ಮಹಿಳಾ ಕಲಾವಿದರು ಒಂದು ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕೆಲವು ನಿರ್ಮಾಪಕರು ನಿರ್ದೇಶಕರು ನಟರು ನಟಿಯಾಗಬೇಕು ಎಂಬ ಆಸೆ ಇರುವ ಮಹಿಳಾ ಕಲಾವಿದರಿಗೆ ಕೆಟ್ಟ ಅನುಭವಗಳನ್ನು ತಂದಿರುತ್ತಾರೆ. ಅದರಲ್ಲೂ ಒಬ್ಬ ಕಲಾವಿದೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಕೆಲವು ನಿರ್ಮಾಪಕರು ಅವರನ್ನು ತಮ್ಮ ಬಯಕೆಗಳನ್ನು ಈಡೇರಿಸುವ ಮೆಷಿನ್ ನಂತೆ ಟ್ರೀಟ್ ಮಾಡುತ್ತಾರೆ. ತಮ್ಮ ಬಯಕೆಗಳನ್ನು ಈಡೇರಿಸಿದರೆ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಕೊಡುತ್ತೇವೆ ಅಂತ ಆಸೆ ಹುಟ್ಟಿಸುತ್ತಾರೆ. ಇದಕ್ಕೆ ಕೆಲವು ಕಲಾವಿದರು ಬಲಿಯಾಗಿದ್ದು ಇದೆ. ಇದನ್ನು ಸಿಹಿ ಭಾಷೆಯಲ್ಲಿ ಹೇಳುವುದಾದರೆ ಕಾಸ್ಟಿಂಗ್ ಕೌಚ್.

ಸಿನಿಮಾ ರಂಗದಲ್ಲಿ ಇಂದಿಗೂ ಸಕ್ರಿಯರಾಗಿರುವ ಸಾಕಷ್ಟು ಕಲಾವಿದೆಯರಿಗೆ ಕಾಸ್ಟಿಂಗ್ ಕೌಚ್ ನ ಕೆಟ್ಟ ಅನುಭವ ಆಗಿದೆ. ಇದೀಗ ಸಿನಿಮಾ ದಾರಿಯಲ್ಲಿ ಹಲವರು ತಮಗೆ ಸಿನಿಮಾರಂಗದಲ್ಲಿ ಆಗಿರುವಂತಹ ಕೆಟ್ಟ ಅನುಭವಗಳ ಬಗ್ಗೆ ಬಾಯಿ ಬಿಟ್ಟು ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಇನ್ನೂ ಪ್ರವೇಶ ಮಾಡಲು ಇಚ್ಛಿಸುವ ಮಹಿಳೆಯರು ಯಾವ ರೀತಿ ಮುತುವರ್ಜಿಯಿಂದ ಇರಬೇಕು ಎನ್ನುವುದನ್ನ ಹೇಳುವುದಕ್ಕಾಗಿ ಕೆಲವು ಕಲಾವಿದೆಯರು ತಮ್ಮ ಅನುಭವವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಅಂಥವರಲ್ಲಿ ನಟಿ ಚಾರ್ಮಿಳ ಕೂಡ ಒಬ್ಬರು.

ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವಂತಹ ನಟಿ ಚಾರ್ಮಿಳ. ಇದೀಗ ಪೋಷಕ ಪಾತ್ರಗಳಲ್ಲಿಯೂ ಅಭಿನಯಿಸುತ್ತಿರುವ ಚಾರ್ಮಿಳ ಈ ಹಿಂದೆ ನಾಯಕಿ ನಟಿಯಾಗಿ ಮಿಂಚಿದವರು. ನಟಿ ಚಾರ್ಮಿಳ, 1979ರಲ್ಲಿ ಶಿವಾಜಿ ಗಣೇಶನ್ ಅಭಿನಯದ ‘ನಲ್ಲತೂರು ಕುಟುಂಬ ಎನ್ನುವ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು. ನಂತರ 1991ರಲ್ಲಿ ಓಯಿಲಟ್ಟಂ ಇನ್ನು ಸಿನಿಮಾದ ಮೂಲಕ ನಾಯಕನಾಗಿ ಅಭಿನಯವನ್ನು ಆರಂಭಿಸಿದರು.

ಇನ್ನು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ನಟಿ ಚಾರ್ಮಿಳ, ಇತ್ತೀಚಿಗೆ ತನಗೆ ಆಗಿರುವ ಒಂದು ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು ಇತ್ತೀಚಿಗೆ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದೆ ಅದರ ಚಿತ್ರೀಕರಣ ಕ್ಯಾಲಿಕಟ್ ನಲ್ಲಿ ನಡೆಯುತ್ತಿತ್ತು ಆ ಸಿನಿಮಾದಲ್ಲಿ ನಾಯಕಿಯ ತಾಯಿಯಾಗಿ ನಾನು ನಟಿಸುತ್ತಿದೆ. ಆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು 24 ವರ್ಷದ ಇಬ್ಬರು ಯುವಕರು. ಸಿನಿಮಾ ನಿರ್ಮಾಣದ ವೇಳೆ ಅವರ ಅಸಿಸ್ಟೆಂಟ್ ಒಬ್ಬರ ಬಳಿ ತನಗೆ ಕರೆ ಮಾಡಿಸಿ ಅವರ ಲೈಂಗಿಕ ಬಯಕೆಯನ್ನು ಈಡೇರಿಸುವಂತೆ ಕೇಳಿದರು. ನೀವು ನನ್ನ ಮಗನಿಗಿಂತ ಸ್ವಲ್ಪ ದೊಡ್ಡ ವಯಸ್ಸಿನವರು ಅಷ್ಟೇ, ನಾನು ನಿಮಗೆ ತಾಯಿ ಇದ್ದಂತೆ ಎಂದರೂ ಅವರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.

ನಂತರ ಆ ಸಿನಿಮಾವನ್ನು ಬಿಟ್ಟು ಸೀದಾ ಚೆನ್ನೈಗೆ ವಾಪಸ್ ಆಗಿದೆ ಅಂತ ಚಾರ್ಮಿಳಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.ಇನ್ನು ಯಾರು ಇಂತಹ ಮೋಸದ ಬಲೆಗೆ ಬೀಳಬಾರದು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಅಂದರೆ ಇಂಥ ಆಫರ್ ಗಳು ಬರುವುದು ಸಹಜ ಅಥವಾ ಅದು ನಮ್ಮ ಗ್ರಹಚಾರ ಆಗಿರಬಹುದು ಆದರೆ ಇಂಥವುಗಳಿಗೆ ಬಲಿಯಾಗಬೇಡಿ. ನಿಮಗೆ ನಿಜವಾದ ಅವಕಾಶ ಬೇರೆ ಇರುತ್ತದೆ ಎಂದು ಚಾರ್ಮಿಳ ಹೇಳಿದ್ದಾರೆ.

ಏನು ಚಾರ್ಮಿಳಾ ಅವರ ವೈಯಕ್ತಿಕ ಬದುಕನ್ನು ನೋಡುವುದಾದರೆ 1995 ರಲ್ಲಿ ಮಲಯಾಳಂ ನ ಕಿಶೋರ ಸತ್ಯ ಎನ್ನುವ ವ್ಯಕ್ತಿಯ ಜೊತೆ ಚಾರ್ಮಿಳ ಅವರ ಮದುವೆಯಾಗಿತ್ತು. ಆದರೆ ಈ ಸಂಬಂಧ ಬಹುಕಾಲ ಉಳಿಯಲಿಲ್ಲ. ಅವರಿಂದ ವಿಚ್ಛೇದನ ಪಡೆದು 2006ರಲ್ಲಿ ರಾಜೇಶ್ ಏನು ಇಂಜಿನಿಯರಿಂಗ್ ಪ್ರತಿ ಮಾಡುತ್ತಿರುವ ವ್ಯಕ್ತಿಯ ಜೊತೆ ಚಾರ್ಮಿಳ ಮದುವೆಯಾಗಿದ್ದು ಅವರಿಗೆ ಒಂದು ಗಂಡು ಮಗು ಇದೆ. ಆದರೆ ಈ ಸಂಬಂಧವನ್ನು ಕೂಡ ಚಾರ್ಮಿಳ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ತನ್ನ ಎರಡನೇ ಸಂಬಂಧಕ್ಕೂ ಗುಡ್ ಬೈ ಹೇಳಿರುವ ನಟಿ ಚಾರ್ಮಿಳ ಈಗ ತನ್ನ ಮಗನೊಂದಿಗೆ ವಾಸವಾಗಿದ್ದಾರೆ. ಒಟ್ಟಿನಲ್ಲಿ ಸಿನಿಮಾ ರಂಗ ಎನ್ನುವುದು ಒಂದು ಬಣ್ಣದ ಲೋಕ. ಇಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಕಂಡರೆ ಅಷ್ಟೇ ಸಾಲದು ಅದನ್ನ ನನಸಾಗಿಸಲು ಎದುರಿಸಬೇಕಾದ ಅಡೆತಡೆಗಳು ಸಾಕಷ್ಟು. ಇವುಗಳನ್ನು ಎದುರಿಸಿ ನಿಂತರೆ ಮಾತ್ರ ಸಿನಿಮಾರಂಗದಲ್ಲಿ ನೆಲೆಯೂರುವುದಕ್ಕೆ ಸಾಧ್ಯ.

By admin

Leave a Reply

Your email address will not be published.