Vanshika: ಟೆಲಿವಿಷನ್ ಮೂಲಕ ಮಾಸ್ಟರ್ ಆನಂದ್ ಮಗಳು ವಂಶಿಕಾ ಇಷ್ಟು ಚಿಕ್ಕ ವಯಸ್ಸಿಗೆ ಪಡೆಯುತ್ತಿರುವ ಒಟ್ಟು ಹಣ ಎಷ್ಟು ಗೊತ್ತಾ?

Vanshika Anjani Kashyap ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಗಮನಿಸಿದರೆ ಅಲ್ಲಿ ಹಲವಾರು ಬಾಲ ನಟರು ಕಂಡುಬರುತ್ತಾರೆ. ಅವರಲ್ಲಿ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಬಾಲ ನಟರು ಕೆಲವೇ ಕೆಲವು ಮಂದಿ ಮಾತ್ರ. ಅವರಲ್ಲಿ ನಟ ಮಾಸ್ಟರ್ ಆನಂದ್(Master Anand) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಲ ನಟನಾಗಿ ಅವರು ಯಾವ ರೀತಿಯಲ್ಲಿ ಚಿತ್ರರಂಗವನ್ನು ರಂಜಿಸಿದ್ದರು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಾಯಕ ನಟ ಆಗುತ್ತಾರೆ ಎಂಬುದಾಗಿ ಹಲವಾರು ಜನರು ಅಂದುಕೊಂಡಿದ್ದರು ಆದರೆ ಮಾಸ್ಟರ್ ಆನಂದ್ ಅವರಿಗೆ ನಾಯಕನ ಪಾತ್ರದಲ್ಲಿ ನಟಿಸುವಂತಹ ಅವಕಾಶಗಳು ಸಿಗದ ಕಾರಣ ಹಾಸ್ಯ ಪಾತ್ರಗಳಲ್ಲಿ ಅವರು ಮುಂದುವರೆಯಬೇಕಾಯಿತು. ಇನ್ನು ಇತ್ತೀಚಿನ ದಿನಗಳಲ್ಲಿ ಕಿರುತರೆ ವಾಹಿನಿಗಳಲ್ಲಿ(Kannada Television) ಕಾರ್ಯಕ್ರಮಗಳ ನಿರೂಪಕನಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಮಾಸ್ಟರ್ ಆನಂದ್.

ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಈಗ ಅವರ ಮಗಳಾಗಿರುವ ವಂಶಿಕ(Vanshika) ಕೂಡ ದೊಡ್ಡ ಮಟ್ಟದ ಪ್ರತಿಭೆಯಾಗುವ ಸೂಚನೆಯನ್ನು ಈಗಾಗಲೇ ನೀಡಿದ್ದಾಳೆ. ಈಗಾಗಲೇ ಗಿಚ್ಚಿ ಗಿಲಿ ಗಿಲಿ(Gicchi Gili Gili) ಕಾರ್ಯಕ್ರಮದ ವಿನ್ನರ್ ಕೂಡ ಆಗಿರುವ ವಂಶಿಕ ಕಿರುತರೆ ಕಾರ್ಯಕ್ರಮಗಳ ಮೂಲಕ ತಿಂಗಳಿಗೆ ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾಳೆ ಎನ್ನುವ ಕುತೂಹಲ ಹಲವಾರು ಜನರಿಗೆ ಇದೆ.

ಮೂಲೆಗಳ ಪ್ರಕಾರ ಕಿರುತೆರೆಯ ಕಾರ್ಯಕ್ರಮಗಳ ಮೂಲಕ ಮಾಸ್ಟರ್ ಆನಂದ ಅವರ ಪುತ್ರಿಯಾಗಿರುವ ವಂಶಿಕ ಅಂಜನಿ ಕಶ್ಯಪ್(Vanshika Anjani Kashyap) ಏನಿಲ್ಲವೆಂದರೂ ತಿಂಗಳಿಗೆ ಒಂದರಿಂದ ಒಂದುವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಾಳೆ ಎನ್ನುವ ಸುದ್ದಿ ಇದೆ. ಕೆಲವು ಕಾರ್ಯಕ್ರಮಗಳು ಸ್ಪರ್ಧಿಯಾಗಿ ಇನ್ನು ಕೆಲವು ಕಾರ್ಯಕ್ರಮಗಳಲ್ಲಿ ಆಂಕರ್ ಆಗಿ ಕೂಡ ಕಾಣಿಸಿಕೊಂಡಿದ್ದಾಳೆ. ಪ್ರತಿ ಎಪಿಸೋಡಿಗೆ 20 ಸಾವಿರ ರೂಪಾಯಿವರೆಗೆ ಸಂಭಾವನೆಯನ್ನು ವಂಶಿಕಾ ಪಡೆಯುತ್ತಾಳಂತೆ.

Leave A Reply

Your email address will not be published.