ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸ್ವೀಟಿ ಶೆಟ್ಟಿ ಎಂದೇ ಖ್ಯಾತಿಯಾಗಿರುವ ಅನುಷ್ಕಾ ಶೆಟ್ಟಿ ಅವರು ಭಾರತ ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಇವರಿಗೆ ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಸ್, ನಂದಿ ಅವಾರ್ಡ್, ತಮಿಳುನಾಡು ಸ್ಟೇಟ್ ಫಿಲಂ ಅವಾರ್ಡ್ ಗಳು ದೊರೆತಿವೆ. 47 ಚಿತ್ರಗಳಲ್ಲಿ ನಟಿಸಿರುವ ಇವರಿಗೆ ‘ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್’ ಎಂಬ ಬಿರುದು ಕೂಡ ಇದೆ.

ಬಿಲ್ಲ, ಮಿರ್ಚಿ, ಬಾಹುಬಲಿ, ಸೈಜ್ ಜೀರೋ, ಅರುಂಧತಿ, ಭಾಗಮತಿಗಳಂತಹ ಹಿಟ್ ಚಿತ್ರಗಳನ್ನು ಕೊಟ್ಟ ಅನುಷ್ಕಾ ಶೆಟ್ಟಿ ಅವರ ವಯಸ್ಸು 40. ಸಕ್ಕತ್ ಕ್ಯೂಟ್ ಆಗಿರುವ ಇವರಿಗೆ ವಯಸ್ಸೆಷ್ಟಾಗಿದೆ ಎಂಬುದೇ ತಿಳಿಯುವುದಿಲ್ಲ ಎಂದು ಫ್ಯಾನ್ಸ್ ಹೇಳ್ತಿದ್ದಾರಂತೆ. ವಯಸ್ಸು 40ರ ಆಸುಪಾಸಿನಲ್ಲಿದ್ದರೂ ಇವರು ಮದುವೆಯಾಗಿರಲಿಲ್ಲ. ಆಗಾಗ ಇವರ ಮದುವೆ ವಿಚಾರವಾಗಿ ಊಹಾ ಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇವರು ಸಪ್ತಪದಿ ತುಳಿಯುವ ಖುಷಿ ವಿಚಾರವನ್ನು ಯಾವಾಗ ತಿಳಿಸುತ್ತಾರೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರಂತೆ.

ಆದರೆ ಇದೀಗ ಕರಾವಳಿಯ ಬ್ಯೂಟಿ, ಅನುಷ್ಕಾ ಶೆಟ್ಟಿ ಅವರು ಶೀಘ್ರದಲ್ಲೇ ಹಸಿಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದ ಅಭಿಮಾನಿಗಳು, ಯಾವಾಗ?ಯಾರೊಂದಿಗೆ ಮದುವೆಯಾಗಲಿದ್ದಾರೆ? ಎಂದು ಪ್ರಶ್ನಿಸಿದ್ದಾರಂತೆ. ಸೌತ್ ಸಿನಿಮಾದ ದೇವಸೇನಾಳ ಮನೆಯಲ್ಲಿ ಮದುವೆಯ ತಯಾರಿ ಮಾಡಲಾಗುತ್ತಿದೆ. ಸದ್ಯ ಅವರು ನವೀನ್ ಪಾಲಿ ಶೆಟ್ಟಿ ಅವರೊಂದಿಗೆ ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಮದುವೆಯ ವಿಚಾರವಾಗಿ ಈವರೆಗೆ ಅಧಿಕೃತವಾಗಿ ಹೇಳಿರದ ಅನುಷ್ಕಾ ಶೆಟ್ಟಿ ಅವರು ಸದ್ಯದಲ್ಲೇ ಅಭಿಮಾನಿಗಳಿಗೆ ಸಂತಸದ ಸುದ್ದಿವೊಂದನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.ಅನುಷ್ಕಾ ಶೆಟ್ಟಿ ಮದುವೆಯಾಗಲಿರುವ ಹುಡುಗ ದಕ್ಷಿಣ ಭಾರತದ ದೊಡ್ಡ ಬ್ಯುಸಿನೆಸ್ ಮ್ಯಾನ್ ಅಂತೆ. ಆದರೆ ಆತನ ಹೆಸರು ಮಾತ್ರ ಇನ್ನೂ ಕೂಡ ಹೊರಬಂದಿಲ್ಲ

ಬಾಹುಬಲಿಯ ಎರಡು ಪಾರ್ಟ್ಗಳು ತೆರೆಕಂಡು ಸಕ್ಸಸ್ ಆದ ಬಳಿಕ, ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಜೋಡಿಯನ್ನು ಪರದೆಯ ಮೇಲೆ ನೋಡಿ, ಅವರ ಅಭಿನಯಕ್ಕೆ ಮೆಚ್ಚಿ, ಅವರಿಬ್ಬರ ಮಧ್ಯೆ ಪ್ರೀತಿ ಇದೆಯೆ?? ಎಂಬ ಸಂಶಯ ದೊಂದಿಗೆ ವದಂತಿಗಳು ಹರಿದಾಡಿದ್ದವು. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಅನುಷ್ಕಾ ಶೆಟ್ಟಿ ಅವರು ‘ನಾವಿಬ್ಬರು ಬೆಸ್ಟ್ ಫ್ರೆಂಡ್ಸ್; ನಮ್ಮಿಬ್ಬರ ಮಧ್ಯೆ ಯಾವುದೇ ಪ್ರೀತಿ ಪ್ರೇಮವಿಲ್ಲ’ ಎಂದಿದ್ದರು. ಇದೀಗ ಅವರು ಅವರ ಕುಟುಂಬದ ಗುರು ಹಿರಿಯರಿಂದ ನಿಶ್ಚಿತವಾದ ವರನೊಂದಿಗೆ ಹಸಿಮಣೆ ಏರಲಿದ್ದಾರೆ.ಒಟ್ಟಾರೆ ರೀಚ್ ಬಿಸಿನೆಸ್ ಮ್ಯಾನ್ ನನ್ನು ಮದುವೆಯಾಗೋದು ಅನುಷ್ಕಾ ಶೆಟ್ಟಿ ಕನ್ ಫರ್ಮ್ ಎಂಬ ಮಾತು ಕೇಳಿಬರುತ್ತಿದೆ. ದಕ್ಷಿಣ ಭಾರತದ ಸಿನಿರಂಗದ ಮೋಹಕ ನಟಿ ಅನುಷ್ಕಾ ಶೆಟ್ಟಿ ಅವರನ್ನು ಮದುವೆಯಾಗಲಿರುವ ಅದೃಷ್ಟವಂತ ವರ ಯಾರು ಎಂಬುದನ್ನು ಕಾದು ನೋಡಬೇಕಿದೆ.

By admin

Leave a Reply

Your email address will not be published.