Television: ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಪ್ರತಿ ಎಪಿಸೋಡ್ ಗೆ ಸಾಧುಕೋಕಿಲ್ ಹಾಗೂ ಶ್ರುತಿ ಪಡೆಯೋ ಸಂಭಾವನೆ ಮಾಹಿತಿ ಇಲ್ಲಿದೆ ನೋಡಿ.

Gicchi Gili Gili 2 ಕಲರ್ಸ್ ಕನ್ನಡ(Colors Kannada) ವಾಹಿನಿಯಲ್ಲಿ ಈಗಾಗಲೇ ಹಲವಾರು ಕ್ವಾಲಿಟಿ ಧಾರವಾಹಿಗಳು ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಹೊಸ ಹೊಸದಾಗಿ ಪ್ರಸಾರ ಮಾಡುವ ಮೂಲಕ ಈಗಾಗಲೇ ತಮ್ಮ ಪ್ರೇಕ್ಷಕರಿಗೆ ಅವರ ಮನೋರಂಜನೆಯ ರುಚಿಗೆ ತಕ್ಕಂತೆ ಮನೋರಂಜನಾತ್ಮಕ ಕಾರ್ಯಕ್ರಮವನ್ನು ನೀಡುವಂತಹ ಪ್ರಯತ್ನವನ್ನು ಮಾಡಿದ್ದಾರೆ.

ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಾಗೂ ರಿಯಾಲಿಟಿ ಶೋಗಳನ್ನು ಕಲರ್ಸ್ ಕನ್ನಡ ವಾಹಿನಿ ಅವರು ಪ್ರಸಾರ ಮಾಡಿದ್ದು ಅವುಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳಲ್ಲಿ ಗಿಚ್ಚಿ ಗಿಲಿ ಗಿಲಿ(Gicchi Gili Gili) ಕಾರ್ಯಕ್ರಮ ಕೂಡ ಒಂದಾಗಿದೆ. ಈಗಾಗಲೇ ಮೊದಲ ಸೀಸನ್ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು ಈಗ ಎರಡನೇ ಸೀಸನ್ ಕೂಡ ಪ್ರಸಾರ ಕಾಣುತ್ತಿದೆ.

ಇನ್ನು ಎರಡನೇ ಸೀಸನ್ ನ್ನು ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ(Niranjan Deshpande) ನಿರೂಪಕರಾಗಿ ಮುಂದುವರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಆಗಿರುವ ಸಾಧುಕೋಕಿಲ ಮತ್ತು ಖ್ಯಾತ ನಟಿ ಶೃತಿ(Actress Shruthi) ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಪ್ರತಿ ಎಪಿಸೋಡಿಗೆ ಪಡೆದುಕೊಳ್ಳುವ ಸಂಭಾವನೆ ಬಗ್ಗೆ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೂಲಗಳ ಪ್ರಕಾರ ಸಾಧುಕೋಕಿಲ(Sadhukokila) ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಎರಡನೇ ಸೀಸನ್ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದಕ್ಕಾಗಿ ಪ್ರತಿ ಎಪಿಸೋಡಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ನಟಿ ಶೃತಿ ಅವರು ಒಂದರಿಂದ ಎರಡು ಲಕ್ಷ ರೂಪಾಯಿ ಪ್ರತಿ ಎಪಿಸೋಡಿಗಾಗಿ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!