ಮನೆಯಲ್ಲಿ ನೀವೆ ತಯಾರಿಸಬಹದು ಸುಲಭವಾಗಿ ನೈಸರ್ಗಿಕ ಲಿಪ್ ಬಾಮ್


ಬಿಸಿಲಿನ ತಾಪಕ್ಕೆ ತುಟಿ ಒಣಗೋದು, ಕಪ್ಪಾಗೋದು ಕಂಡು ಬರುತ್ತದೆ.ಇದಕ್ಕೆ ಉಪಯೋಗಕಾರಿಯಾಗಿ ಕೆಲವು ಲಿಪ್ ಬಾಂಬ್ ಸಿಗುತ್ತದೆ ಆದರೆ ಇದರಿಂದ ಯಾವುದೇ ಪ್ರಯೋಜನ ಇಲ್ಲ.ಹಾಗಾಗಿ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ ಲಿಪ್ ಬಾಂಬ್ ತಯಾರಿಸಿ ಕೊಳ್ಳಬಹುದು.ಇದರಿಂದ ನಮ್ಮ ತುಟಿಗಳು ಗುಲಾಬಿ ಬಣ್ಣಕ್ಕೆ ಬರುತ್ತವೆ.

ಈ ಲಿಪ್ ಬಾಂಬ್ ತಯಾರಿಸೋದಕ್ಕೆ ಎರಡೇ ಪದಾರ್ಥಗಳು ಸಾಕು, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಈ ಪದಾರ್ಥಗಳು ಸಿಗುತ್ತದೆ. ಲಿಪ್ ಬಾಂಬ್ ಹೇಗೆ ತಯಾರಿಸೋದು ಅಂತಾ ತಿಳಿದುಕೊಳ್ಳಣ. ಒಂದು ಬೀಟ್ರೋಟ್ ತೆಗೆದುಕೊಂಡು ಅದರ ಸಿಪ್ಪೆಗಳನ್ನು ತೆಗೆದು ಸಣ್ಣ ಸಣ್ಣ ಪೀಸ್ ಗಳಾಗಿ ಕಟ್ ಮಾಡಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಹಾಕಿನೀರು ಹಾಕದೆ ರುಬ್ಬಿಕೊಳ್ಳಿ.

ರುಬ್ಬಿದ ನಂತರ ಅದನ್ನು ಒಂದು ಬೌಲ್ ಗೆ ಸೋಸಿಕೊಂಡು ರಸ ತೆಗೆಯಬೇಕು. ಅ ರಸವನ್ನು ಹಂಚಿನ ಮೇಲೆ ಹಾಕಿ ಕಡಿಮೆ ಉರಿಯಲ್ಲಿ ಕುದಿಸಬೇಕು.ಇದು ಸ್ವಲ್ಪ ಗಟ್ಟಿಯಾಗೋ ವರೆಗೂ ಕುದಿಸಿದರೆ ಸಾಕು.ನಂತರ ಕುದಿಸಿದ ಬೀಟ್ರೋಟ್ ರಸವನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಒಂದು ಚಮಚ ಕರಗಿಸಿ ದ ತುಪ್ಪವನ್ನು ಮಿಶ್ರಣ ಮಾಡಿ ಏರ್ ಟೇಡ್ ಕನ್ ಟೇನರ್ ಗೆ ಹಾಕಿ ಮುಚ್ಚಳದಿಂದ ಮುಚ್ಚಿ ಒಂದು ಗಂಟೆಗಳ ಇಡಿಬೇಕು. ನಂತರ ಅದು ಗಟ್ಟಿಯಾಗುತ್ತದೆ. ಇದನ್ನ ಬಳಸೊದರಿಂದ ನಿಮ್ಮ ತುಟಿಗಳು ನೈಸರ್ಗಿಕ ವಾಗಿ ಅಂದವಾಗಿ ಇರುತ್ತದೆ . ಈ ನೈಸರ್ಗಿಕ ಲಿಪ್ ಬಾಂಬ್ ಅನ್ನು 20 ದಿನಗಳ ವರೆಗೂ ಸ್ಟೋರ್ ಮಾಡಬಹುದಾಗಿದೆ.


Leave A Reply

Your email address will not be published.