Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ
ಕನ್ನಡದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಅವರು ಮಾಡಿರುವ ಕಲಾ ಸೇವೆ ಮರೆಯುವಂತದ್ದಲ್ಲ. ಒಬ್ಬ ನಟನಾಗಿ ನಂತರ ರಾಜಕೀಯ ನಾಯಕನಾಗಿಯೂ ಕೂಡ ಗುರುತಿಸಿಕೊಂಡವರು ಅಂಬರೀಶ್. ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅವರ ಮಗ ಅಭಿಷೇಕ್(Abhishek ambareesh) ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಲಕ್ ಪರೀಕ್ಷಿಸುತ್ತಿದ್ದಾರೆ.
ಹೌದು, ಅಭಿಷೇಕ ಅಂಬರೀಶ್ ಅವರು ಅಮರ್ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿಯಾದರೂ ನಟಿಸುತ್ತಿದ್ದಾರೆ. ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಈ ನಡುವೆ ಅಭಿಷೇಕ್ ಅವರ ಮದುವೆ ನಿಶ್ಚಿತಾರ್ಥದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದೇ ಡಿಸೆಂಬರ್ 11ರಂದು ಮದುವೆ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗುತ್ತಿದೆ. ಅಂಬರೀಶ್ ಹಾಗೂ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವದ ದಿನ ಅಂದರೆ ಡಿಸೆಂಬರ್ 8ರಂದು ಈ ವಿಷಯ ರಿವಿಲ್ ಮಾಡಲಾಗುವುದು ಎನ್ನಲಾಗುತ್ತಿದೆ.

ಅಭಿಯನ್ನು ಇಷ್ಟಪಟ್ಟು ಮದುವೆ ಆಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ಖ್ಯಾತ ಫ್ಯಾಷನ್ ಡಿಸೈನರ್ ಗುರು ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಎನ್ನಲಾಗುತ್ತಿದೆ. ಇವರಿಬ್ಬರೂ 3 ವರ್ಷಗಳಿಂದ ಪರಿಚಯವಿದ್ದು, ಇದೀಗ ಮದುವೆ ಆಗುವ ನಿರ್ಧಾರ ಮಾಡಲಾಗಿದೆ.
ಹಾಗೆಯೇ ಸಮಾರಂಭ ಒಂದರಲ್ಲಿ ಭಾಗವಹಿಸಿದ್ದ ಸುಮಲತಾ ಅವರು ಈ ಬಗ್ಗೆ ನನಗೇನು ಗೊತ್ತಿಲ್ಲ. ಹುಡುಗಿ ಯಾರು ಅಂತ ಗೊತ್ತಿದ್ದರೆ ನನಗೂ ಹೇಳಿ. ಮೂರು ವರ್ಷಗಳಿಂದ ಇದೆ ವಿಷಯ ಕೇಳ್ತಾನೆ ಇದೀನಿ. ಹಾಗೆ ಒಳ್ಳೆಯ ಸುದ್ದಿ ಕೇಳುವಂತಾಗಲಿ ಎಂದಿದ್ದಾರೆ. ಇನ್ನು ಅಭಿಷೇಕ್ ಕೂಡ ನಾನು ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ ಎಂದು ಮಾತನ್ನು ಹಾರಿಸಿ ಬಿಟ್ಟಿದ್ದಾರೆ.
ಅಭಿಷೇಕ್ ಅಂಬರೀಶ್, ಇದೀಗ ಕಾಂತಾರ ಸಿನಿಮಾ ನಾಯಕಿ ಸಪ್ತಮಿ ಗೌಡ ಅವರ ಜೊತೆ ಕಾಳಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಕಾವೇರಿ ನೀರು ಗಲಾಟೆಯ ಸಮಯದಲ್ಲಿ ಹುಟ್ಟುವ ಒಂದು ಪ್ರೀತಿಯ ಸುತ್ತಣ ಕಥೆ ಇದು. ಒಟ್ಟಿನಲ್ಲಿ ಅಭಿ ಅವರು ಸದ್ಯ ವೃತ್ತಿ ಹಾಗೂ ವಯಕ್ತಿಕ ಜೀವನ ಎರಡರಿಂದಲೂ ಸುದ್ದಿಯಲ್ಲಿದ್ದಾರೆ.