ರೈತರಿಗೆ ಸುಲಭವಾಗಿ ಸಿಗುವ ಸಾಲ ಸೌಲಭ್ಯಗಳಿವು

ಸಾಮಾನ್ಯವಾಗಿ ರೈತರಿಗೆ ಬ್ಯಾಂಕ್ ಗಳಿಂದ ಕೃಷಿ ಆಧಾರಿತ ಸಾಲ ನೀಡಲಾಗುತ್ತದೆ.ಆದರೆ ಇದಲ್ಲದೆ ಹಲವಾರು ಸಾಲಗಳನ್ನು ರೈತರಿಗೆ ನೀಡುತ್ತಿದೆ ಬ್ಯಾಂಕ್. ಹಾಗಾದರೆ ರೈತರಿಗೆ ಇರುವ ಸಾಲಗಳಾದ್ರೂ ಯಾವುದು ಅನ್ನೋದನ್ನ ತಿಳಿಯೋಣ.

ಬೆಳೆ ಸಾಲ / ಕಿಸಾನ್ ಕ್ರೆಡಿಟ್ ಕಾರ್ಡ್: ರೈತರು ಬೆಳೆಯುವ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರವು ಬ್ಯಾಂಕ್ ಗಳಿಂದ ಸಾಲ ನೀಡುತ್ತವೆ.ಅಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕವೂ ಸಾಲ ಪಡೆಯಬಹುದು. ಬಹಳಷ್ಟು ರೈತರಿಗೆ ಮುಂಗಾರಿನ ಸಮಯದಲ್ಲಿ ಬೀಜಗಳು, ಗೊಬ್ಬರ ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ ಅ ಸಂದರ್ಭದಲ್ಲಿ ಈ ಸಾಲಗಳು ನೆರವಾಗುತ್ತದೆ.7 % ವರ್ಷದ ಬಡ್ಡಿಯಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆಯಬಹುದು.

ಅಗ್ರಿಕಲ್ಚರ್ ಟರ್ಮ್ ಲೋನ್ : ಕೃಷಿ ಭೂಮಿಯ ಮೇಲೆ ಅಧಿಕ ಮೊತ್ತದ ಸಾಲ ನೀಡುವುದೇ ಈ ಅಗ್ರಿಕಲ್ಚರ್ ಟರ್ಮ್ ಲೋನ್ ಆಗಿದೆ. ರೈತರಿಗೆ 1 ಲಕ್ಷದವರೆಗೂ ಈ ಸಾಲದಲ್ಲಿ ಹಣ ನೀಡಲಾಗಿದಿದ್ದು,ಅಧಿಕ ಮೊತ್ತದ ಹಣ ಬೇಕಿದ್ದಲ್ಲಿ ಕೃಷಿ ಭೂಮಿಯ ದಾಖಲೆ ಪತ್ರಗಳನ್ನು ಒದಗಿಸಿ ಸಾಲ ಪಡೆಯಬಹುದಾಗಿದೆ. ಇನ್ನು ಕೃಷಿ ಕಾರ್ಯ ಬಂಡವಾಳ ಸಾಲರೈತರಿಗೆ ವ್ಯವಸಾಯ ಸೇರಿದಂತೆ ಸಸ್ಯ ಗಳ ನರ್ಸರಿ ಮಾಡಲು ಹಾಗೂ ಇತರೆ ಕೃಷಿ ಕಾರ್ಯಗಳಿಗೆ ಬಂಡವಾಳ ಹೂಡಲು ಬ್ಯಾಂಕ್ ಗಳು ಸಾಲ ನೀಡುತ್ತವೆ.

ಕೃಷಿ ಚಿನ್ನಾಭರಣ ಸಾಲ: ರೈತರಿಗೆ ಅನುಕೂಲವಾಗುವಂತೆ ಈ ಸಾಲವನ್ನು ನೀಡಲಾಗುತ್ತಿದೆ. ರೈತರಲ್ಲಿ ಚಿನ್ನಭರಣಗಳಿದ್ದರೆ ಅದರ ಮೇಲೆ ಬ್ಯಾಂಕ್ ಗಳು ಸಾಲ ನೀಡುತ್ತದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರ್ಷಕ್ಕೆ 4% ಬಡ್ಡಿ ದರದಲ್ಲಿ ಈ ಕೃಷಿ ಚಿನ್ನಾಭರಣ ಸಾಲ ನೀಡುತ್ತದೆ. ಬೇರೆ ಬ್ಯಾಂಕ್ ಗಳಲ್ಲಿ 7 % ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ವ್ಯವಸಾಯದ ಭೂಮಿಗೆ ಬೇಕಾದ ಯಂತ್ರಗಳ ಖರೀದಿಗೆ ಸಾಲ: ವ್ಯವಸಾಯ ಮಾಡಲು ಬೇಕಾದ ಅಗತ್ಯವಾದ ಯಂತ್ರಗಳ ಖರೀದಿಗೆ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು. ಜಮೀನಿಗೆ ಬೋರ್ ವೆಲ್, ಬೆಳೇ ಕಟಾವು ಯಂತ್ರಗಳು, ಇತ್ಯಾದಿ ಯಂತ್ರಗಳ ಖರೀದಿಗೆ ಈ ಸಾಲ ಸಹಾಯಕವಾಗಿದೆ.

ತೋಟಗಾರಿಕೆಗೆ ಸಾಲ : ತೋಟಗಾರಿಕೆ ಬೆಳೆ ಬೆಳೆಯಲು ಬ್ಯಾಂಕ್ ಗಳಿಂದ ಸಾಲ ಸೌಲಭ್ಯವಿದೆ. ತೋಟಗಾರಿಕೆ ಬೆಳೆಗಳು ಫಲಯನೀಡಲು ಹೆಚ್ಚಿನ ಕಾಲ ತೆಗೆದುಕೊಳ್ಳುತ್ತದೆ ಹಾಗಾಗಿ ಅದರ ಪೋಷಣೆ ಮಾಡಲು ಬಹಳಷ್ಟು ಖರ್ಚಾಗುತ್ತದೆ ಇದಕ್ಕಾಗಿ ಬ್ಯಾಂಕ್ ಗಳಲ್ಲಿ 50 ಲಕ್ಷದ ವರೆಗೂ ಸಾಲ ಸಿಗುತ್ತದೆ.

ಅರಣ್ಯ ಬೆಳೆ ಸಾಲ: ಸಾಮಾನ್ಯ ಬೆಳೆಗಳಿಗಿಂತ ಅರಣ್ಯ ಬೆಳೆಯೂ ಸುಲಭವಾಗಿದ್ದು ಇದರಿಂದ ಆದಾಯವೂ ಹೆಚ್ಚು ಹಾಗೂ ಸಮಯದ ಉಳಿತಾಯ ವಾಗುತ್ತದೆ. ಇಂತಹ ಬೆಳೆಗಳಿಗೂ ಬ್ಯಾಂಕಿನಿಂದ ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳಿವೆ

ಅಷ್ಟೇ ಅಲ್ಲದೆ ಪಶುಸಂಗೋಪನೆ, ಹೈನುಗಾರಿಕೆ, ರೇಷ್ಮೆ ಸಾಗಣೆ, ಗಳಂತಹ ಸಣ್ಣ ಪುಟ್ಟ ಕೃಷಿ ಚಟುವಟಿಕೆಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯಗಳು ಕಡಿಮೆ ಬಡ್ಡಿ ದರದಲ್ಲಿ ದೊರೆಯುತ್ತದೆ ಈ ರೀತಿಯ 8 ಪ್ರಮುಖ ಸಾಲಗಳು ರೈತರಿಗೆಂದೆ ಮೀಸಲಾಗಿದ್ದು, ರೈತರು ಇದನ್ನು ತಿಳಿದು ಉಪಯೋಗ ಪಡಿಯಿರಿ.

Leave a Comment

error: Content is protected !!