ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ 9 ಸದ್ದು ಮಾಡ್ತಿದೆ ಸದ್ದು ಮಾಡ್ತಿದೆ.9 ಮಂದಿ ಸೀನಿಯರ್ಸ್, 9 ಹೊಸ ಮಂದಿಯನ್ನು ಒಳಗೊಂಡ ವಿಶೇಷ ಸೀಸನ್ ಇದಾಗಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲೇ ಸುಮಾರು ಅರ್ಧದಷ್ಟು ಸ್ಪರ್ಧಿಗಳ ಋಣಾತ್ಮಕ ಗುಣವೇನೆಂದು ಕೇಳಿದಾಗ ‘ಸ್ವಲ್ಪ ಬೇಗ ಕೋಪ ಬರುತ್ತೆ’ ಅಂತಿದ್ರು. ಆದರೆ ಎಷ್ಟು ಬೇಗ ಕೋಪ ಬರುತ್ತೆ ಅಂತ ವೀಕ್ಷಕರಿಗೆ ಗೊತ್ತಾಗ್ತಿದೆ.

ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ.ಆದರೆ ಮನೆ ತುಂಬಾ ಬಿಸಿಯಾಗಿ ಉರಿತಾ ಇದೆ. ನಗು, ಅಳು, ಕಿತ್ತಾಟಗಳ ಜೊತೆ ಜೊತೆಗೆ ಟಾಸ್ಕ್ ಗಳನ್ನು ನಿಯಮನುಸಾರವಾಗಿ ಮಾಡಬೇಕು.ಈಗಾಗಲೇ ಆಟ ಶುರು ಮಾಡಿರುವಂತ ಸ್ಪರ್ಧಿಗಳು ಎಲ್ಲದ್ರಲ್ಲೂ ಜೋಶ್ ಅಲ್ಲೇ ಇನ್ವಾಲ್ವ್ ಆಗಿದ್ದಾರೆ. ಮನೆ ಒಳಗೆ ಇರುವಂತ ಸದಸ್ಯರನ್ನ ಇಂಪ್ರೆಸ್ ಮಾಡುವುದರ ಜೊತೆಗೆ ವೀಕ್ಷಕರನ್ನು ಗಮನ ಸೆಳೆಯಲು ಹೊಸ ಹೊಸ ಗಿಮಿಕ್ಸ್ ಗಳ ಪ್ರಯೋಗವನ್ನು ಮಾಡಲು ಪ್ರಾರಂಭಿಸಿದ್ದಾರೆ.

ಜೋಡಿ ಆಟ ಪ್ರಾರಂಭಿಸಿರುವ ಬಿಗ್ ಬಾಸ್ ಸ್ಪರ್ಧಿಗಳ ಪ್ರೊಮೋ ರಿಲೀಸ್ ಆಗಿದೆ. ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ಅವರ ಕಿತ್ತಾಟವೇ ಎದ್ದು ಕಾಣುತ್ತಿದೆ. 18 ಜನರಿಂದ ತುಂಬಿ ತುಳುಕುತ್ತಿರುವ ಮನೆಯಲ್ಲಿ ಎಲ್ಲರೂ ಊಟಕ್ಕೆಂದು ಕುಳಿತಂತ ಸಮಯ; ಬಿಗ್ ಬಾಸ್ ಮನೆಯ ಸದಸ್ಯರ ಪೈಕಿ ಹಲವರು ನೀರಿನ ಲೋಟವನ್ನು ತೊಳೆಯುವಾಗ ನೀರು ಹಾಗೆ ಸುರಿಯುತ್ತಾ ಇರುತ್ತದೆ ಇದನ್ನು ಗಮನಿಸಿದ ರೂಪೇಶ್ ನೀರನ್ನು ಮಿತವಾಗಿ ಬಳಸಬೇಕು ಎಂದರು. ಇದನ್ನು ಕೇಳಿದ ಅನುಪಮಾ ಗೌಡ ಅವರು ನೇರವಾಗಿ ಯಾರು ಈ ತಪ್ಪನ್ನು ಮಾಡಿದ್ದಾರೋ ಅವರಿಗೆ ಹೇಳಿ ಎಂದಳು. ಹೆಸರು ಹೇಳಿ ಅವರಿಗೆ ಅವಮಾನ ಮಾಡಲು ತನಗೆ ಇಷ್ಟ ಇಲ್ಲ ಎಂದು ರೂಪೇಶ್ ಹೇಳಿದರು. ಇಷ್ಟಕ್ಕೆನೆ ಕೋಪಗೊಂಡ ಪ್ರಶಾಂತ್ ಸಂಬರಗಿ ‘ಇಲ್ಲಿ ಯಾರು ನೀತಿ ಪಾಠ ಕೇಳೋದಿಕ್ಕೆ ಬಂದಿಲ್ಲ; ನೀರು ಉಳಿಸ್ತೀನಿ ಅಂತ ನೀವು ಯಾಕೆ ತಮಟೆ ಹೊಡೆದು ಹೇಳಬೇಕು’ ಅಂತ ವ್ಯಂಗ ಮಾಡಿದ್ರು.

ಇಷ್ಟೆಲ್ಲ ಕೇಳಿಸಿಕೊಂಡ ಮೇಲೆ ರೂಪೇಶ್ ಸುಮ್ನಿರ್ತಾರಾ? ಅವರು ಕೂಡ ‘ಯಾರು ತಪ್ಪನ್ನು ಮಾಡ್ತಿದ್ದಾರೋ ಅವರಿಗೆ ತಿದ್ದು ಕೊಳ್ಳುವುದಕ್ಕೆ ಅಂತ ಹೇಳ್ತಾ ಇರೋದು’ ಅಂದ್ರು. ‘ಎಲ್ಲರೂ ಮನುಷ್ಯರೇ, ಯಾರು ಇಲ್ಲಿ ರಾಕ್ಷಸರಿಲ್ಲ.ನೀವ್ಯಾಕೆ ಜೋರಾಗಿ ಕಿರುಚಾಡ್ತಿರಿ’ ಅಂತ ಪ್ರಶಾಂತ್ ಸಂಬರಗಿ ಕೂಗುತ್ತಾನೆ ಹೇಳಿದರು. ಇದಕ್ಕೆ ರೂಪೇಶ್ ‘ಒಳ್ಳೆಯದನ್ನ ಹೇಳಿದ್ರೆ ಅದನ್ನು ಒಪ್ಪಲು ಸಾಧ್ಯ ಇಲ್ಲ ಅಲ್ವಾ? ‘ಅಂತಿದ್ರು. ಪ್ರಶಾಂತ್ ಸಂಬರಗಿ ಸಿಟ್ಟಿನಿಂದ ಕುರ್ಚಿ ಮೇಲೆ ಹತ್ತಿ ನಿಂತು ‘ಸಮಾಜವನ್ನು ತಿದ್ದುವವರು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳು ತಿದ್ದಿಕೊಳ್ಳಬೇಕು’ ಎಂದು ಜೋರಾಗಿ ಕೂಗುತ್ತಾನೆ ಹೇಳಿದರು. ಉಳಿದ ಸದಸ್ಯರು ಇವರಿಬ್ಬರ ಗಲಾಟೆಯನ್ನು ನೋಡುತ್ತಿದ್ದರು. ಒಟ್ಟಿನಲ್ಲಿ ಹೇಳೋದಾದ್ರೆ ಕೋಪ, ಜಗಳದಿಂದಾನೂ ವೀಕ್ಷಕರಿಗೆ ಎಂಟರ್ಟೈನ್ಮೆಂಟ್ ಸಿಕ್ತಾ ಇದೆ.

By admin

Leave a Reply

Your email address will not be published.