ಕೊನೆಗೂ ಅಮೃತಾ ನಾಯ್ಡು ಮುಖದಲ್ಲಿ ಮೂಡಿದೆ ಮಂದಹಾಸ: ಮಗ ಹುಟ್ಟಿದ ಸಂತೋಷ ಹಂಚಿಕೊಂಡ ಅಮೃತಾ ನಾಯ್ಡು. ಕನ್ನಡ ಕಿರತೆರೆಯ ಧಾರಾವಾಹಿಗಳ ಮೂಲಕ ಅಮೃತಾ ನಾಯ್ಡು ಅವರು ಚಿರಪರಿಚಿತ. ಇವರಿಗೆ ಸಾಕಷ್ಟು ಕನ್ನಡ ಕಿರುತರೆ ಧಾರವಾಹಿಗಳಲ್ಲಿ ನಟಿಸಿರುವ ಅಮೃತ ನಾಯ್ಡು ಅವರು ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಅವರ ಜೀವನದಲ್ಲಿ ನಡೆದ ಒಂದು ದುರ್ಘಟನೆಯಿಂದ ಅವರು ಚೇತರಿಸಿಕೊಳ್ಳುವುದಕ್ಕೆ ಆಗಿರಲಿಲ್ಲ. ಆದರೆ ಸುಖ ದುಃಖ ಯಾವುದು ಶಾಶ್ವತವಲ್ಲ ಎನ್ನುವಂತೆ, ಅಮೃತ ಅವರ ಜೀವನದಲ್ಲಿಯೂ ಕತ್ತಲೆ ಕಳೆದು ಬೆಳಕು ಬೆಳಕು ಮೂಡಿದೆ.

ಹೌದು ನಟಿ ಅಮೃತ ನಾಯ್ಡು ಈಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಜುಲೈ 2ನೇ ತಾರೀಖಿನಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಮೃತ ನಾಯ್ಡು ಗಂಡು ಮಗುವಿಗೆ ಜನ್ಮವನ್ನು ನೀಡಿದರು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ. ಜೊತೆಗೆ ಅಮೃತ ನಾಯ್ಡು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಈ ಸಂತೋಷದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ಅಮೃತ ನಾಯ್ಡು ಹಾಗೂ ರೂಪೇಶ್ ದಂಪತಿಗಳಿಗೆ ಇದು ಎಲ್ಲಾ ದಂಪತಿಗಳಿಗಿಂತ ಸ್ಪೆಷಲ್. ಯಾಕಂದ್ರೆ ಇದೇ ಮಗು ವಿಷಯಕ್ಕೆ ಅಮೃತ ನಾಯ್ಡು ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಅಮೃತ ನಾಯ್ಡು ಅವರ ಮೊದಲ ಮಗು ಅನಾರೋಗ್ಯದ ಕಾರಣದಿಂದ ತೀರಿಕೊಂಡಿತ್ತು. ನಂತರ ಎರಡನೇ ಮಗುವಾಗಿ ಸಮನ್ವಿ ಹುಟ್ಟಿದಳು. ಅಮೃತ ನಾಯ್ಡು ಅವರ ಮುದ್ದಾದ ಮಗಳು ಸಮನ್ವಿ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಆದರೆ ದುರದೃಷ್ಟವಶಾತ್ ಕಳೆದ ಕೆಲವು ತಿಂಗಳ ಹಿಂದೆ ಅಮೃತ ನಾಯ್ಡು ಅವರ ಮಗಳು ಸಮನ್ವಿ ರಸ್ತೆ ಆಗ ಅಪಘಾತದಲ್ಲಿ ಮೃ’ತಪಟ್ಟಳು. ಈ ಘಟನೆ ನಡೆದಿತ್ತು ಬೆಂಗಳೂರಿನ ಕೋಣನಕುಂಟೆ ಸಮೀಪ. ಮಗಳ ಜೊತೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಅಮೃತ ನಾಯ್ಡು ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದರೂ ಮಗಳು ಸಮನ್ವಿ ಈ ಅಪಘಾತದಲ್ಲಿ ಕೊನೆ ಯುಸಿರೆಳೆದಿದ್ದಾಳೆ.

ಇನ್ನು ಈ ಸಮಯದಲ್ಲಿ ಅಮೃತ ನಾಯ್ಡು ಅವರು ಗರ್ಭಿಣಿಯಾಗಿದ್ದರು. ಹಾಗಾಗಿ ಮಗಳನ್ನು ಕಳೆದುಕೊಂಡ ಎಷ್ಟೇ ನೋವಿದ್ದರೂ ಮತ್ತೆ ತನ್ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಾಳೆ ಎಂಬ ನಂಬಿಕೆಯಿಂದ ಹೊಟ್ಟೆಯಲ್ಲಿರುವ ಮಗುವನ್ನು ಆರೋಗ್ಯಕರವಾಗಿ ನೋಡಿಕೊಂಡಿದ್ದರು. ಅಮೃತ ನಾಯ್ಡು ಎರಡು ಮಕ್ಕಳನ್ನು ಕಳೆದುಕೊಂಡು ಅನುಭವಿಸಿದ ನೋವು ಯಾರಿಗೂ ಬೇಡ. ಆದರೆ ಇದೀಗ ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ಅಮೃತ ನಾಯ್ಡು ರೂಪೇಶ್ ದಂಪತಿಗಳು ಹಾಗೂ ಕುಟುಂಬದವರು ಈ ಸಂತೋಷವನ್ನು ಅನುಭವಿಸುತ್ತಿದ್ದಾರೆ.

ನಟಿ ಅಮೃತ ನಾಯ್ಡು ಇದುವರೆಗೆ ಸುಮಾರು 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗಂಗೋತ್ರಿ ಪುಣ್ಯಕೋಟಿ ಕುಸುಮಾಂಜಲಿ ಗೀತಾ ಮನೆಯೆಂದು ಮೂರು ಬಾಗಿಲು, ಅಮೃತವರ್ಷಿಣಿ ನಾಗಿಣಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ನೆಚ್ಚಿನ ಪೋಷಕ ನಟಿ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ನಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ಮಗಳು ಸಮನ್ವ ಜೊತೆ ಅಮೃತ ನಾಯ್ಡು ಭಾಗವಹಿಸಿದ್ದರು.

By admin

Leave a Reply

Your email address will not be published.