ನಮ್ಮ ದೈನಂದಿನ ಆಹಾರ ಶೈಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ರೋಗಗಳು ಬರಲು ಕೂಡ ಕಾರಣವಾಗುತ್ತದೆ. ಹೌದು ನಾವುಗಳು ಸೇವನೆ ಮಾಡುವಂತ ಆಹಾರ ಉತ್ತಮ ರೀತಿಯಲ್ಲಿ ಪೌಷ್ಟಿಕಾಂಶ ಭರಿತವಾಗಿದ್ದರೆ ದೇಹಕ್ಕೆ ಉತ್ತಮ ಅರೋಗ್ಯ ದೊರೆಯುತ್ತದೆ, ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವಿಷ್ಯಕ್ಕೆ ಬರೋಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಹಳಷ್ಟು ಜನರಲ್ಲಿ ಕಾಡುವಂತ ಅಜೀರ್ಣತೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಇದೆ ಔಷದಿ.

ಹೌದು ಮನೆಯಲ್ಲಿಯೇ ತಯಾರಿಸಿಕೊಳ್ಳುವಂತ ಮನೆಮದ್ದನ್ನು ಈ ಮೂಲಕ ತಿಳಿಯೋಣ ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬಿರೋದಿಲ್ಲ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಷ್ಟಕ್ಕೂ ಆ ಮನೆಮದ್ದು ಯಾವುದು ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ ಅಡುಗೆಗೆ ಬಳಸುವಂತ ಕಲ್ಲುಸಕ್ಕರೆ ಕಪ್ಪು ಉಪ್ಪು ಬೆಲ್ಲ, ಅಜ್ವಾನ (ಓಮ್ ಕಾಳು) ಇಷ್ಟು ಇದ್ದು ಇವುಗಳನ್ನು ಬೇರೆ ಬೇರೆ ಪುಡಿ ಮಾಡಿಕೊಳ್ಳಬೇಕು.

ಈ ಪುಡಿ ಮಾಡಿಕೊಂಡ ಚೂರ್ಣವನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಹೇಳುವುದಾದರೆ ಮೊದಲು ಇವುಗಳನ್ನು ಎಷ್ಟು ಪ್ರಮಾಣದಲ್ಲಿ ಮಾಡಿಕೊಳ್ಳಬೇಕು? ಈ ಚೂರ್ಣವನ್ನು ಸ್ವಲ್ಪ ಮಾಡಿಕೊಂಡರೆ ಅಂದರೆ ಅಂದಾಜು 100 ಗ್ರಾಂ ಮಾಡಿಕೊಂಡರೆ. ಅದಕ್ಕೆ ಅಜ್ವಾನ್ ಪುಡಿ 50 ಗ್ರಾಂ, ಕಪ್ಪು ಉಪ್ಪು ಪುಡಿ 50 ಗ್ರಾಂ, ಹಾಗೂ ಕಲ್ಲುಸಕ್ಕರೆ 25 ಬೆಲ್ಲ 25 ಗ್ರಾಂ ಪುಡಿ ಇವುಗಳನ್ನು ಮಿಶ್ರಣ ಮಾಡಿ ಒಂದು ಡಬ್ಬಿಯಲ್ಲಿ ಹಾಕಿಕೊಂಡು ಗ್ಯಾಸ್ಟ್ರಿಕ್ ಇರುವ ವೇಳೆ ಒಂದು ಟೀ ಚಮಚ ಸೇವನೆ ಮಾಡಬಹುದು ಇಲ್ಲದಿದ್ದರೆ ಒಂದು ಗ್ಲಾಸ್ ನೀರಿನಲ್ಲಿ ತಯಾರಿಸಿಕೊಂಡ ಪುಡಿಯನ್ನು ಒಂದು ಚಮಚದಷ್ಟು ಹಾಕಿ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಅಜೀರ್ಣತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಬಹುಬೇಗನೆ ನಿವಾರಣೆಯಾಗಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಇದನ್ನು ಯಾವಾಗ ಸೇವಿಸಬೇಕು ಅನ್ನೋದನ್ನ ತಿಳಿಯುವುದಾದರೆ ಬೆಳಗ್ಗೆ ಹಾಗೂ ಮಧ್ಯಾಹ್ನ ಸೇವನೆ ಮಾಡಬಹುದು, ರಾತ್ರಿ ವೇಳೆ ಈ ಮನೆಮದ್ದನ್ನು ಬಳಸುವುದು ಬೇಡ ಒಂದು ವೇಳೆ ರಾತ್ರಿ ಗ್ಯಾಸ್ಟ್ರಿಕ್ಸೇ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಸೇವನೆ ಮಾಡಬಹುದು.

By admin

Leave a Reply

Your email address will not be published.