ಕರೋನದಿಂದ ಭಯ ಬೇಡ ಗೆಲ್ಲುವ ಉಪಾಯ ನೋಡಿ

ಕರೋನ ವೈರಸ್ ಎಂಬುದು ಯಾರಿಗೂ ಗೊತ್ತಿಲ್ಲ ಅನ್ನುವ ಹಾಗೆ ಇಲ್ಲ ಈಗ. ಚೀನಾದ ಮೂಲಕ ಜಗತ್ತಿಗೆ ಕಾಲಿಟ್ಟ ಈ ಕರೋನಾ ವೈರಸ್ ಇದೀಗ ತನ್ನ ಕರಾಳ ಹಸ್ತವನ್ನು ಜಗತ್ತಿನ ಎಲ್ಲೆಡೆಗಳಲ್ಲೂ ಚಾಚುತ್ತಾ ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತಲೇ ಇದೆ. ಹೀಗೆ ಕರೋನಾಗೆ ತುತ್ತಾಗಿ ಹುಷಾರಾಗಿ ಬಂದವರು ಕೂಡಾ ಬಹಳಷ್ಟು ಜನರಿದ್ದಾರೆ. ಕರೋನದಿಂದ ಹುಷಾರಾಗಿ ಬಂದಂತಹ ಬೆಂಗಳೂರು ನಗರದ ಮೂರನೆ ಹಂತದ ನಿವಾಸಿ ಆದಂತಹ ರವೀಂದ್ರ ಕಶ್ಯಪ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕರೋನ ಬಗ್ಗೆ ಅವರು ಎನು ಹೇಳುತ್ತಾರೆ ಅನ್ನುವುದನ್ನು ನಾವಿಲ್ಲಿ ನೋಡೋಣ.

ಇವರಿಗೆ ಕರೋನಾ ಬಂದ ದಿನದಿಂದ ಹುಷಾರಾಗುವ ವರೆಗಿನ ಅವಧಿಯ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಕರೋನಾ ಬಂದಾಗ ಏನು ಮಾಡಬೇಕೆಂದು ತಿಳಿಸಿದ್ದಾರೆ. ಹದಿನಾಲ್ಕನೇ ತಾರೀಖಿನಂದು ಅವರಿಗೆ ಕರೋನಾ ಲಕ್ಷಣ ಕಾಣಿಸಿತ್ತು. ತಡ ಮಾಡದೆ ತಮ್ಮ ಡಾಕ್ಟರ್ ಬಳಿ ಹೋಗಿ ಒಂದು ವಾರದ ವರೆಗೂ ರಕ್ತ ತಪಾಸಣೆ ಮಾಡಿದರು ಆದರೆ ಯಾವುದೆ ಉಪಯೋಗ ಇರಲಿಲ್ಲ. ವೈರಸ್ ಇದೆ ಎಂದಿದ್ದರು. ಆರೇಳು ದಿನಗಳು ಪ್ಯಾರಾಸಿಟಮೊಲ್ ಟ್ಯಾಬ್ಲೆಟ್ ನೀಡಲಾಗಿತ್ತು. ಆ ದಿನಗಳಲ್ಲಿ ಇದ್ದಿದ್ದು ಮೈ ಕೈ ನೋವು, ಸುಸ್ತು, ಸ್ವಲ್ಪ ಎದೆ ಉರಿ, ಸಣ್ಣದಾಗಿ ಜ್ವರ ಇತ್ತು ಉಸಿರಾಟದ ತೊಂದರೆ ಇರಲಿಲ್ಲ. ವಾರದ ನಂತರ ವಾಸನೆಯ ಶಕ್ತಿ ಹೋಗಿತ್ತು. ಸ್ವಾಬ್ ಟೆಸ್ಟ್ ಮಾಡಿಸಿದ ಎರಡು ದಿನಕ್ಕೆ ಕರೋನಾ ಬಂದಿದ್ದು ಕನ್ಫರ್ಮ್ ಆಗಿತ್ತು.

ಆರೋಗ್ಯ ಸೇತು ಕಡೆಯಿಂದ ಪೋನ್ ಬಂದಿತ್ತು ಕರೋನಾ ಬಂದಿರುವ ಕುರಿತು ವಿಚಾರಿಸಲು. ಹೊರಗೆ ಹೋಗಬಾರದು ಮನೆಯಲ್ಲಿಯೆ ಇರಿ ಎಂದಿದ್ದರು. ಅಧಿಕಾರಿಗಳ ಮಾತಿನಂತೆ ಮನೆಯಲ್ಲಿಯೆ ಇದ್ದು ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದರು. ಆರೋಗ್ಯ ಸೇತು ಅವರು ಮನೆಗೆ ಬಂದು ಚಿಕಿತ್ಸೆ ಕೊಡುವುದಾಗಿ ತಿಳಿಸಿದ್ದರು. ನಂತರ ವೀರೇಂದ್ರ ಕಶ್ಯಪ್ ಅವರು ಕಿಮ್ಸ್ ಗೆ ಹೋಗಿ ಇ.ಸಿ.ಜಿ. ಹಾಗೂ ಎಕ್ಸರೆ ಮಾಡಿಸಿದ್ದರು.. ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ ಇಲ್ಲ ಹಾಗಾಗಿ ಮನೆಯಲ್ಲಿಯೆ ಚಿಕಿತ್ಸೆ ಪಡೆಯಬಹುದು ಎಂದು ಆರೋಗ್ಯ ಸಚಿವರ ಕಡೆಯಿಂದ ಬಂದಿದ್ದ ಹೆಲ್ತ್ ಬುಲೆಟಿನ್ ಪ್ರಕಾರವೇ ಔಷಧ ನೀಡಿದ್ದರು. ವೀರೇಂದ್ರ ಅವರು ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದು ಆಯುಷ್ ಕಿಟ್ ನ ಔಷಧ ಮಾಡುತ್ತಿದ್ದರು. ದಿನಕ್ಕೆ ಐದು ಬಗೆಯ ಪ್ರಾಣಾಯಾಮ ಮಾಡುತ್ತಿದ್ದರು.

ಕರೋನಾ ಮಾರಣಾಂತಿಕ ಎಂದು ಹೇಳುತ್ತಾರೆ ಆದರೆ ದೇಹದಲ್ಲಿ ಮೊದಲಿಂದ ಏನಾದರೂ ತೊಂದರೆ ಇದ್ದರೆ ಮಾರಣಾಂತಿಕ ಆಗುತ್ತದೆ. ಇಲ್ಲವಾದಲ್ಲಿ ತೊಂದರೆ ಏನಿಲ್ಲ. ಮೊದಲು ನಮಗೆ ಬೇಕಿರುವುದು ಧೈರ್ಯ ಹಾಗೂಮನೆಯವರ ಬೆಂಬಲ. ಕರೋನಾ ಬಂದಾಗ ಭಯ ಪಡದೆ ಆಯುರ್ವೇದದ ಮೇಲೆ ನಂಬಿಕೆ ಇದ್ದಲಿ ಆಯುರ್ವೇದ, ಇಲ್ಲ ಅಲೊಪತಿ ಮೇಲೆ ನಂಬಿದ್ದಲ್ಲಿ ಅಲೊಪತಿಯ ಚಿಕಿತ್ಸೆ ಪಡೆಯಬಹುದು. ಆಯುರ್ವೇದದಲ್ಲಿ ಅಮೃತ ಬಳ್ಳಿ, ಶುಂಠಿ, ಭಜೆ, ನೆಲನೆಲ್ಲಿ, ಅರಿಶಿನ ಇವೆಲ್ಲವೂ ಬರುತ್ತದೆ. ಇವುಗಳಿಂದ ದೇಹಕ್ಕೆ ಯಾವುದೇ ಅತಿರಿಕ್ತ ಅಪಾಯ ಆಗುವುದಿಲ್ಲ. ಹಾಗೆ ಪ್ರಾಣಾಯಾಮ ಮಾಡಿ. ಬಿಸಿ ಬಿಸಿ ಆಹಾರ, ಹಣ್ಣು ಹಂಪಲು, ತರಕಾರಿ ತಿನ್ನಬೇಕು. ಯಾವುದೆ ಆಹಾರ ತೆಗೆದು ಕೊಂಡರು ಬಿಸಿಯಾಗಿರುವುದೆ ಸೇವಿಸಿ. ಅಕ್ಕ ಪಕ್ಕದ ಮನೆಯಲ್ಲಿ, ಸ್ನೇಹಿತರಿಗೆ ಕರೋನಾ ಬಂದ್ದಿದ್ದರು ಅವರನ್ನು ದೂರವಿಡದೆ ಅವರಿಗೆ ಕಾಲ್ ಮಾಡಿ ಸಾಂತ್ವನ ನೀಡಿ. ಅವರಿಗೆ ಭರವಸೆ ನೀಡಿ. ಕರೋನ ಬಂದಿದೆ ಎಂದು ಅದನ್ನು ಮುಚ್ಚಿಡುವ ಅವಶ್ಯಕತೆ ಇಲ್ಲ. ಆದಷ್ಟು ಕರೋನಾ ಇರುವ ಗುಣಲಕ್ಷಣಗಳು ಕಂಡು ಬಂದರೆ ಬೇರೆಯವರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಡಿ. ಇದು ಎಲ್ಲರ ನೈತಿಕ ಹೊಣೆಯಾಗಿದೆ.

Leave a Comment

error: Content is protected !!