ತಲೆ ಕೂದಲು ಉದುರುವ ಸಮಸ್ಯೆಯಿಂದ ಸಂಪೂರ್ಣವಾಗಿ ಕೂದಲನ್ನು ಕಳೆದುಕೊಂಡ ಯುವತಿ ಮಾಡಿಕೊಂಡ ಕೆಲಸವೇನು ನೋಡಿ

ಈಗಿನ ಕಾಲದ ಯುವ ಜನತೆಗೆ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸದ ಕೊರತೆ ತುಂಬಾನೇ ಇದೆ. ಶಿಕ್ಷಣ ವನ್ನು ಕಲಿತ ಮಾತ್ರಕ್ಕೆ ಮನುಷ್ಯ ಬದುಕನ್ನು ಗಳಿಸುತ್ತಾನೆ ಎನ್ನುವುದು ಅಕ್ಷರಶಃ ಸುಳ್ಳು. ಎಷ್ಟು ಕಲಿತಿದ್ದರೂ ಜೀವನ ನಡೆಸೋಕೆ ಗೊತ್ತಿಲ್ಲದೆ ಇದ್ದರೆ ಮನುಷ್ಯ ಜೀವನದಲ್ಲಿ ಸೋಲನ್ನು ಕಾಣುತ್ತಾನೆ. ಚಿಕ್ಕ ಮಕ್ಕಳು ಪುಸ್ತಕದ ಪಾಠ ಕಲಿಯುವುದಿರ ಜೊತೆಜೊತೆಗೆ ಜೀವನದ ಪಾಠಗಳನ್ನು ಕೂಡ ಕಲಿಯಬೇಕು. ಯಾಕೆಂದರೆ ಇತ್ತೀಚೆಗೆ ಯುವಕ ಯುವತಿಯರು ಚಿಕ್ಕ ಪುಟ್ಟ ವಿಷಯಕ್ಕೆ ಜೀವವನ್ನು ಕಳೆದುಕೊಳ್ಳುವಂತ ನಿರ್ಧಾರವನ್ನು ತೆಗೆದುಕೊಂಡ ಹಲವಾರು ಘಟನೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ.

ಮೈಸೂರಿನ ಕಾವ್ಯಶ್ರೀ ಎಂಬ ಯುವತಿಗೆ ಕೆಲವು ವರ್ಷಗಳ ಹಿಂದೆ ಕೂದಲು ಉದುರುವ ಸಮಸ್ಯೆ ಕಂಡುಬಂದಿತ್ತು ಪ್ರಾರಂಭದ ದಿನಗಳಿಂದಲೂ ಈಕೆ ಕೂದಲು ಉದುರುವಿಕೆ ಸಮಸ್ಯೆಗೆ ಹಲವಾರು ಔಷಧಿಗಳನ್ನು ಉಪಯೋಗಿಸೋಕೆ ಶುರು ಮಾಡಿದ್ದಳು. ಆದರೆ ದಿನೇದಿನೇ ಹೋದಂತೆ ಕಾವ್ಯಶ್ರೀ ಅವಳ ತಲೆಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಿಲ್ಲ. ಕೂಡ್ಲು ದುರ್ಗಿಯ ಸಮಸ್ಯೆಯಿಂದ ಕಾವ್ಯಶ್ರೀ ತುಂಬಾ ನೊಂದುಕೊಂಡಿದ್ದಳು ಹಾಗೆ ಬಳಲುತ್ತಿದ್ದಳು.

ಇಂಗ್ಲಿಷ್ ಮೆಡಿಸಿನ್ ಆಯುರ್ವೇದಿಕ್ ಹಾಗೂ ಎಲ್ಲಾ ತರಹದ ಮೆಡಿಸಿನ್ ಗಳನ್ನು ಕಾವ್ಯಶ್ರೀ ಉಪಯೋಗಿಸಿದರೂ ಕೂಡ ಈಕೆಯ ಕೂದಲು ಉದುರುವುದು ಕಡಿಮೆಯಾಗಲಿಲ್ಲ. ದಿನೇದಿನೇ ಕಾವ್ಯಶ್ರೀ ಕೂದಲು ಉದುರುವಿಕೆ ಜಾಸ್ತಿಯಾಗುತ್ತಾ ಬಂತ. ಕೊನೆಗೆ ಕಾವ್ಯಶ್ರೀ ತಲೆಯ ಸಂಪೂರ್ಣ ಕೂದಲುಗಳು ಉದುರಿ ಹೋದವು. ಕೂದಲುಗಳನ್ನು ಕಳೆದುಕೊಂಡಿದ್ದೇ ತಡ ಕಾವ್ಯಶ್ರೀ ಆತ್ಮಸ್ಥೈರ್ಯವನ್ನು ಕೂಡ ಕಳೆದುಕೊಂಡಳು ತನ್ನ ಸೌಂದರ್ಯವೇ ಹಾಳಾಯ್ತು ಅಂತ ಕಾವ್ಯಶ್ರೀ ಅಂದುಕೊಂಡ್ಲು

ಕೊನೆಗೆ ಕಾವ್ಯಶ್ರೀ ತೆಗೆದುಕೊಂಡು ಬಾರದಂಥ ನಿರ್ಧಾರವನ್ನು ತೆಗೆದುಕೊಂಡ್ಲು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಾವ್ಯಶ್ರೀ ಆ’ತ್ಮಹ’ತ್ಯೆಗೆ ಶರಣಾಗಿದ್ದಾಳೆ. ಸಂಪೂರ್ಣವಾಗಿ ಕೂದಲನ್ನು ಕಳೆದುಕೊಂಡಿದ್ದು ಕಾವ್ಯಶ್ರೀಗೆ ಅರಗಿಸಿಕೊಳ್ಳಲಾಗಲಿಲ್ಲ. ಕಾವ್ಯಶ್ರೀ ಕೇವಲ 22 ವರ್ಷ ವಯಸ್ಸಾಗಿತ್ತು. ಇನ್ನೂ ಬಾಳಿ ಬದುಕಬೇಕಾದ ಹೆಣ್ಣುಜೀವ ಕೂದ್ಲು ಕಳೆದು ಕೊಂಡಿದ್ದ ಚಿಕ್ಕ ವಿಷಯಕ್ಕೆ ಮನನೊಂದುಕೊಂಡು ತನ್ನ ಜೀವವನ್ನೇ ಕಳೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ.

ಇದೇ ರೀತಿಯ ಘಟನೆ ಬೆಂಗಳೂರಿನಲ್ಲೂ ಕೂಡ ನಡೆದಿತ್ತು . 31 ವರ್ಷ ವಯಸ್ಸಿನ ದೀಪಾ ಎಂಬ ಮಹಿಳೆ ಕೂದಲು ಉದುರುವ ಸಮಸ್ಯೆಯಿಂದ ಸಂಪೂರ್ಣವಾಗಿ ಕೂದಲನ್ನು ಕಳೆದುಕೊಂಡು ಆತ್ಮಸ್ಥೈರ್ಯವನ್ನು ಕಳೆದುಕೊಂಡಿದ್ದರು. ಕೂದಲನ್ನು ಕಳೆದುಕೊಂಡ ವಿಷಯಕ್ಕೆ ಮನನೊಂದುಕೊಂಡು ತನ್ನ 3 ವರ್ಷದ ಪುಟ್ಟ ಮಗಳನ್ನು ಮುಗಿಸಿ ದೀಪಾ ಆ’ತ್ಮಹತ್ಯೆ’ಗೆ ಶರಣಾಗಿದ್ದಳು. ಜೀವನದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತೆ ಮನುಷ್ಯ ಪರಿಹಾರವನ್ನು ಹುಡುಕಲು ಪ್ರಯತ್ನಿಸದೆ ಇಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು.

Leave a Comment

error: Content is protected !!