ಹಿಂದೂ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಒಂದು ನಂಬಿಕೆ ಇದೆ ಗಂಡು-ಹೆಣ್ಣು ಯಾರು ಯಾರನ್ನು ಮದುವೆಯಾಗಬೇಕು ಅನ್ನೋದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಅಂತ ಹೇಳಲಾಗುತ್ತೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳು ಗೊತ್ತಿಲ್ಲ ಯಾಕಂದ್ರೆ ಹಲವರ ಜೀವನವನ್ನು ನೋಡಿದರೆ ನಿಜಕ್ಕೂ ಈ ಜೋಡಿಯನ್ನು ದೇವರೇ ಮಾಡಿಸಿದ್ದ ಅಂತ ಅನುಮಾನವೂ ಬರುತ್ತೆ. ಹೌದು ಕೆಲವು ಜೋಡಿಗಳು ಆಹಾ ಎನ್ನುವಂತಿದ್ದರೆ ಇನ್ನೂ ಕೆಲವು ಜೋಡಿಗಳು ಅಯ್ಯೋ ಅನ್ನುವಂತಿರುತ್ತವೆ. ಆದರೆ ಮದುವೆ ಎನ್ನುವುದು ಅವರವರ ವೈಯಕ್ತಿಕ ವಿಚಾರ ಹಾಗಾಗಿ ತಮಗೆ ಇಷ್ಟ ಬಂದವರನ್ನು ಮದುವೆಯಾಗುವ ಸ್ವಾತಂತ್ರ್ಯ ಅವರಿಗಿದೆ .

ಹೀಗೆ ತಾನು ಇಷ್ಟ ಪಟ್ಟ ವ್ಯಕ್ತಿಯನ್ನು ಮದುವೆಯಾದ ಹುಡುಗಿ ಆಸಿಯಾ.ಹೌದು, ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಅಧಿಕ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆಸೆಯ ಮದುವೆಯಾದ ವ್ಯಕ್ತಿಯ ಹೆಸರು ಶಂಶಾದ್. ಇವರ ವಯಸ್ಸು 61. ಇನ್ನು ಆಸೆಯ ಕೇವಲ 18ರ ಹರೆಯದ ಹುಡುಗಿ. ಆದರೆ ಇವರಿಬ್ಬರ ವಿವಾಹ ನೆರವೇರಿದೆ ಈ ವಿವಾಹದ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ ಹೇಳುತ್ತೇವೆ ಕೇಳಿ.

ರಾವಲ್ಪಿಂಡಿ, ಪ್ರದೇಶದಲ್ಲಿ ಶಂಶಾದ್ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಇಲ್ಲಿನ ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಆಸೆಯ ವಾಸಿಸುತ್ತಿರುವ ಪ್ರದೇಶದಲ್ಲಿಯೂ ಕೂಡ ಕೆಲವು ಹೆಣ್ಣು ಮಕ್ಕಳ ವಿವಾಹವನ್ನು ಮಾಡಿಸಿ ಉತ್ತಮ ಕಾರ್ಯವನ್ನು ಮಾಡಿರುವವರು ಶಂಶಾದ್. ಅವರ ಈ ಸಮಾಜಮುಖಿ ಕಾರ್ಯಗಳನ್ನು ನೋಡಿ ಆಸಿಯಾ ಅವರತ್ತ ಆಕರ್ಷಿತರಾಗಿದ್ದಾರೆ. ಹಾಗೆಯೇ ಮೊದಲು ಅವರೊಂದಿಗೆ ಮಾತನಾಡಿದ ಆಸಿಯಾ, ತಮ್ಮ ಮನದ ಇಂಗಿತವನ್ನು ಶಂಶಾದ್ ಬಳಿ ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಶಂಶಾದ್ ಕೂಡ ಆಸಿಯಾ ಅವರನ್ನು ಪ್ರೀತಿಸಲು ಆರಂಭಿಸಿದ್ದಾರೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ಆದರೆ ಇವರಿಬ್ಬರ ವಿವಾಹವನ್ನು ಆಸಿಯಾ ಅವರ ಮನೆಯವರು ಒಪ್ಪಲಿಲ್ಲ. ಆದರೆ ತನ್ನ ನಿರ್ಧಾರದ ಬಗ್ಗೆ ಅತ್ಯಂತ ಆತ್ಮವಿಶ್ವಾಸವನ್ನು ಹೊಂದಿದ್ದ ಆಸಿಯ ಕೊನೆಗೂ ಮನೆಯವರನ್ನ ಒಪ್ಪಿಸಿ ತನ್ನ ಪ್ರಿಯಕರನ ಜೊತೆ ಮದುವೆಯಾದರು.

ಇನ್ನು ತಮ್ಮ ವಯಸ್ಸಿನ ಅಂತರದ ಕಾರಣಕ್ಕೆ ನಮ್ಮ ಜೋಡಿಯ ಬಗ್ಗೆ ಜನರು ಮಾತನಾಡುವುದು ಸರಿಯಲ್ಲ, ಎಂದು ಆಸಿಯಾ ಹೇಳಿದ್ದಾರೆ. ಇನ್ನು ವಿವಾಹವಾದ ಬಳಿಕ ನನ್ನ ಕರ್ಮದ ಫಲ ಎನ್ನುವಂತೆ ಇಷ್ಟು ಒಳ್ಳೆಯ ಹುಡುಗಿ ನನಗೆ ಸಿಕ್ಕಿದ್ದಾಳೆ. ನನ್ನನ್ನು ಅತ್ಯಂತ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ ಅಂತ ಶಂಶಾದ ಆಸಿಯಾ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಸೆಯ ಕೂಡ ತಮ್ಮ ಪತಿಯ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದು ಶಂಶಾದ್ ನನ್ನನ್ನು ಮಾತ್ರವಲ್ಲ ನಮ್ಮ ಮನೆಯವರನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ ಸುಖವಾಗಿ ಇರಲಿ ಎಂಬುದೇ ಎಲ್ಲರ ಹಾರೈಕೆ.

By admin

Leave a Reply

Your email address will not be published.