ದಿನಕ್ಕೆ ನೂರು ಲೀಟರ್ಗಿಂತ ಹೆಚ್ಚು ಹಾಲು ಕೊಡುವ ಹಸು, ಇದರ ಆದಾಯ ಎಷ್ಟಿದೆ ಗೊತ್ತೇ ಕೇಳಿದರೆ ಶಾಕ್ ಆಗ್ತೀರಾ

ಸಾಮಾನ್ಯವಾಗಿ ಹಳ್ಳಿಯ ಕಡೆ ಎಲ್ಲರ ಮನೆಯಲ್ಲೂ ಹಸು ಇರುತ್ತದೆ. ಕಾಮಧೇನು ಎಂದು ಕರೆಯುತ್ತೇವೆ. ಅದರ ಪ್ರಯೋಜನ ಬಹಳ ಇದೆ. ಕಾಮಧೇನುವಿನಲ್ಲಿ 9ಕೋಟಿ ದೇವತೆಗಳು ಇರುತ್ತವೆ ಎಂದು ಹೇಳುತ್ತಾರೆ. ಹಾಗೆಯೇ ನಾವು ನೋಡುವ ಪ್ರಕಾರ ಹಸುಗಳು ಅದರಲ್ಲಿಯೂ ಎಚ್.ಎಫ್. ಜಾತಿಯ ಹಸುಗಳು ದಿನಕ್ಕೆಸುಮಾರು 8ರಿಂದ 35ಲೀಟರ್ ಗಳವರೆಗೂ ಹಾಲು ಕೊಡುತ್ತವೆ. ಆದರೆ ಈ ಕಾಮಧೇನು ದಿನಕ್ಕೆ 100ರಿಂದ 110ಲೀಟರ್ ನಷ್ಟು ಹಾಲನ್ನು ನೀಡುತ್ತದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಇದು ಒಂದು ವಿಶೇಷಕಾಮಧೇನು ಆಗಿದೆ. ಇದು ಹಾಲು ಕೊಡುವ ಎಚ್.ಎಫ್. ಹಸು. ಈ ಕಾಮಧೇನು ಪ್ರತಿದಿನ ಸಾವಿರಾರು ರೂಪಾಯಿ ಅದಾಯನೀಡುತ್ತದೆ. ಅಲ್ಯೆನ್ ಡೈರಿ ಫಾರ್ಮ್ ಎಂಬುದು ಹೈನುಗಾರರ ಜಗತ್ತಿನ ಒಂದು ಆಕರ್ಷಣೀಯ ಕೇಂದ್ರವಾಗಿದೆ. ಇದಕ್ಕೆ ಕಾರಣವೇ ಕಾಮಧೇನು. ಜಗತ್ತಿನಲ್ಲಿ ತುಂಬಾ ರೀತಿಯಹಸು ತಳಿಗಳಿವೆ. ಆದರೆ ಅವುಗಳಲ್ಲಿ ಅತಿ ಹೆಚ್ಚುಹಾಲು ಕೊಡುವ ಜಾತಿಎಂದರೆ ಅದು ಎಚ್. ಎಫ್.ಆದರೂ ಎಚ್. ಎಫ್. ತಳಿಗಳು ಸುಮಾರು 8 ರಿಂದ 35ಲೀಟರ್ ನಷ್ಟು ಹಾಲುನೀಡುತ್ತವೆ. ಅಲ್ಲಲ್ಲಿ ಅಪರೂಪವಾಗಿ 45 ರಿಂದ 50ಲೀಟರ್ ನಷ್ಟು ಹಾಲು ನೀಡುವಂತಹ ಹಸುಗಳನ್ನ ಅಪರೂಪದಲ್ಲಿ ಕಾಣಬಹುದು.

ಆದರೆ ಇದು ಕೇಳುವಾಗನಮಗೆ ಅವಿಶ್ವಾಸನೀಯ ಎಂದು ಅನಿಸುತ್ತದೆ. ಆದರೆ ಇದು ಸತ್ಯ ಸಂಗತಿ ಆಗಿದೆ. ಹಾಗೆಯೇ ಇದು ಗಿನ್ನಿಸ್ ದಾಖಲೆ ಆಗಿದೆ. ದುಬೈನಲ್ಲಿಇರುವ ಅಲ್ಯೆನ್ ಡೇರಿ ಫಾರ್ಮ್ ನಲ್ಲಿ 4037ನಂಬರ್ನಲ್ಲಿ ರಿಜಿಸ್ಟರ್ ಆದಂತಹಅಮೆರಿಕದ ಡಚ್ಚಿ ಇದುಎಚ್. ಎಫ್. ಕ್ರಾಸಿನಲ್ಲಿ ಇರುವಂತಹ ಹಸು. ಪ್ರತಿದಿನ ಮೂರು ಕರಾವಣೆಯಲ್ಲಿ ಬರೋಬ್ಬರಿ 100ರಿಂದ 110 ಲೀಟರ್ ನಷ್ಟು ನೀಡುತ್ತದೆ. ಇದಕ್ಕೆ 7ರಿಂದ 8 ತಾಸಿಗೊಮ್ಮೆ ಕರಾವು ಮಾಡಲಾಗುತ್ತದೆ. 3ಕರಾವಿನಲ್ಲಿ 35ಲೀಟರ್ ನಷ್ಟು ಹಾಲನ್ನು ಒಂದು ಬಾರಿ ನೀಡುತ್ತದೆ.

ಜಗತ್ತಿನ ಬೇರೆ ಬೇರೆ ಕಡೆಯಿಂದ ಬಂದಂತಹ ವಿಜ್ಞಾನಿಗಳು ಈ ಹಸುವನ್ನು ಪರೀಕ್ಷೆ ಮಾಡಿದರು. ಆದರೆ ಈ ಹಸುವಿನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ. ಹಾಗೆಯೇ ಹಾಲಿನ ಕೊಬ್ಬಿನ ಅಂಶ ಎಲ್ಲವನ್ನು ಪರೀಕ್ಷೆ ಮಾಡಿದಾಗ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಈ ಹಸುವನ್ನು ನಿರ್ವಹಿಸಲು ಒಬ್ಬ ಕೆಲಸಗಾರನನ್ನು ನೇಮಿಸಿದ್ದಾರೆ. ಇದಕ್ಕೆ ಸುಮಾರು ದಿನಕ್ಕೆನಲವತ್ತು ಕೆಜಿ ಆಹಾರವನ್ನುನೀಡಲಾಗುತ್ತದೆ. ಹಸಿಹುಲ್ಲು ಮತ್ತು ಒಣಹುಲ್ಲು ನೀಡಲಾಗುತ್ತದೆ. ಅದನ್ನುಪರೀಕ್ಷೆ ಮಾಡಿ ಅದಕ್ಕೆ ಬೇಕಾದಂತಹ ಮಿನರಲ್ಗಳನ್ನು ನೀಡಲಾಗುತ್ತದೆ. ಈ ಕಾಮಧೇನು ಪ್ರತಿದಿನ ನಾಲ್ಕ ರಿಂದ ಐದು ಸಾವಿರಾರು ರೂಪಾಯಿ ಅದಾಯನೀಡುತ್ತದೆ

Leave a Comment

error: Content is protected !!