ಪಂಡರಾಪುರ ವಿಠಲಮೂರ್ತಿ ನೀವು ತಿಳಿಯದ ಅತಿ ದೊಡ್ಡ ರಹಸ್ಯ


ಸಾಮಾನ್ಯವಾಗಿ ನಾವು ಹಂಪಿಯನ್ನು ನೋಡಿಯೇ ಇರುತ್ತೇವೆ
ಯಾಕಂದರೆ ಹಂಪಿಯು ಒಂದು ಕರ್ನಾಟಕದ ವಿಶ್ವ ಪ್ರಸಿದ್ಧ ಯುನೆಸ್ಕೋ ತಾಣವಾಗಿದೆ ಅಲ್ಲದೆ ಹಂಪಿಯು ಕರ್ನಾಟಕದ ಸುವರ್ಣ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಹೇಳುತ್ತದೆ ಭಾರತದ ಇತಿಹಾಸದಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯನ ಕಾಲವನ್ನು ಸುವರ್ಣ ಯುಗ ಎಂದೇ ಪರಿಗಣಿಸಲಾಗುತ್ತದೆ ಅಲ್ಲದೇ ಹಂಪಿಯು ಬಹಳಷ್ಟು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ

ಹಂಪಿಯಲ್ಲಿ ನಾವು ನೋಡಬಹುದಾದ ಎರಡು ದೇವಸ್ಥಾನಗಳು ಎಂದರೆ ವಿರೂಪಾಕ್ಷ ದೇವಾಲಯ ಮತ್ತೊಂದು ಪುರಂದರದಾಸರು ಹಾಡಿಹೊಗಳುವ ವಿಜಯವಿಠಲ ದೇವಾಲಯ ಆದರೆ ಈ ವಿಜಯವಿಠ್ಠಲ ದೇವಸ್ಥಾನದ ವಿಷಯಕ್ಕೆ ಬಂದರೆ ದೇವಸ್ಥಾನದಲ್ಲಿ ನಾವು ಗೋಪುರದ ಮೇಲೆ ಇರುವಂತಹ ವಿಠಲನನ್ನು ಮಾತ್ರ ನೋಡಬಹುದು ಅಷ್ಟೇ ಆದರೆ ನಿಜವಾದ ಗರ್ಭಗುಡಿಯಲ್ಲಿ ಇರಬೇಕಾದ ವಿಠಲನ ವಿಗ್ರಹ ಅಲ್ಲಿ ಕಾಣಸಿಗುವುದಿಲ್ಲ

ಹಾಗಾದರೆ ಆ ಗರ್ಭಗುಡಿಯಲ್ಲಿ ಇದ್ದಂತಹ ವಿಜಯವಿಠ್ಠಲನ ವಿಗ್ರಹ ಏನಾಯಿತು? ಹಂಪಿಯ ಮೇಲೆ ದಾಳಿಯಾದಾಗ ಈ ವಿಜಯವಿಠ್ಠಲನ ವಿಗ್ರಹ ಮಾಯವಾಯಿತೇ? ಹಾಗಾದರೆ ಆ ಮೂರ್ತಿ ಎಲ್ಲಿ ಹೋಯಿತು ಏನಾಯಿತು ಆ ಮೂರ್ತಿಯನ್ನು ಹೋದವರು ಯಾರು ಈಗ ಮೂರ್ತಿ ಎಲ್ಲಿದೆ ಎಂಬ ಸಂಶಯ ನಿಮ್ಮಲ್ಲಿ ಇದ್ದಲ್ಲಿ ಆ ಪ್ರಶ್ನೆಗೆ ಉತ್ತರಗಳನ್ನು ನಾವಿಂದು ನೀಡುತ್ತಿದ್ದೇವೆ

ಇಂದು ಜಗದ್ವಿಖ್ಯಾತಿ ಯನ್ನು ಹೊಂದಿರುವ ದೇವಾಲಯ ಎಂದರೆ ಅದು ಪಂಡರಾಪುರದ ಶ್ರೀ ವಿಜಯ ವಿಠಲ ದೇವಾಲಯ ಈ ದೇವಾಲಯವು ಮಹಾರಾಷ್ಟ್ರದ ಭೀಮಾ ನದಿಯ ಬಲದಂಡೆಯ ಮೇಲಿರುವ ಸೋಲಾಪುರ ಜಿಲ್ಲೆಯ ಪಂಡರಾಪುರದಲ್ಲಿದೆ ಈ ಸ್ಥಳದಲ್ಲಿ ಬೀಮಾನದಿ ಅರ್ಧಚಂದ್ರಾಕೃತಿಯಲ್ಲಿ ಹರಿಯುವುದರಿಂದ ಭೀಮಾ ನದಿಯನ್ನು ಚಂದ್ರಭಾಗ ಎಂದು ಕರೆಯಲಾಗುತ್ತದೆ

ಕರ್ನಾಟಕದಲ್ಲಿನ ಹಲವಾರು ಹರಿದಾಸರು ಈ ವಿಜಯವಿಠಲ ನನ್ನು ಹಾಡಿಹೊಗಳಿದ್ದಾರೆ ತಮ್ಮ ಕೀರ್ತನೆಗಳಲ್ಲಿ ವಿಜಯವಿಠ್ಠಲನ ಮಹಿಮೆಗಳನ್ನು ಕೊಂಡಾಡಿದ್ದಾರೆ ಕೆಲವು ದಂತಕತೆಗಳ ಪ್ರಕಾರ ಈಗ ಪಂಡರಾಪುರದಲ್ಲಿ ಇರುವಂತಹ ಶ್ರೀವಿಜಯವಿಠ್ಠಲನ ಅಂದು ಹಂಪಿಯಲ್ಲಿ ಇದ್ದಂತಹ ವಿಜಯವಿಠ್ಠಲ
ವಿಜಯನಗರ ಸಾಮ್ರಾಜ್ಯ ಕೊನೆಗೊಂಡಾಗ ಅಲ್ಲಿದ್ದಂತಹ ವಿಠಲ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಡರಾಪುರದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂಬ ನಂಬಿಕೆ ಇದೆ

ಆದರೆ ಅದಕ್ಕಿಂತ ಮುಂಚಿನಿಂದಲೂ ಪಂಡರಾಪುರ ವಿಜಯವಿಠಲನ ಹೆಸರುವಾಸಿಯಾಗಿತ್ತು ಎಂದು ಹಲವಾರು ಸಾಕ್ಷಿಗಳು ಹೇಳುತ್ತದೆ ಹಾಗಾದರೆ ದಂತಕಥೆಯು ವಿರೋಧಭಾಸವೆಂದು ಭವಿಸಬೇಕೆ? ಹಾಗಾದರೆ ಹಂಪಿಯಲ್ಲಿ ಇದ್ದಂತಹ ವಿಜಯವಿಠಲನ ಮೂರ್ತಿ ಹೋಗಿದ್ದಾದರೂ ಎಲ್ಲಿಗೆ? ಹಾಗಾದರೆ ನಾವು ಇಲ್ಲಿ ಪಂಡರಾಪುರದ ಇತಿಹಾಸವನ್ನು ಕೂಡ ತಿಳಿದುಕೊಳ್ಳುವುದು ಮುಖ್ಯವಾಗಿದೆ

ಹಿಂದಿನ ಶಾಸನಗಳ ಪ್ರಕಾರ ಈಗಿನ ಪಂಡರಾಪುರಕ್ಕೆ ಪಂಡರಿಗೆ, ಪಂಡರಂಗೆ, ಪಾಂಡುರಂಗ ಕ್ಷೇತ್ರ ಎಂಬ ಹೆಸರುಗಳು ಇದ್ದವು. ಈ ಬಂಡರ ಎನ್ನುವುದು ಹಚ್ಚ ಕನ್ನಡದ ಹಬ್ಬದ ವಾಗಿದೆ ಪಂಡರ ಅಂದರೆ ಕನ್ನಡದ ಹಂದರ ಎಂಬ ಪದದಿಂದ ಬಂದಿರುವುದಾಗಿದೆ ಎಂದು ಖ್ಯಾತ ಭಾಷಾವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ ಈ ಚಿತ್ರದಲ್ಲಿ ದೊರೆತಿರುವ ಶಾಸನಗಳ ಪ್ರಕಾರ ಇಲ್ಲಿ ಈ ಹಿಂದೆ ಹಂದರಗಳ ಮೇಲೆ ದ್ರಾಕ್ಷಿಗಳನ್ನು ಬೆಳೆಸುತ್ತಿದ್ದರು ಎಂದು ತಿಳಿದುಬರುತ್ತದೆ. ಆದ್ದರಿಂದ ಈ ಊರಿಗೆ ಪಂಡರ ಎಂದು ಕರೆಯುತ್ತಿದ್ದರು ಎಂದು ನಂಬಲಾಗಿದೆ ಬಂಡಾರವೇ ಕಾಲಂತರದಲ್ಲಿ ಪಂಡರಾಪುರ ಎಂದು ಹೆಸರಾಗಿದೆ ಎಂದು ಇಂದಿಗೂ ನಂಬಲಾಗಿದೆ

ಇಲ್ಲಿನ ವಿಠಲನ ಕುರಿತಾದ ಇನ್ನೊಂದು ದಂತಕಥೆಯು ಜನಜನಿತವಾಗಿದೆ ಆರು ವರ್ಷಗಳ ಹಿಂದೆ ಪುಂಡಲೀಕ ಎಂಬ ಭಕ್ತನೊಬ್ಬ ವಿಷ್ಣುವನ್ನು ಆರಾಧಿಸುತ್ತಿದ್ದನು ಒಮ್ಮೆ ಆತನ ಭಕ್ತಿಗೆ ಮೆಚ್ಚಿ ಭಗವಾನ್ ವಿಷ್ಣು ದೇವರು ಪ್ರತ್ಯಕ್ಷವಾಗಿ ಆತನ ಮನೆಗೆ ಬಂದಾಗ ಪುಂಡಲೀಕನು ತನ್ನ ತಂದೆ ಮತ್ತು ತಾಯಿಯ ಸೇವೆಯಲ್ಲಿ ನಿರತನಾಗಿದ್ದನು

ಇದನ್ನು ಕಂಡಂತಹ ವಿಷ್ಣುವು ಅಲ್ಲೇ ನಿಂತನು. ಎಷ್ಟು ಸಮಯವಾದರೂ ಪುಂಡಲೀಕ ಎಂಬ ಭಕ್ತನು ವಿಷ್ಣುವಿನ ಕಡೆಗೆ ನೋಡಲೇ ಇಲ್ಲ ಆತನು ತನ್ನ ತಂದೆ ತಾಯಿಯರ ಸೇವೆಯಲ್ಲಿ ಮಗ್ನನಾಗಿದ್ದನು ಇದನ್ನು ಕಂಡ ವಿಷ್ಣುವು ತಾನು ಬಂದಿರುವುದಾಗಿ ಪುಂಡರೀಕನಿಗೆ ಎಚ್ಚರಿಸಲಾಗಿ ಪುಂಡಲೀಕನು ತನ್ನ ತಂದೆ-ತಾಯಿಗಳ ಸೇವೆಯ ತರುವಾಯ ವಿಷ್ಣುವರ್ಧನ ಬರುವುದಾಗಿ ಹೇಳಿದನು

ಇದನ್ನು ಗಮನಿಸಿದ ವಿಷ್ಣುವು ತಾನು ಇಲ್ಲಿ ನಿಂತು ಏನು ಮಾಡಲಿ ಎಂದು ಕೇಳಿದಾಗ ಆತನು ಒಂದು ಇಟ್ಟಿಗೆಯನ್ನು ವಿಷ್ಣುವಿನ ಕಡೆಗೆ ಎಸೆದು ಇಟ್ಟಿಗೆಯ ಮೇಲೆ ನಿಂತಿರು ಎಂದು ಹೇಳಿದನು ಭಕ್ತ ಪುಂಡಲೀಕನ ಎಷ್ಟು ಸಮಯವಾದರೂ ಬರೆದ ಕಾರಣ ಭಗವಾನ್ ವಿಷ್ಣು ಸೊಂಟದ ಮೇಲೆ ಕೈಯಿಟ್ಟು ಇಟ್ಟಿಗೆಯ ಮೇಲೆ ಅಲ್ಲಿಯೇ ನೆಲೆನಿಂತರು

ಆದಕಾರಣ ಅಲ್ಲಿ ನೆಲೆನಿಂತ ವಿಷ್ಣುವನ್ನು ವಿಠಲ ಎಂದು ಕರೆಯಲಾಯಿತು ವಿಠ್ಠಲ ಎಂದರೆ ಸಂಸ್ಕೃತದಲ್ಲಿ ಇಟ್ಟಿಗೆ ಎಂದರ್ಥ, ಇಟ್ಟಿಗೆಯ ಮೇಲೆ ವಿಷ್ಣುವು ನಿಂತಿದ್ದಕ್ಕೆ ಅವನನ್ನು ವಿಠ್ಠಲ ಎಂದು ಕರೆಯುತ್ತಾರೆ. ಇನ್ನೂ ಕೆಲವು ಮೂಲಗಳ ಪ್ರಕಾರ ಪಂಡರಾಪುರ ದಲ್ಲಿದ್ದ ವಿಠ್ಠಲನ ಮೂರ್ತಿಯನ್ನು ಶ್ರೀಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ತಂದು ಪ್ರತಿಷ್ಠಾಪಿಸಿದನು ಎನ್ನಲಾಗಿದೆ

ಇನ್ನು ಕೆಲವು ಮೂಲಗಳ ಪ್ರಕಾರ ಪಂಡರಾಪುರಕ್ಕೆ ಅನ್ಯಧರ್ಮೀಯರ ಹಾವಳಿಯಿಂದ ಪತಿಯನ್ನು ರಕ್ಷಿಸುವುದಕ್ಕಾಗಿ ಅಲ್ಲಿನ ಮೂರ್ತಿಯನ್ನು ವಿಜಯನಗರಕ್ಕೆ ವರ್ಗಾಯಿಸಿದ ನಂತೆ ಆನಂತರದಲ್ಲಿ ಪಾಲ ದಾಸ ಎಂಬ ಒಬ್ಬ ಭಕ್ತನು ಈ ವಿಜಯವಿಠಲ ನನ್ನು ಪಂಡರಾಪುರಕ್ಕೆ ತೆಗೆದುಕೊಂಡು ಮರಳುತ್ತಾನೆ ಎಂಬ ನಂಬಿಕೆಯೂ ಇದೆ ಆದರೆ ಈ ಮೇಲ್ಕಂಡ ಕಥೆಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದರ ಬಗ್ಗೆ ಇಂದಿಗೂ ಕೂಡ ನಿಖರವಾಗಿ ಯಾರಿಗೂ ತಿಳಿದಿಲ್ಲ

ಹಾಗಾಗಿ ಈ ಬಗ್ಗೆ ಸಂಶೋಧನೆಗಳು ನಡೆಯಬೇಕಾಗಿದೆ ಅದೇನಾದರೂ ಪಂಡರಾಪುರ ದಲ್ಲಿರುವ ವಿಜಯವಿಠ್ಠಲನ ವಿಗ್ರಹದಿಂದ ತಂದದ್ದಲ್ಲ ಎಂದು ಸಾಬೀತಾದರೆ ಹಂಪಿಯಲ್ಲಿ ಇದ್ದಂತಹ ವಿಜಯವಿಠಲನ ವಿಗ್ರಹ ಎಲ್ಲಿ ಹೋಯಿತು ಎಂಬುದು ಇಂದಿಗೂ ಒಂದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ…


Leave A Reply

Your email address will not be published.