ಹುಡುಗಿಯರು ಹುಡುಗರನ್ನು ಇಷ್ಟಪಡ್ತಿದ್ದಾರೆ ಅನ್ನೋ ಮೂರೂ ಸೂಚನೆಗಳಿವು


ಇಂದಿನ ಕಾಲದಲ್ಲಿ ಹುಡುಗರು ಹುಡುಗಿಯರನ್ನ ತಮ್ಮ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳೋಕೆ ಏನೆಲ್ಲಾ ಎಷ್ಟೆಲ್ಲಾ ಪಾಡು ಪಡ್ತಾರೆ ಹುಡುಗೀರು ಹೋಗೋ ಕಡೆ ಎಲ್ಲ ಅವರನ್ನ ಹಿಂಬಾಲಿಸಿಕೊಂಡು ಹೋಗೋದು ಎಲ್ಲ ಮಾಡ್ತಾರೆ. ಆದ್ರೆ ಹುಡುಗಿಯರಿಗೆ ಹುಡುಗರ ಬಗ್ಗೆ ಆಸಕ್ತಿ ಇದ್ಯೋ ಇಲ್ವೋ ಅಂತ ತಿಳ್ಕೊಳ್ಳೋಕೆ ಗೊತ್ತಾಗಲ್ಲ. ನಾವು ಇಂದು ಹುಡುಗಿಯರು ಹುಡುಗರ ಬಗ್ಗೆ ಪ್ರೀತಿ ಹೊಂದಿದ್ದಾರೆ ಅನ್ನೋದನ್ನ ಹೇಗೆ ತಿಳಿಯೋದು ಅನ್ನೋದರ ಬಗ್ಗೆ ತಿಳಿಸಿಕೊಡ್ತೀವಿ.

ಈ ಮೂರು ರೀತಿಯ ಸೂಚನೆಗಳಿಂದ ಹುಡುಗಿಯರು ತಮ್ಮ ಹೃದಯದಿಂದ ಅತಿಯಾಗಿ ಹುಡುಗರನ್ನ ಪ್ರೀತಿ ಮಾಡ್ತಾರೆ ಅಂತ ತಿಳ್ಕೊಂಡು ಹುದು. ಹಾಗಾದ್ರೆ ಆ 3 ಸೂಚನೆಗಳು ಏನು ಅನ್ನೋದನ್ನ ನೋಡೋಣ ಬನ್ನಿ. ಹುಡುಗಿಯರು ನಿಮಗೆ ನೀಡೋ ಮೊದಲನೇ ಸೂಚನೆ ಏನಪ್ಪಾ ಅಂದ್ರೆ ಗಂಟೆ ಗಟ್ಟಲೆ ನಿಮ್ಮ ಜೊತೆ ಮಾತನಾಡುವುದು. ಕೆಲವೊಂದು ಹುಡುಗಿಯರು ಅಥವಾ ಮಹಿಳೆಯರು ಹುಡುಗರ ಜೊತೆ ಮಾತನಾಡುವಾಗ ಹುಡುಗರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಹೌದು ಅಥವಾ ಇಲ್ಲ ಎಂಬ ಎರಡು ಶಬ್ದಗಳಲ್ಲಿ ಮಾತು ಮುಗಿಸುತ್ತಾರೆ.

ಇನ್ನೂ ಕೆಲವು ಹುಡುಗಿಯರು ಹುಡುಗರ ಜೊತೆ ಮಾತನಾಡುತ್ತಾ ಅವರ ಇಷ್ಟ ಕಷ್ಟಗಳನ್ನೆಲ್ಲ ತಿಳಿದುಕೊಳ್ಳುತ್ತಾರೆ. ಹೀಗೆ ಮಾತನಾಡುತ್ತಾ ಗಂತೆಗೆಟ್ಟಲೆ ಸಮಯ ಕಳೆಯುತ್ತಾರೆ ಅದೂ ಮೊಬೈಲ್ ನಲ್ಲಿ ಆಗಿರಬಹುದು ಅಥವಾ ನೇರವಾಗಿ ಮಾತನಾಡುವುದು ಆಗಿರಬಹುದು. ಒಟ್ಟಿನಲ್ಲಿ ಹುಡುಗರ ಜೊತೆ ಒಂದು ಗಂಟೆ ಅಥವಾ ಅದಕ್ಕೂ ಹೆಚ್ಚು ಹೊತ್ತು ನಿಮ್ಮ ಜೊತೆ ಮಾತನಾಡುತ್ತಾರೆ ಅಂದರೆ ಹುಡುಗಿಯರು ಹುಡುಗರ ಬಗ್ಗೆ ಪ್ರೀತಿ ಹೊಂದಿದ್ದಾರೆ ಎಂದು ಸುಲಭವಾಗಿ ತಿಳಿಯಬಹುದು.

ಇನ್ನೂ ಎರಡನೆಯ ಸೂಚನೆ ಏನು ಅಂತ ನೋಡೋಣ. ಎರಡನೇ ಸೂಚನೆ ಏನು ಅಂದ್ರೆ ಹುಡುಗರ ಬಗ್ಗೆ ಹುಡುಗಿಯರಿಗೆ ಇರುವ ಕಾಳಜಿ. ನೀವು ಹಾಗೆ ಸುಮ್ಮನೆ ನನಗೆ ಹುಷಾರಿಲ್ಲ ಜ್ವರ ಬಂದಿದೆ ಅಂತ ಹೇಳಿದ್ರೆ ಕೆಲವು ಹುಡುಗಿಯರು ಓಹ್ ಹೌದಾ ಹಾಸ್ಪಿಟಲ್ ಗೆ ಹೋಗಿ ಬಾ ಅಂತ ಹೇಳಿ ಸುಮ್ನೆ ಆಗ್ತಾರೆ ಆದ್ರೆ ಯಾರು ನಿಜವಾಗ್ಲೂ ಪ್ರೀತಿ ಮಾಡ್ತಾ ಇರ್ತಾರೆ ಅವರು ತೋರಿಸೋ ಕಾಳಜಿನೇ ಬೇರೆ. ಹಾಸ್ಪಿಟಲ್ ಗೆ ಹೋಗಿ ಬಾ ಅಂತ ಹೇಳೋದು ಡಾಕ್ಟರ್ ಸಿಕ್ಕಿದ್ರಾ ಎನ್ ಹೇಳಿದ್ರು ಡಾಕ್ಟರ್? ರೆಪೋರ್ಟ್ ಅಲ್ಲಿ ಎನ್ ಮೆಡಿಸಿನ್ ಕೊಟ್ಟು ಊಟ ಆಯ್ತಾ ಟೈಂ ಟೈಂ ಗೆ ಸರಿಯಾಗಿ ಮೆಡಿಸಿನ್ ತಗೋ ಅಂತ ಎಲ್ಲ ಜಾಸ್ತಿ ಕಾಳಜಿ ಮಾಡ್ತಾರೆ.

ಇನ್ನು ಮೂರನೇ ಹಾಗೂ ಕೊನೆ ಸೂಚನೆ ಏನಪ್ಪಾ ಅಂದ್ರೆ. ಚಿಕ್ಕ ಚಿಕ್ಕ ವಿಷಯಕ್ಕೂ ಹುಡುಗರನ್ನ ಹೊಗಳೋದು. ನೀವು ಏನಾದರೂ ಒಂದು ಟಿ ಶರ್ಟ್ ಹಾಕಿಕೊಂಡು ಕಾಲೇಜ್ ಅಥವಾ ಆಫೀಸ್ ಗೆ ಹೋದರೆ ನಿಮ್ಮನ್ನ ನೋಡಿ ಖುಷಿ ಇಂದ ಇವತ್ತು ನೀನು ತುಂಬಾ ಚೆನ್ನಾಗಿ ಕಾಣಸ್ತಾ ಇದ್ದೀಯ ಈ ಟಿ ಶರ್ಟ್ ನಿಂಗೆ ಚೆನ್ನಾಗಿ ಒಪ್ಪತ್ತೆ ಅಂತ ಎಲ್ಲ ನಿಮ್ಮ ಬಗ್ಗೆ ಹೊಗಳ್ತಾರೆ.

ಬರೀ ನಿಮ್ಮ ಡ್ರೆಸ್ಸಿಂಗ್ ಬಗ್ಗೆ ಅಷ್ಟೇ ಅಲ್ಲ ನಿಮ್ಮ ನಡವಳಿಕೆ ರೀತಿ ನೀತಿ ಮಾತನಾಡುವ ಶೈಲಿ ಎಲ್ಲದರ ಬಗ್ಗೆಯೂ ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಾರೆ. ಈ ಮೂರು ರೀತಿಯ ಸೂಚನೆಗಳು ಅಥವಾ ಸನ್ನೆಗಳು ಯಾವುದೇ ಹುಡುಗಿ ಇಂದ ತಿಳಿದರೆ ಅಂತವರು ನಿಮ್ಮನ್ನ ತುಂಬಾ ಇಷ್ಟ ಪಡ್ತಾ ಇದ್ದಾರೆ ಅಥವಾ ಪ್ರೀತಿ ಮಾಡ್ತಾ ಇದ್ದಾರೆ ಅಂತ ತಿಳಿಯಬಹುದು.


Leave A Reply

Your email address will not be published.