ನಟಿ ತಾರಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಹೇಗಿತ್ತು ನೋಡಿ

ನಾಡಿನೆಲ್ಲೆಡೆ ಇಂದು ಶ್ರಾವಣ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ರಾಜ್ಯಾದ್ಯಂತ ವಿಪರೀತ ಮಳೆ, ಹಲವೆಡೆ ಜಲ ಪ್ರಳಯ, ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ, ತೊಂದರೆಗಳು ಸಂಭವಿಸುತ್ತಿವೆ.ಆದರೂ ಅನೇಕ ಕಡೆ ಹಬ್ಬದ ಆಚರಣೆಯಿಂದ ಜನರು ಹಿಂದೆಬಿದ್ದಿಲ್ಲ. ನಿನ್ನೆ ಸಂಜೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಬರುತ್ತಿದ್ದರೂ ಲೆಕ್ಕಿಸದೆ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಖರೀದಿಸುವುದರಲ್ಲಿ ಜನರು ನಿರತರಾಗಿದ್ದರು.

ನಾಡಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ, ಶ್ರಾವಣ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಕೂಡ ಒಂದಾಗಿದೆ. ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧೆ ,ಭಕ್ತಿಯಿಂದ ಆಚರಿಸುತ್ತಾರೆ.

ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು.ನಂತರ ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಬೇಕು, ಮನೆಯ ಮಧ್ಯಭಾಗದಲ್ಲಿ ರಂಗೋಲಿ ಬಿಡಬೇಕು, ಧನಲಕ್ಷ್ಮಿ ರಂಗೋಲಿ ನೋಡಿ ಆಕರ್ಷಿತಳಾಗುತ್ತಾಳೆ, ಆದ್ದರಿಂದ ಸುಂದರವಾದ ರಂಗೋಲಿ ಬಿಡಿಸಿ. ಕಳಸ ಸಿದ್ಧ ಪಡಿಸಿ: ಕಳಸಕ್ಕೆ ಹಿತ್ತಾಳೆ ಅಥವಾ ಬೆಳ್ಳಿಯ ಚೊಂಬು ಬಳಸಿ,ಅದರ ಮೇಲೆ ಶ್ರೀಗಂಧ ಅಥವಾ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಬರೆಯಿರಿ, ಅದರೊಳಗಡೆ ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸಬೇಕು. ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ.

ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಸೀರೆಯುಡಿಸಿ ಲಕ್ಷ್ಮಿಯನ್ನು ಹೂಗಳಿಂದ ಅಲಂಕೃತ ಮಾಡಿ ಪೂಜಿಸಲಾಗುವುದು.ಮೊದಲಿಗೆ ಗಣೇಶನಿಗೆ ಪೂಜೆಯನ್ನು ಸಲ್ಲಿಸಬೇಕು. ನಂತರ ಲಕ್ಷ್ಮಿ ಸ್ತೋತ್ರ ಪಠಿಸಬೇಕು, ನಂತರ ದೇವಿಗೆ ದೀಪ ಬೆಳಗಿ ಆರತಿಯನ್ನು ಮಾಡಿ ನೈವೇದ್ಯ ಅರ್ಪಿಸಬೇಕು.ಕೈಗಳಿಗೆ ಹಳದಿ ದಾರವನ್ನು ಕಟ್ಟಿಕೊಳ್ಳಬೇಕು, ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅಡಿಕೆ, ವೀಳ್ಯೆದೆಲೆಯನ್ನು ತಾಂಬೂಲವಾಗಿ ನೀಡುತ್ತಾರೆ. ಕೆಲವರು ಇದರ ಜತೆಗೆ ಹಣ್ಣುಗಳನ್ನೂ ನೀಡುತ್ತಾರೆ

ಈ ಆಚರಣೆಯಲ್ಲಿ ಸಿನಿಮಾ ರಂಗದ ಸಿನಿತಾರೆಯರು ಕೂಡ ಹಿಂದುಳಿದಿಲ್ಲ. ಸಿನಿತಾರೆಯರ ಮನೆಗಳಲ್ಲೂ ಅದ್ದೂರಿಯಾಗಿ ವರಮಹಾಲಕ್ಷ್ಮೀಯನ್ನು ಬರಮಾಡಿಕೊಂಡು ,ವಿಜೃಂಭಣೆಯಿಂದ ಆಚರಿಸಲಾಗಿದೆ. ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ಕನ್ನಡದ ಹಿರಿಯ ನಟಿ ತಾರಾ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಹಬ್ಬದ ಒಂದು ವಿಶೇಷ ಪೂಜೆಗಳ ಮುನ್ನೋಟ ನೋಡೋಣ ಬನ್ನಿ.

ಮನೆಯ ಅಂಗಳದಲ್ಲಿ ರಂಗೇರಿರುವ ರಂಗೋಲಿ ,ಮನೆಯ ಬಾಗಿಲಿಗೆ ಹಸಿರು ತಳಿರು ತೋರಣಗಳಿಂದ ಸಿಂಗರಿಸಿ ಘಂ ಎನ್ನುವ ಹೂವನ್ನು ಹಾಕಿ ಅಲಂಕರಿಸಿದ್ದಾರೆ. ದೇವರ ಕೋಣೆಯನ್ನು ಕೂಡ ವಿವಿಧ ಹೂವುಗಳಿಂದ ಅಲಂಕರಿಸಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾನಿಸಿ ,ವಿವಿಧ ಭಕ್ಷ ಭೋಜನಗಳ ಜೊತೆಗೆ ಪ್ರಸಾದವನ್ನು ಕೂಡ ಇಟ್ಟು ಪೂಜೆ ಸಲ್ಲಿಸಿದ್ದಾರೆ. ನಟಿ ತಾರಾ ಅವರು ಕೂಡ ಹಸಿರು ಬಣ್ಣದ ರೇಷ್ಮೆ ಸೀರೆ ಉಟ್ಟು ಹಸಿರು ಬನ ದೇವತೆಯಂತೆ ಕಂಗೊಳಿಸಿದ್ದಾರೆ. ಅವರ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋ ತುಣುಕು ಒಂದು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ಅದರಲ್ಲಿ ಲಕ್ಷ್ಮೀದೇವಿಯ ಹಾಗೆ ಕಂಗೊಳಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Leave a Comment

error: Content is protected !!