ದಯವಿಟ್ಟು ಶೇರ್ ಮಾಡಿ ಗೆಳೆಯರೇ

ನನ್ನಮ್ಮ ಸೂಪರ್ ಸ್ಟಾರ್ 2 ಶೋ ಅನ್ನು ನಡೆಸಿಕೊಡಲಿರುವ ಪುಟ್ಟ ಹಕ್ಕಿ ಯಾರು??
ರಿಯಾಲಿಟಿ ಶೋ ಗಳನ್ನು ನಡೆಸಿಕೊಡೋದು ಸುಲಭದ ಮಾತೇನಲ್ಲ.ಭಾಷೆಯಲ್ಲಿ ಸ್ಪಷ್ಟತೆ ಇರಬೇಕು; ಧೈರ್ಯವಿರಬೇಕು; ಜನರನ್ನು ಸೆಳೆಯುವಂತ ಕೆಪ್ಯಾಸಿಟಿ ಇರಬೇಕು. ಈ ಎಲ್ಲ ಗುಣ ಹೊಂದಿರುವ ಪುಟ್ಟ ಬಾಲಕಿ ಕನ್ನಡ ಕಿರುತೆರೆಯ ‘ನನ್ನಮ್ಮ ಸೂಪರ್ ಸ್ಟಾರ್ 2’ ಶೋ ನಲ್ಲಿ ನಿರೂಪಣೆ ಮಾಡಲಿದ್ದಾಳೆ.

ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಈಗಾಗಲೇ ಸ್ಪರ್ಧಿಸಿರುವ ಈಕೆ ಸಕ್ಕತ್ ಕ್ಯೂಟ್ ಆಗಿದ್ದಾಳೆ. ಇನ್ನು ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಈಕೆಯದೇ ಹವಾ. ಮೈಕನ್ನು ಹಿಡಿದು ಸ್ವಲ್ಪವೂ ಹೆದರದೆ ಪಟಪಟ ಅಂತ ಮಾತಾಡೊ ಈ ಪುಟ್ಟ ಬಾಲಕಿಯ ಎಲ್ಲಾ ಸ್ಕಿಟ್ ಗಳು ವೀಕ್ಷಕರಿಗೆ ಇಷ್ಟವಾಗಿದೆ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಈ ಚೂಟಿ ಹುಡುಗಿಗೆ ನಿರೂಪಣೆ ಮಾಡುವ ಅವಕಾಶ ದೊರೆತಿದೆ .

ಆಕೆ ಯಾರು ಅಂತ ಈಗಾಗಲೇ ಗೊತ್ತಾಗಿರಬೇಕು ಅಲ್ವಾ? ವಂಶಿಕಾ.ಮಾಸ್ಟರ್ ಆನಂದ್ ಅವರ ಪುತ್ರಿ.ಅಪ್ಪನಿಗೆ ತಕ್ಕ ಮಗಳು. ವಂಶಿಕಾ ಆಕೆಯ ಸ್ವಂತಿಕೆಯಿಂದಲೇ ವೈರಲ್ ಆಗಿದ್ದಾಳೆ. ‘ಮಗಳು ವಂಶಿಕಾಳಿಂದ ಜನರು ಮತ್ತೊಮ್ಮೆ ನನ್ನನ್ನು ಪ್ರೀತಿಸುತ್ತಿದ್ದಾರೆ’ ಎಂದು ಮಾಸ್ಟರ್ ಆನಂದ್ ಭಾವಕನುಡಿಗಳನ್ನಾಡಿದ್ದರು. ವಂಶಿಕಾ ಅಂಜನಿ ಕಶ್ಯಪ್ ಮತ್ತೊಮ್ಮೆ ಕಿರುತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ತಂದೆಗೆ ಸಂತಸ ತಂದಿದೆಯಂತೆ.

ನನ್ನಮ್ಮ ಸೂಪರ್ ಸ್ಟಾರ್ ಶೋವನ್ನು ಅನುಪಮಾ ಗೌಡ ಅವರು ನಡೆಸಿಕೊಟ್ಟಿದ್ದರು.ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಯಾಗಿ ಆಯ್ಕೆಯಾದ ಅನುಪಮಾ,ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕಾಗಿ ನಿರಂಜನ್ ದೇಶಪಾಂಡೆ ಅವರೊಂದಿಗೆ ವಂಶಿಕ ವೇದಿಕೆ ಮೇಲಿರಲಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯವರು ರಿಲೀಸ್ ಮಾಡಿರುವ ಪ್ರೊಮೋ ನೋಡಿ ಖುಷಿಯಾದ ಜನ ಚೆನ್ನಾಗಿದೆ ಎಂದು ನಕ್ಕಿದ್ದಾರಂತೆ. ಒಂದರ ಹಿಂದೊಂದು ಕಾರ್ಯಕ್ರಮದಲ್ಲಿ ವಂಶಿಕಾಳಿಗೆ ಅವಕಾಶ ದೊರೆತಿದ್ದು, ಒಂದಿಷ್ಟು ವೀಕ್ಷಕರು ‘ಕರ್ನಾಟಕದಲ್ಲಿ ಚೂಟಿಯಾಗಿರುವ ಮಕ್ಕಳು ತುಂಬಾನೇ ಇದ್ದಾರೆ; ಅವರಿಗೂ ಒಂದೊಂದು ಚಾನ್ಸ್ ಕೊಟ್ಟು ನೋಡಿ’ ಎಂದಿದ್ದಾರಂತೆ.ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾಳ ತುಂಟಾಟಗಳನ್ನು ನೋಡುವರು, ನಿರೂಪಣೆ ಮಾಡಲು ಬರಲಿದ್ದಾಳೆ ಎಂಬ ಸುದ್ದಿ ತಿಳಿದು ತುಂಬಾ ಹರ್ಷ ವ್ಯಕ್ತಪಡಿಸಿದ್ದಾರಂತೆ. ಕಾರ್ಯಕ್ರಮದ ನಿರೂಪಕಿಯಾಗಿ ವಂಶಿಕ ಆನಂದ್ 1ಎಪಿಸೋಡ್ ಗೆ ಸುಮಾರು ನಲವತ್ತು ರಿಂದ ಅರುವತ್ತು ಸಾವಿರ ರುಪಾಯಿಗಳನ್ನು ಪಡೆಯಲಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.

By admin

Leave a Reply

Your email address will not be published.