ಲಕ್ಷ್ಮೀ ಬಾರಮ್ಮ ಧಾರಾವಾಹಿ ಕರ್ನಾಟಕದಾತ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಧಾರಾವಾಹಿ ರಲ್ಲಿ ಪ್ರಾರಂಭವಾಗಿ 2020 ಕ್ಕೆ ಅಂತ್ಯಗೊಂಡಿದೆ. 2013 ರಿಂದ 2017 ರ ತನಕ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಕ್ಷ್ಮಿ ಅಥವಾ ಚಿನ್ನೂ ಪಾತ್ರವನ್ನು ಕವಿತಾ ಗೌಡ ಅವರು ನಿರ್ವಹಿಸಿದ್ದರು. 2017 ರಿಂದ 2020 ರ ತನಕ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಕ್ಷ್ಮಿ ಪತ್ರವನ್ನು ರಶ್ಮಿ ಪ್ರಭಾಕರ್ ಅವರು ಪಾತ್ರ ವಹಿಸಿದ್ದರು. ಚಿನ್ನೂ ಪತ್ರವನ್ನು ರಶ್ಮಿ ಅವರು ತುಂಬಾ ಚೆನ್ನಾಗಿ ನಿಭಾಯಿಸಿದ್ರು. ರಶ್ಮಿ ಅವರ ಅಭಿನಯ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು.

ರಶ್ಮಿ ಪ್ರಭಾಕರ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ರಶ್ಮಿ ಪ್ರಭಾಕರ್ ಅವರು ನಿಕಿನ್ ಭಾರ್ಗವ್ ಎಂಬ ಹುಡುಗನ ಜೊತೆ ಸಪ್ತಪದಿ ತುಳಿದಿದ್ದಾರೆ. ಏಪ್ರಿಲ್ 25 2022 ರಂದು ರಶ್ಮಿ ಮತ್ತು ನಿಖಿಲ್ ಅವರ ಮದುವೆ ಅದ್ದೂರಿಯಾಗಿ ನಡೆದಿದೆ. ಎಲ್ಲ ಶಾಸ್ತ್ರ ಸಂಪ್ರದಾಯಗಳ ಪ್ರಕಾರವೇ ರಶ್ಮಿಯವರ ಮದುವೆ ನಡೆದಿದ್ದು ಮದುವೆ ವಿಡಿಯೋಗಳು ಕೂಡ ಇದೀಗ ಕಾಣಸಿಗುತ್ತಿದೆ.

ಕಳೆದ ವರ್ಷದ ಪ್ರಾರಂಭದಲ್ಲೇ ಮದುವೆಯಾಗಬೇಕೆಂದು ರಶ್ಮಿ ಅವರು ನಿಶ್ಚಿತ ಮಾಡಿದ್ದರು. ಆದರೆ ಕೊರೋನಾ ಕಾರಣದಿಂದ ಹಿಂದಿನ ವರ್ಷ ಮದುವೆಯಾಗಲು ಸಾಧ್ಯವಾಗಿಲ್ಲ ಹಿಂದಿನ ವರ್ಷ ನವೆಂಬರ್ ತಿಂಗಳಿನಲ್ಲಿ ರಶ್ಮಿ ಮತ್ತು ನಿಖಿಲ್ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಎಲ್ಲಾ ಅಂದುಕೊಂಡಂತೆ ಯಾವುದೇ ಅಡೆತಡೆಯಿಲ್ಲದೆ ಇದೀಗ ಮದುವೆ ಕೂಡ ತುಂಬಾ ಅದ್ಧೂರಿಯಾಗಿ ಸಡಗರದಿಂದ ನಡೆದಿರುವುದು ರಶ್ಮಿ ಪ್ರಭಾಕರ್ ಮತ್ತು ಕುಟುಂಬದವರಿಗೆ ಖುಷಿ ತಂದಿದೆ.

ರಶ್ಮಿ ಪ್ರಭಾಕರ್ ಅವರ ಮದುವೆಗೆ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಕೂಡ ಆಗಮಿಸಿ ಶುಭಕೋರಿದ್ದಾರೆ. ಚಂದನ್ ಮತ್ತು ಕವಿತಾ ಗೌಡ ಅವರು ರಶ್ಮಿ ಮತ್ತು ನಿಖಿಲ್ ಅವರ ಜೊತೆ ಮದುವೆಯನ್ನು ತೆಗಿಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರ. ಹಾಗೆ ಹಲವಾರು ಕಿರುತೆರೆ ನಟಿಯರಾದ ಸುಜಾತಾ ಅಕ್ಷಯ್, ಕಾವ್ಯ ಶಾಸ್ತ್ರಿ ,ಮಾನಸಿ ಜೋಷಿ, ನೇಹಾ ರಾಮಕೃಷ್ಣ ರಶ್ಮಿ ಅವರ ಮದುವೆಗೆ ಹಾಜರಾಗಿದ್ದರು. ನಿಖಿಲ್ ಅವರ ಜೊತೆ ರಶ್ಮಿಯವರು ಹೊಸದಾದ ಬದುಕನ್ನು ಪ್ರಾರಂಭಿಸುತ್ತಿದ್ದಾರೆ ಇದಕ್ಕೆ ಅಭಿಮಾನಿಗಳೆಲ್ಲ ಶುಭ ಕೋರುತ್ತಿದ್ದಾರೆ.

2014 ರಲ್ಲಿ ಕಿರುತೆರೆ ವೃತ್ತಿಜೀವನಕ್ಕೆ ಕಾಲಿಟ್ಟ ರಶ್ಮಿ ಪ್ರಭಾಕರ್ ಅವರು ಎಂಟು ವರ್ಷಗಳಲ್ಲಿ ಸುಮಾರು ಏಳಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲ ಇದೀಗ ಮದುವೆಯಾದ ನಂತರ ಕೂಡ ರಶ್ಮಿಯವರು ಧಾರಾವಾಹಿಗಳಲ್ಲಿ ನಟನೆ ಮಾಡುವುದನ್ನು ಮುಂದುವರೆಸಲಿದ್ದಾರೆ. ಪ್ರಸ್ತುತವಾಗಿ ತಿಳಿವು ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ಕಾವ್ಯಾಂಜಲಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ ರಶ್ಮಿ ಪ್ರಭಾಕರ್ ಅವರು ಕನ್ನಡ ಚಿತ್ರದಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಬಿಬಿ-೫ ಮತ್ತು ಮಹಾ ಕಾವ್ಯ ಎಂಬ ಎರಡು ಸಿನಿಮಾಗಳು ಬಿಡುಗಡೆಯಾಗಲು ರೆಡಿಯಾಗಿದೆ. ರಶ್ಮಿ ಪ್ರಭಾಕರ್ ರವರಿಗೆ ಮತ್ತು ಸಿನಿಮಾಗೆ ಅವಿನಾಭಾವ ನಂಟಿದೆ. ಏಕೆಂದರೆ ರಶ್ಮಿ ಪ್ರಭಾಕರ್ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿದ್ದ ಸೌಂದರ್ಯ ಅವರಿಗೆ ಚಿಕ್ಕಪ್ಪನ ಮಗಳು. ತನ್ನ ಅಕ್ಕ ಸೌಂದರ್ಯ ಹಾಗೆ ತಾನೂ ಕೂಡ ದೊಡ್ಡ ಸ್ಟಾರ್ ನಟಿಯಾಗಿ ಬೆಳೆಯಬೇಕು ಎಂಬುದು ರಶ್ಮಿ ಪ್ರಭಾಕರ್ ಅವರ ಬಹುದೊಡ್ಡ ಕನಸು.

By admin

Leave a Reply

Your email address will not be published.