ಕಳಪೆಪಟ್ಟ ಪಡೆದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ; ಬಿಗ್ ಬಾಸ್ ಮನೆಯಲ್ಲಿ ಏರಿದ ಕಾವು!

ಈಗಾಗಲೇ ಮುಖ್ಯ ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರ ಕಳೆಯುವ ಮುನ್ನವೇ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಹಗ್ಗ ಜಗ್ಗಾಟ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಬಿಗ್ ಬಾಸ್ ಮನೆಯ ಹೊರಗೆ ಇದ್ದ ವ್ಯಕ್ತಿಗಳು ಈಗ ಬಿಗ್ ಬಾಸ್ ಮನೆಯ ಒಳಗೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಪ್ರೇಕ್ಷಕರಿಗೆ ಅರ್ಥವಾಗತೊಡಗಿದೆ.

ಇನ್ನು ಇಂದಿನ ಲೇಖನಿಯ ಮುಖ್ಯ ವಿಚಾರದ ಕುರಿತಂತೆ ಮಾತನಾಡುವುದಾದರೆ ಕನ್ನಡಪರ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯ ಒಳಗಿನ ಸ್ಪರ್ಧಿಗಳಿಗೆ ನುಂಗಲಾರದ ಕಬ್ಬಿಣದ ಕಡಲೆ ಆಗಿ ಪರಿಣಮಿಸಿದ್ದಾರೆ. ರೂಪೇಶ್ ರಾಜಣ್ಣ ಪ್ರತಿಯೊಬ್ಬರಿಗೂ ಕೂಡ ಕನ್ನಡದ ಕುರಿತಂತೆ ಪಾಠವನ್ನು ಬೋಧಿಸುತ್ತಾ ಎಲ್ಲರಿಗೂ ಕೂಡ ಕಿರಿಕಿರಿಯಾಗಲು ಪ್ರಾರಂಭಿಸಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಮಯೂರಿ ಸೇರಿದಂತೆ ಹಲವಾರು ಸ್ಪರ್ಧಿಗಳ ಕಡೆಯಿಂದ ಈಗಾಗಲೇ ಈ ಕುರಿತಂತೆ ರೂಪೇಶ್ ರಾಜಣ್ಣ ಅವರು ಪ್ರತಿರೋಧವನ್ನು ಕೂಡ ಕಂಡಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಪ್ರಸಾರ ಆಗಿರುವ ಸಂಚಿಕೆಯಲ್ಲಿ ಕಳಪೆ ಬೋರ್ಡ್ ಅನ್ನು ಕೂಡ ರೂಪೇಶ್ ರಾಜಣ್ಣ ಅವರು ಪಡೆದಿದ್ದು ಜೈಲಿಗೆ ಹೋಗಿದ್ದಾರೆ. ಬಹುತೇಕ ಎಲ್ಲಾ ಸ್ಪರ್ಧಿಗಳು ಕೂಡ ರೂಪೇಶ್ ರಾಜಣ್ಣ ಅವರನ್ನು ನೀವು ಫೇಕ್ ಎಂಬುದಾಗಿ ಕರೆದಿದ್ದಾರೆ. ಅದಕ್ಕೆ ರೂಪೇಶ್ ರಾಜಣ್ಣ ನಾನು ಇರೋದೇ ಹೀಗೆ ಎಂಬುದಾಗಿ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದು ಮತ್ತಷ್ಟು ಕುತೂಹಲಕರವಾಗಿತ್ತು.

ರೂಪೇಶ್ ರಾಜಣ್ಣ ಅವರ ಈ ಮಾತಿಗೆ ನಟಿ ದೀಪಿಕ ದಾಸ್ ಅವರು ಎಲ್ಲಿ ಹೋರಾಟ ಮಾಡುವುದಕ್ಕೆ ನಿಮ್ಮನ್ನು ಯಾರು ಕರೆದಿಲ್ಲ ಎಂಬುದಾಗಿ ಟೋನ್ ನೀಡಿದ್ದು ಮತ್ತಷ್ಟು ಅವರನ್ನು ಕೆರಳಿಸಿತು. ಈ ಸಂದರ್ಭದಲ್ಲಿ ಮೈಕ್ ಅನ್ನು ರೂಪೇಶ್ ರಾಜಣ್ಣ ಕಿತ್ತೋಗಿದು ಜೈಲಿನತ್ತ ನಡೆದಿದ್ದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ಹಂತಕ್ಕೆ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!