ಎಲ್ಲರಿಗಿಂತ ಸೌಂದರ್ಯವಾಗಿ ಕಾಣಬೇಕಾ? ಹಾಲಿನಂತ ತ್ವಚೆಗಾಗಿ ಇಲ್ಲಿದೆ ಮನೆಮದ್ದು

ಎಲ್ಲರಿಗೂ ಚೆನ್ನಾಗಿ ಕಾಣಬೇಕು ಎಂಬ ಆಸೆ ಇರುವುದು ಸಹಜ. ಹಾಗೆಯೇ ಮುಖ ಚೆನ್ನಾಗಿ ಇರಬೇಕು ಎಂಬ ಆಸೆಯೂ ಕೂಡ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಆಸೆ ಬಹಳ. ಮುಖಕ್ಕೆ ಕ್ರೀಮ್ ಗಳು, ಪೌಡರ್ ಗಳನ್ನು ಹಚ್ಚುತ್ತಾರೆ. ಹಾಗೆಯೇ ಪಾರ್ಟಿಗೆ ಅಥವಾ ಯಾವುದಾದರೂ ದೊಡ್ಡ ಸಮಾರಂಭಗಳಿಗೆ ಹೋಗುವಾಗ ವಿಶೇಷವಾಗಿ ತಯಾರಿ ಆಗುತ್ತಾರೆ. ವಿಶೇಷವಾಗಿ ತಯಾರಿ ನಡೆಸಿಕೊಳ್ಳಲು ಮೂರು ಸಲಹೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಳಿ ಬಣ್ಣದವರು ಮಾತ್ರ ಸುಂದರವಾಗಿ ಇರುವುದಿಲ್ಲ. ಕಪ್ಪು ಇರುವವರು ಸಹ ಸುಂದರವಾಗಿ ಇರುತ್ತಾರೆ. ಕೃಷ್ಣನ ಬಣ್ಣ ಕಪ್ಪು ಆಗಿತ್ತು. ದೇಹಕ್ಕೆ ಸರಿಯಾದ ಎತ್ತರ, ತೂಕ ಮತ್ತು ಆಕರ್ಷಕ ಚರ್ಮ, ಕಪ್ಪಾದ ಕೂದಲು ಇದ್ದರೆ ಯಾವುದೇ ವ್ಯಕ್ತಿಯಾದರೂ ಸುಂದರವಾಗಿ ಕಾಣುತ್ತಾರೆ. ಯಾವುದಾದರೂ ಪಾರ್ಟಿಗೆ ಹೋಗುವಾಗ ಸ್ವಲ್ಪ ಹೆಚ್ಚಿನ ಸಮಯವನ್ನು ತಯಾರಿ ಆಗುವುದರಲ್ಲಿ ಮತ್ತು ಮೇಕಪ್ ಮಾಡಿಕೊಳ್ಳುವುದರಲ್ಲಿ ಕಳೆಯುತ್ತಾರೆ. ಈಗಿನ ಮೇಕಪ್ ಬಗ್ಗೆ ಹೇಳುವುದಾದರೆ ಎಂತಹ ಕಪ್ಪು ಬಣ್ಣದ ಮುಖವನ್ನು ಬಿಳಿ ಬಣ್ಣ ಕಾಣುವಂತೆ ಮಾಡುವಷ್ಟು ಆಧುನಿಕತೆ ಹೊಂದಿದೆ.

ಆದರೆ ಮಾರುಕಟ್ಟೆಯಲ್ಲಿ ಹಣ ಕೊಟ್ಟು ತರುವ ಮೇಕಪ್ ಕಿಟ್ ಗಳು ಮುಖದ ಚರ್ಮಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ಮನೆಮದ್ದನ್ನು ಮಾಡಬಹುದು. ಅಲೋವೆರಾ ಗಿಡ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಕಂಡು ಬರುತ್ತದೆ. ಇದಕ್ಕೆ ವಿಶೇಷವಾದ ಆರೈಕೆ ಏನೂ ಬೇಕಾಗಿಲ್ಲ. ಪಾರ್ಟಿಗೆ ಹೋಗುವ ಹಿಂದಿನ ದಿನ ರಾತ್ರಿ ಅಲೋವೆರಾಜೆಲ್ ನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಅದನ್ನು ಒಂದು ಗಂಟೆಯ ಕಾಲ ಹಾಗೆಯೇ ಬಿಡಬೇಕು.

ರಾತ್ರಿ ಹಚ್ಚಿ ಬೆಳಿಗೆಯ ತನಕ ಹಾಗೆಯೇ ಬಿಡಬಾರದು. ಏಕೆಂದರೆ ಶೀತದ ದೇಹ ಪ್ರಕೃತಿಯವರಿಗೆ ಮುಖದಲ್ಲಿ ಬಾಹು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ಗಂಟೆಗೂ ಹೆಚ್ಚಿನ ಸಮಯ ಅಲೋವೆರಾ ಹಚ್ಚಿ ಬಿಡಬಾರದು. ಇದನ್ನು ಮಾಡಲು ಸಾಧ್ಯವಿಲ್ಲ ಎಂದಾದಲ್ಲಿ ಅರಿಶಿನವನ್ನು ತೆಗೆದುಕೊಂಡು ಸಾಣೆಕಲ್ಲಿನ ಮೇಲೆ ತೇಯ್ದು ಅದನ್ನು ತೆಗೆದುಕೊಂಡು ಹಾಗೆಯೇ ಶ್ರೀಗಂಧವನ್ನು ತೆಗೆದುಕೊಂಡು ಅದನ್ನು ಸಹ ತೇಯ್ದು ಅದನ್ನು ತೆಗೆದು ಅರಿಶಿನ ಮತ್ತು ಶ್ರೀಗಂಧವನ್ನು ಸೇರಿಸಿ ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ನೀರನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು. ಇದನ್ನು ಒಂದು ಗಂಟೆಯ ಕಾಲ ಹಚ್ಚಿ ಮುಖ ತೊಳೆದು ರಾತ್ರಿ ಮಲಗಬೇಕು.

ಆದರೆ ತುಟಿಗೆ ಹಚ್ಚಬಾರದು. ದಾಳಿಂಬೆ ಗಿಡದ ಹೂವನ್ನು ತೆಗೆದುಕೊಂಡು ಅದನ್ನು ತುಟಿಗೆ ಹಚ್ಚಬೇಕು. ಇದರಿಂದ ತುಟಿ ಕೆಂಪಾಗುತ್ತದೆ. ಲಿಫ್ ಸ್ಟಿಕ್ ಹಚ್ಚುವ ಅವಶ್ಯಕತೆಯೇ ಇರುವುದಿಲ್ಲ. ಹೀಗೆ ಮನೆಮದ್ದನ್ನು ಬಳಸಿ ಮುಖ ಮತ್ತು ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸಿಗುವುದನ್ನು ತಂದು ಬಳಸಿದರೆ ಅವು ಒಳ್ಳೆಯದಲ್ಲ. ಅದಕ್ಕೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ.

Leave a Comment

error: Content is protected !!