ಏಷ್ಯಾದಲ್ಲೇ ಅತಿ ಸುಂದರ ಹಾಗೂ ಸ್ವಚ್ಛತೆ ಹೊಂದಿರುವ ಗ್ರಾಮ ಎಲ್ಲಿದೆ ಗೊತ್ತೇ
ಪ್ರತಿ ಹಳ್ಳಿಗಳು ಗ್ರಾಮ ನಗರಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ ಆದ್ರೆ ಕೆಲವು ಸ್ಥಳಗಳು ತನ್ನ ವಿಶೇಷತೆಯಿಂದಲೇ ಹೆಚ್ಚು ಪ್ರಸಿದ್ದಿ ಹಾಗೂ ಜನಪ್ರಿಯತೆಯನ್ನು ಗಳಿಸುತ್ತವೆ ಅದೇ ನಿಟ್ಟಿನಲ್ಲಿ ಈ ಗ್ರಾಮವು ಕೂಡ ಒಂದು ಇಲ್ಲಿ ಅತಿ ಸ್ವಚ್ಛತೆ ಹಾಗೂ ಸುಂದರತೆಯನ್ನು ಕಾಣಬಹದು, ಅಷ್ಟಕ್ಕೂ ಈ ಹಳ್ಳಿ ಯಾವುದು ಇದು ಎಲ್ಲಿದೆ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ.
ಸುಂದರತೆ ಹಾಗೂ ಸ್ವಚ್ಛತೆಯನ್ನು ಹೊಂದಿರುವಂತ ಈ ಹಳ್ಳಿ ಇರೋದು ಬೇರೆ ಯಾವುದು ದೇಶದಲ್ಲಿ ಅಲ್ಲ ನಮ್ಮ ಭಾರತ ದೇಶದಲ್ಲೇ ಹೌದು ಸುಮಾರು ೧೭ ವರ್ಷಗಳ ಹಿಂದೆಯೇ ಅಂದರೆ 2003 ರಲ್ಲೇ ಈ ಹಳ್ಳಿ ಸ್ವಚ್ಛತೆ ಹೊಂದಿರುವಂತ ಗ್ರಾಮ ಎಂಬುದಾಗಿ ಗುರುತಿಸಿ ಕೊಂಡಿದೆ ಈ ಗ್ರಾಮಕ್ಕೆ ಮಾವ್ಲಿನ್‌ನೊಂಗ್ ಎಂದು ಕರೆಯುತ್ತಾರೆ ಅಷ್ಟೇ ಅಲ್ಲದೆ ಈ ಹಳ್ಳಿಗೆ ದೇವರ ಸ್ವಂತ ತೋಟ ಎಂಬುದಾಗಿ ಕೂಡ ಕರೆಯಲಾಗುತ್ತದೆ.
ಈ ವಿಶೇಷತೆ ಹೊಂದಿರುವಂತ ಗ್ರಾಮ ಇರೋದಾದ್ರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ 90 ಕಿ.ಮೀ ದೂರದಲ್ಲಿ ಮಾವ್ಲಿನ್‌ನೊಂಗ್ ಎಂಬ ಗ್ರಾಮ ಸಿಗುತ್ತದೆ. ಇಲ್ಲಿ ಸತತ ನೂರು ಮನೆಗಳನ್ನು ಹೊಂದಿರುವಂತ ಗ್ರಾಮವಾಗಿದ್ದು ಇಲ್ಲಿನ ಸಾಕ್ಷರತೆ ಪ್ರಮಾಣ ೧೦೦% ಇದೆ ಈ ಹಳ್ಳಿಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇದರ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು.

ಇನ್ನು ಈ ಗ್ರಾಮ ಯಾವೆಲ್ಲ ವಿಶೇಷತೆಯನ್ನ ಹೊಂದಿದೆ ಅನ್ನೋದನ್ನ ತಿಳಿಯುವುದಾದರೆ ಈ ಗ್ರಾಮದಲ್ಲಿ ಎಲ್ಲಿ ಹುಡುಕಿದರೂ ಸಹ ಗಲೀಜು ಅನ್ನೋದು ಕಾಣೋದಿಲ್ಲ ಒಂದು ವೆಸ್ಟ್ ಪೇಪರ್ ಕೂಡ ರಸ್ತೆ ಬದಿಯಲ್ಲಿ ನೋಡಲು ಸಿಗೋದಿಲ್ಲ, ಪ್ರತಿ ಮನೆಗಳು ಸಹ ಕ್ರಿಯಾತ್ಮಕ ಶೌಚಾಲಯ ಸೌಲಭ್ಯವನ್ನು ಕಲ್ಪಿಸಿ ಕೊಂಡಿದೆ. ಮತ್ತೊಂದು ವಿಶೇಷತೆ ಏನು ಅಂದ್ರೆ ಈ ಗ್ರಾಮದ ಎಲೆಗಳು ಸಹ ಕೆಳಗೆ ಬೆಳದಂತೆ ಮರಗಳಿಗೆ ಬುಟ್ಟಿಯನ್ನು ಕಟ್ಟಿದ್ದಾರೆ ಎಲೆಗಳು ನೇರವಾಗಿ ಆ ಬುಟ್ಟಿಯಲ್ಲಿ ಬೀಳುವಂತೆ ಮಾಡಿದ್ದಾರೆ. ಇನ್ನು ಪ್ರತಿದಿನ ಗ್ರಾಮದ ಜನರೇ ರಸ್ತೆಯನ್ನು ಗುಡಿಸುತ್ತಾರೆ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ.
ಈ ಗ್ರಾಮದಲ್ಲಿ ಧೂಮಪಾನ ನಿಷೇದ ಮಾಡಲಾಗಿದ್ದು ಇಲ್ಲಿ ವಿವಿಧ ಬಗೆಯ ಸಸ್ಯಾಹಾರ ಹಾಗೂ ಮಾಂಸಾಹಾರ ಪದಾರ್ಥಗಳನ್ನು ಪಡೆಯಬಹದು ನಿಜಕ್ಕೂ ಇವೇನಾದರೂ ಈ ಗ್ರಾಮಕ್ಕೆ ಒಮ್ಮೆ ಭೇಟಿನೀಡಿದರೆ ಮರಳು ವಾಪಸ್ ಬರಲು ಮನಸ್ಸೇ ಆಗೋದಿಲ್ಲ. ಒಳ್ಳೆಯ ಮನಸ್ಸುಗಳು ಮನುಷ್ಯರು ಒಳ್ಳೆಯ ವಾತಾವರಣ ಇದ್ರೆ ಸ್ವರ್ಗವೇ ಧರೆಗಿಳಿದಂತೆ ಅಲ್ಲವೇ. ಅದೇನೇ ಇರಲಿ ನಾವುಗಳು ವಸ ಮಾಡುವಂತ ಸ್ಥಳ ಮನೆ ಗ್ರಾಮ ಯಾವುದೇ ಇರಲಿ ನಮ್ಮ ಕೈಲಾಗದಷ್ಟು ಸ್ವಚ್ಛತೆಯನ್ನು ಕಾಪಾಡುವ ಪ್ರಯತ್ನ ಮಾಡೋಣ ಇದರಿಂದ ಒಳ್ಳೆಯ ಅರೋಗ್ಯ ಒಳ್ಳೆಯ ವಾತಾವರಣ ಕೂಡ ನಿರ್ಮಾಣವಾಗುತ್ತದೆ.