ಕೈ. ರಣ್ಬೀರ್ ಕಪೂರ್ ಅವರ ತಂದೆ ತಾಯಿ ಕೂಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ರಣಬೀರ್ ಮತ್ತು ಆಲಿಯಾ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದರು ಮತ್ತು ಈ ವಿಷಯವನ್ನು ಇಲ್ಲಿಯೂ ಬಿಚ್ಚುತ್ತಿರಲಿಲ್ಲ. ಆಗಾಗ ರಣಬೀರ್ ಮತ್ತು ಆಲಿಯಾ ಏರ್ ಪೋರ್ಟ್ ನಲ್ಲಿ ಕೈಕೈ ಹಿಡಿದುಕೊಂಡು ಓಡಾಡುವ ಚಿತ್ರವನ್ನು ಕೂಡ ಕಾಣಿಸುತ್ತಿತ್ತು ಹೊರತು ಅಧಿಕೃತವಾಗಿ ಈ ಈ ಪ್ರೇಮಿಗಳ ವಿಷಯ ಎಲ್ಲೂ ಹೊರಬಿದ್ದಿರಲಿಲ್ಲ.
ರಣಬೀರ್ ಮತ್ತು ಆಲಿಯಾ ಇಬ್ಬರು ಮದುವೆಯಾಗಿರುವುದಕ್ಕೆ ಚಿತ್ರರಂಗವಷ್ಟೇ ಅಲ್ಲದೆ ಹಲವಾರು ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ತುಂಬಾ ಸಿಂಪಲ್ಲಾಗಿ ನಡೆದಿತ್ತು. ಕೇವಲ ತಮ್ಮ ಆಪ್ತ ವರ್ಗದವರನ್ನು ಮಾತ್ರ ಮದುವೆಗೆ ಆಮಂತ್ರಿಸಿದ್ದರು. ಮದುವೆಯ ಫೋಟೊಗಳಲ್ಲಿ ಈ ನವಜೋಡಿ ನೋಡೋಕೆ ತುಂಬಾ ಕ್ಯೂಟ್ ಮತ್ತು ಚೆಂದ ಕಾಣುತ್ತಾರೆ. ಇದೀಗ ಆಲಿಯಾ ಮತ್ತು ರಣಬೀರ್ ಹೊಸ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಅಲಿಯಾ ಭಟ್ ಗರ್ಭಿಣಿಯಾಗಿದ್ದಾಳೆ ಸ್ವತಃ ಆಲಿಯಾ ಭಟ್ ತಾನು ಗರ್ಭಿಣಿಯಾಗಿದ್ದೇನೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದ್ದಾಳೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡು ಸ್ಕ್ರೀನ್ ಮೇಲೆ ಕಾಣುವ ತಮ್ಮ ಮಗುವ ಫೋಟೋವೊಂದನ್ನು ಅಲಿಯಾ ಭಟ್ ಹಂಚಿಕೊಂಡಿದ್ದಾರೆ. ಅವರ್ ಬೀಬಿ ಈಸ್ ಕಮಿಂಗ್ ಸೂನ್. ಎಂದು ಕ್ಯಾಪ್ಷನ್ ಹಾಕಿ ದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಸಿಹಿಸುದ್ದಿ ಕೊಟ್ಟಿರುವ ಆಲಿಯಾ ಭಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ ಮತ್ತು ಕೆಲವು ನೆಟ್ಟಿಗರು ಈ ವಿಷಯದ ಕುರಿತಾಗಿ ಬೆರಗಾಗಿರುವುದು ನಿಜ. ಇಷ್ಟು ಬೇಗನೆ ಆಲಿಯಾ ಅಮ್ಮ ಆಗುತ್ತಾಳೆ ಅಂತ ಯಾರೂ ಊಹೆ ಕೂಡ ಮಾಡಿರಲಿಲ್ಲ. ಅಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅವಸರದ ಮದುವೆ ಆಗಿರುವುದು ಕೂಡ ಇದೇ ಕಾರಣಕ್ಕಿರಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
