Ramya: ರಮ್ಯಾ ಗಿಂತ ಪ್ರಭುದೇವಾನೇ ಗ್ರೇಟ್ ಅಂತೆ! ಕಾರಣ ಕೂಡ ಜಬರ್ದಸ್ತಾಗಿದೆ.

Prabhudeva ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದ ವೀಕೆಂಡ್ ವಿತ್ ರಮೇಶ್
(Weekend With Ramesh) ಕಾರ್ಯಕ್ರಮದ 5ನೇ ಸೀಸನ್ ಭರ್ಜರಿ ಎರಡು ಎಪಿಸೋಡ್‌ಗಳನ್ನು ಅದಾಗಲೇ ಮುಗಿಸಿದೆ. ಕಾರ್ಯಕ್ರಮದ ಕುರಿತಂತೆ ವ್ಯಾಪಕವಾಗಿ ಚರ್ಚೆಯಂತೂ ನಡೆಯುತ್ತಿದೆ. ಒಂದು ಕಡೆ ರಮ್ಯಾ(Ramya) ಅವರ ಎಪಿಸೋಡಿಗೆ ಕೆಲವೊಂದು ಕಡೆಗಳಿಂದ ಟೀಕೆ ಕೇಳಿ ಬರುತ್ತಿದ್ದು ಪ್ರಭುದೇವ(Prabhudeva) ಅವರ ಎಪಿಸೋಡಿಗೆ ಮೆಚ್ಚುಗೆ ಕೂಡ ಕೇಳಿ ಬರುತ್ತಿದೆ.

ರಮ್ಯಾ(Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಕನ್ನಡದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೂ ಕೂಡ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಎಪಿಸೋಡಿನಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಇದಕ್ಕೆ ರಮ್ಯಾ ಅವರು ನಿಜವಾದ ಕಾರಣ ಏನೆಂಬುದನ್ನು ಕೂಡ ಹೇಳಿದ್ದಾರೆ ಆದರೆ, ಆದರೂ ಇದರ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.

ಇನ್ನು ಮತ್ತೊಂದು ಕಡೆ ಕನ್ನಡದವರೇ ಆಗಿದ್ದರೂ ಕೂಡ ಪ್ರಭುದೇವ(Prabhudeva) ಅವರು ನಟಿಸಿದ್ದು ಹಾಗೂ ಕೆಲಸ ಮಾಡಿದ್ದು ಬೇರೆ ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚು. ಹೇಗಿದ್ದರೂ ಕೂಡ ಕಾರ್ಯಕ್ರಮ ದುದ್ದಕ್ಕೂ ಕೇವಲ ಕನ್ನಡ ಭಾಷೆಯಲ್ಲಷ್ಟೇ ಮಾತನಾಡುವ ಮೂಲಕ ಪ್ರಭುದೇವ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಬಣಗಳ ನಡುವೆ ಇದೇ ಚರ್ಚೆ ಪ್ರಾರಂಭವಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ವೀಕ್ಷಕರ ವಾದ ಕೂಡ ಇದೆ ಆಗಿದ್ದು ಕನ್ನಡ ಬರೆದಿದ್ದರೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಿರುವ ಪ್ರಭುದೇವ ಅವರ ಎಪಿಸೋಡ್ ನಿಜಕ್ಕೂ ರಮ್ಯಾ ಅವರ ಎಪಿಸೋಡಿಗಿಂತ ಸ್ಪೂರ್ತಿದಾಯಕವಾದದ್ದು ಎಂಬುದಾಗಿ ಹೇಳುವ ಮೂಲಕ ಮತ್ತೊಂದು ಚರ್ಚೆಗೆ ಕಾರಣಿಕರ್ತರಾಗಿದ್ದಾರೆ. ಈ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!