ಸುಧಾಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಬಳಸುವ ಕಾಫಿ ಕಪ್ ಗಳ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ

ಅಕ್ಷತಾ ಮೂರ್ತಿಯವರ ಕೈಯಲ್ಲಿರುವ ಅವರ ಈ ಕಾಫಿ ಕಪ್ ಹೇಳುತ್ತೆ ಅವರು ಎಷ್ಟು ಸಿರಿವಂತರು ಎನ್ನುವುದನ್ನು!
ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಇನ್ಫೋಸಿಸ್ ನ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಬಗ್ಗೆ ಅಪಾರವಾದ ಪ್ರೀತಿ ಹಾಗೂ ಗೌರವವಿದೆ. ಇವರು ಒಂದು ದೊಡ್ಡ ಕಂಪನಿಯನ್ನು ಕಟ್ಟಿ ಅದರಲ್ಲಿ ಸಾವಿರಾರು ಜನರಿಗೆ ನೌಕರಿಯನ್ನು ನೀಡಿದ್ದಾರೆ ಆದರೆ ಈ ಕಾರಣಕ್ಕೆ ಈ ದಂಪತಿಗಳು ಫೇಮಸ್ ಆಗಿರೋದು ಅಲ್ಲ. ಸುಧಾ ಮೂರ್ತಿಯವರ ಸರಳತೆ ಸಮಾಜಮುಖಿ ಕೆಲಸಗಳು ಅವರನ್ನ ಈ ಮಟ್ಟಿಗೆ ಜನರು ಗುರುತಿಸುವಂತೆ ಮಾಡಿದೆ.

ಹೌದು ಸುಧಾ ಮೂರ್ತಿ ಅಮ್ಮ ಸರಳತೆಗೆ ಇನ್ನೊಂದು ಹೆಸರು ಅವರ ಬಳಿ ಅದೆಷ್ಟು ಹಣವಿದ್ದರೂ ಕೂಡ ಯಾವತ್ತೂ ಅವರು ಕಿಂಚಿತ್ತು ಅಹಂಕಾರವನ್ನು ತೋರಿಸಿದ್ದೇ ಇಲ್ಲ. ಅವರ ನೋಡೆ ನುಡಿ ಉಡುಗೆ ತೊಡುಗೆಗಳಲ್ಲಿ ಅದೆಷ್ಟು ಸರಳತೆ ಅಡಕವಾಗಿದೆ ಅಂದ್ರೆ ಸಾಮಾನ್ಯ ಮನುಷ್ಯರಂತೆ ಬದುಕುತ್ತಿದ್ದಾರೆ ಸುಧಾ ಮೂರ್ತಿ. ಇನ್ನು ಸುಧಾ ಮೂರ್ತಿ ಅವರ ಸಮಾಜ ಮುಖಿ ಕೆಲಸಗಳ ಬಗ್ಗೆ ಮಾತನಾಡುವುದಾದರೆ ಅವರು ಇದುವರೆಗೆ ಮಾಡಿರುವ ಜನಸೇವೆಯ ಬಗ್ಗೆ ಎಷ್ಟು ಹೇಳಿದರು ಸಲುವುದಿಲ್ಲ ಯಾಕೆಂದರೆ ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಜನರಿಗೆ ಯಾವುದೇ ರೀತಿಯಾದ ಸಮಸ್ಯೆ ಆದರೆ ಅಲ್ಲಿ ಸುಧಾ ಮೂರ್ತಿಯವರ ಸಹಾಯ ಹಸ್ತ ಇದ್ದೇ ಇರುತ್ತದೆ.

ಕರೋನ ಸಮಯದಲ್ಲಿ ಜನರು ಎಷ್ಟು ಸಂಕಷ್ಟವನ್ನು ಅನುಭವಿಸಿದ್ದರು ಅನ್ನೋದನ್ನ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅದೆಷ್ಟೋ ಜನರಿಗೆ ಊಟ ತಿಂಡಿಗೂ ಸಮಸ್ಯೆಯಾಗಿತ್ತು. ಇಂತಹ ಸಂದರ್ಭದಲ್ಲಿ ಜನರಿಗೆ ವೈದ್ಯಕೀಯ ಸಹಾಯವನ್ನು ನೀಡುವುದು ಮಾತ್ರವಲ್ಲದೆ ದವಸ ಧಾನ್ಯಗಳನ್ನು ಕೂಡ ಅವರ ಮನೆ ಬಾಗಿಲುಗಳಿಗೆ ತಲುಪಿಸಿದ ಮಹಾನ್ ತಾಯಿ ಸುಧಾ ಮೂರ್ತಿ. ಅಷ್ಟೇ ಅಲ್ಲ ಚೆನ್ನೈನಲ್ಲಿ ಹಾಗೂ ಕೊಡಗಿನಲ್ಲಿ ಮಹಾಪೂರದಿಂದಾಗಿ ಸರ್ವ ನಾಶವಾಗಿತ್ತು. ಆ ಸಮಯದಲ್ಲಿಯೂ ಕೂಡ ಜನರಿಗೆ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಸುಧಾ ಮೂರ್ತಿ ಹಾಗೂ ಅವರ ತಂಡ. ತಮ್ಮದೇ ಆದ ಟ್ರಸ್ಟ್ ಒಂದನ್ನು ಕಟ್ಟಿ, ಆ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದು ಅಲ್ಲದೆ ಇದಕ್ಕಾಗಿ ಸಾವಿರಾರು ಕೋಟಿ ಮೀಸಲಿಟ್ಟಿದ್ದಾರೆ ಸುಧಾ ಮೂರ್ತಿ ಹಾಗೂ ಅವರ ಪತಿ ನಾರಾಯಣ ಮೂರ್ತಿಯವರು.

ಇನ್ನು ಸುಧಾ ಮೂರ್ತಿ ಅತ್ಯುತ್ತಮ ಸಾಹಿತಿ ಎನ್ನುವುದು ಎಲ್ಲರಿಗೂ ಗೊತ್ತು ಅವರು ತಮ್ಮ ಅನುಭವಗಳನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು ಸಾಕಷ್ಟು ಜನರಿಗೆ ಮಾದರಿ. ಹಾಗೆಯೇ ಸುಧಾ ಮೂರ್ತಿ ಅವರ ಮಗಳ ಬಗ್ಗೆ ಹೇಳುವುದಾದರೆ ಅಕ್ಷತಾ ಮೂರ್ತಿ ಇದೀಗ ಲಂಡನ್ ನ ಪ್ರಜೆ. ಅಕ್ಷತಾ ಮೂರ್ತಿಯವರು ಋಷಿ ಸುಣಕ್ ಅವರನ್ನ ವಿವಾಹವಾಗಿದ್ದಾರೆ ರಿಷಿ ಸುನಕ್ ಬ್ರಿಟನ್ ಹಣ ಹಣಕಾಸಿನ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಆದರೆ ಇದೀಗ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ರಾಜೀನಾಮೆ ನೀಡಿದ್ದಾರೆ. ಇದೀಗ ರಿಷಿ ಸುನತ್ ಬ್ರಿಟನ್ ಮುಂದಿನ ಪ್ರಧಾನಿ ಆಗಬಹುದು ಎನ್ನುವುದು ತುಂಬಾನೇ ಸುದ್ದಿಯಾಗಿದೆ.

ಇನ್ನು ಬ್ರಿಟನ್ ನಲ್ಲಿ ತುಂಬಾನೇ ಖ್ಯಾತಿಯನ್ನು ಬೆಳೆಸಿಕೊಂಡಿರುವ ರಿಷಿ ಸುನಕ್ ಅವರ ಮನೆಯ ಮುಂದೆ ಇದೀಗ ರಾಜಕೀಯ ನಾಯಕರು ಹಾಗೂ ಪತ್ರಕರ್ತರು ದೌಡಯಿಸಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸೋನುಕ್ ಆಗಬಹುದಾ ಅಂತ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ. ಇನ್ನು ರಿಷಿ ಸುನಕ್ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಅವರ ಮನೆ ಮುಂದೆ ಸಾಕಷ್ಟು ಜನ ಬರುತ್ತಿದ್ದರು.

ಇದೀಗ ಸುನಕ್ ಅವರ ಪತ್ನಿ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ, ತಮ್ಮ ಮನೆ ಬಾಗಿಲಿಗೆ ಬಂದ ಪತ್ರಕರ್ತರು ಹಾಗೂ ಇತರರಿಗೆ ತಾವೇ ಸುವತಹ ಕಾಫಿ ಟೀ ತಂದು ಕೊಟ್ಟಿದ್ದು ಅವರ ಸರಳತೆಯನ್ನ ತೋರಿಸುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಕ್ಷತಾ ಮೂರ್ತಿ ಕೂಡ ಉತ್ತಮ ಸ್ಥಾನದಲ್ಲಿದ್ದು ಅವರು ಕೂಡ ಕೋಟ್ಯಾಧಿಪತಿ ಎನಿಸಿಕೊಂಡಿದ್ದಾರೆ. ಮನೆಯಲ್ಲಿ ಕೈಗೊಂದು ಕಾಲಿಗೊಂದು ಹಾಡು ಕಾಳುಗಳನ್ನು ಇಟ್ಟುಕೊಳ್ಳುವಂಥ ಸ್ಥಿತಿಯಲ್ಲಿರುವ ಅಕ್ಷತಾ ಮೂರ್ತಿ ತಾವೇಸ್ವತಹ ಕಾಫಿ ಕಪ್ ಹಿಡಿದು ಬರುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಸುಧಾ ಮೂರ್ತಿ ಅವರಂತೆ ಅಕ್ಷತ ಮೂರ್ತಿಯವರ ಸರಳತೆಗೆ ಸಾಕ್ಷಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಆದರೆ ಇನ್ನೂ ಕೆಲವರು ಅಕ್ಷತಾ ಮೂರ್ತಿ ಹಿಡಿದುಕೊಂಡು ಬಂದ ಕಾಫಿ ಕಪ್ ಬೆಲೆ ಎಷ್ಟಿರಬಹುದು ಅಂತ ಗೂಗಲ್ ಸರ್ಚ್ ಮಾಡಿದ್ದಾರೆ. ಜನರ ಕುತೂಹಲ ಹಾಗೂ ಊಹೆಯಂತೆ ಈ ಕಾಫಿ ಕಪ್ ಗಳ ಬೆಲೆ ದುಬಾರಿಯೇ. ಎಮ್ಮಾ ಲ್ಯಾಸಿ ಎನ್ನುವ ಬ್ರಾಂಡ್ ನ ಈ ಕಪ್ಪಿನ ಬೆಲೆ 38 ಯುರೋಸ್ ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು ನಾಲ್ಕು ಸಾವಿರ ರೂಪಾಯಿಗಳಿಗೂ ಅಧಿಕ. ಬಡವರ ಎರಡು ದಿನದ ಊಟದ ಖರ್ಚು ಇದರಲ್ಲಿ ಆಗಿ ಹೋಗುತ್ತೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಇದು ನಿಮ್ಮ ಕುತೂಹಲಕ್ಕೆ ಅಷ್ಟೇ ಆದರೆ ನಿಜವಾಗಿಯೂ ಸುಧಾ ಮೂರ್ತಿ ಅವರ ಕುಟುಂಬ ಅತ್ಯಂತ ಸರಳವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವುದಂತೂ ಸತ್ಯ.

Leave a Comment

error: Content is protected !!