ಕನ್ನಡ ಮಾತಾಡಿ ಅಂತ ಹೇಳಿದ್ದಕ್ಕೆ ರೂಪೇಶ್ ರಾಜಣ್ಣ ಗೆ ಕ್ಲಾಸ್ ತೆಗೆದುಕೊಂಡ ಮಯೂರಿ

ರೂಪೇಶ್ ರಾಜಣ್ಣಗೆ ಮಯೂರಿ ಮಾಡಿದ ಪ್ರಶ್ನೆ ಏನು?

ಬಿಗ್ ಬಾಸ್ ಸೀಸನ್ 9 ನಲ್ಲಿ ಮೊದಲ ವಾರದಿಂದಲೇ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಜೋಡಿ ಆಟದಿಂದ ವೀಕ್ಷಕರನ್ನು ತಮ್ಮತ್ತ ಸೆಳೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಮೇಲೆ ಆಗಾಗ ಮಾತಿನ ಪ್ರಹಾರ ಮಾಡುವುದು ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಾಮನ್. ಬೇರೆ ಬೇರೆ ಊರು, ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಸದಸ್ಯರಿಂದ ಕೂಡಿರುವಂತಹ ಈ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ.ಪ್ರತಿಯೊಬ್ಬರಿಗೂ ತಮ್ಮದೇ ಸರಿ ಎನಿಸುವುದು ಮನುಷ್ಯ ಲಕ್ಷಣ.

ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರ ಮಧ್ಯೆ ಸಣ್ಣ ಸಣ್ಣ ವಿಚಾರಗಳಿಗೂ ಜೋರಾದ ಕೂಗಾಟ ನಡೆಯುತ್ತಿದೆ. ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರು ನೀರಿನ ವಿಷಯವಾಗಿ ಕೂಗಾಡಿದ್ದನ್ನು ನೋಡಿದ್ದೇವೆ. ರೂಪೇಶ್ ರಾಜಣ್ಣ ಅವರ ‘ನೀರು ಉಳಿಸಬೇಕಿದೆ ‘ಎಂಬ ಮಾತಿಗೆ ಉಳಿದ ಸದಸ್ಯರು ‘ಯಾರು ತಪ್ಪು ಮಾಡಿದ್ದಾರೊ ಅವರಿಗೆ ನೇರವಾಗಿ ಹೇಳಿ’ ಎಂದಿದ್ದರು. ಪ್ರಶಾಂತ್ ಸಂಬರಗಿ ಅಂತೂ ಕುರ್ಚೆ ಮೇಲೆ ಹತ್ತಿ ನಿಂತು ‘ಇದನ್ನೆಲ್ಲ ಏಳನೇ ಕ್ಲಾಸ್ ಮಕ್ಕಳಿಗೆ ಹೇಳುತ್ತಾರೆ’ ಎಂದಿದ್ರು. ‘ಜನ ಒಳ್ಳೇದನ್ನ ತಗೊಳಲ್ಲ’ ಅಂತ ರೂಪೇಶ್ ರಾಜಣ್ಣ ಮರು ಮಾತನಾಡಿದರು.

ಈಗ ಮಯೂರಿ ಅವರು ಕೂಡ ರೂಪೇಶ್ ರಾಜಣ್ಣ ಅವರಲ್ಲಿ ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಂಗ್ಲಿಷ್ ಸಾಂಗ್ ಒಂದನ್ನು ಗುನುಗುತ್ತಾ ಇರುವ ಮಯೂರಿಗೆ ಬಿಗ್ ಬಾಸ್ ನಿಂದ ಎಚ್ಚರಿಕೆ ಬಂದಿತ್ತು. ಇದೇ ವಿಚಾರವಾಗಿ ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅವರು ಮಯೂರಿ ಬಳಿ ಹೋಗಿ ಕನ್ನಡ ವಿಚಾರವಾಗಿ ಬುದ್ಧಿ ಮಾತುಗಳನ್ನಾಡಿದ್ದರು. ಪದೇ ಪದೇ ಎಲ್ಲ ಸದಸ್ಯರಿಗೂ ಇವರು ಹೇಳುವ ಬುದ್ಧಿ ಮಾತಿನಿಂದ ಕಿರಿಕಿರಿಯಾಗಿದೆ.

ಅದೇ ರೀತಿ ಮಯೂರಿ ಅವರು ಕೂಡ ಇವರ ಬಳಿ ಮಾತಿಗೆ ಇಳಿದಿದ್ದಾರೆ. ‘ಯಾವುದೇ ವಿಚಾರದಲ್ಲಿರಬಹುದು; ಯಾರು ತಪ್ಪು ಮಾಡಿದ್ದಾರೊ ಅವರಿಗೆ ನೇರವಾಗಿ ನೀವು ಹೋಗಿ ಹೇಳಿ; ಈ ರೀತಿಯಾಗಿ ಎಲ್ಲರಿಗೂ ಪಾಠ ಹೇಳೋದು ಬೇಡ. ಇಲ್ಲಿ ಯಾರು ನಿಮ್ಮಲ್ಲಿ ಪಾಠ ಕಲಿಯಲು ಬಂದಿಲ್ಲ.ನಾನು ಹಾಡು ಹೇಳುತ್ತಿರುವಾಗ ಬಿಗ್ ಬಾಸ್ ನನಗೆ ಎಚ್ಚರಿಕೆ ಕೊಟ್ಟಿದ್ದಾಗಿದೆ.ಅದನ್ನು ಮತ್ತೆ ನೀವು ಬಂದು ಹೇಳುವ ಅವಶ್ಯಕತೆ ಇರಲಿಲ್ಲ. ಮತ್ತೆ ಯಾಕೆ ನೀವು ನನ್ನ ಬಳಿ ಹೇಳಿದಿರಿ??ಕನ್ನಡದ ಬಗ್ಗೆ ಕಾಳಜಿ ಇರೋದು ನಿಮಗೊಂದೇನಾ??’ ಅಂತ ಪ್ರಶ್ನೆ ಮಾಡಿದ್ದಾರೆ.’ನಮಗೂ ಇದೆ. ನಾನು ಉತ್ತರ ಕರ್ನಾಟಕದ ಕನ್ನಡವನ್ನು ಮಾತನಾಡುತ್ತೇನೆ. ಹವ್ಯಕ ಕನ್ನಡವನ್ನು ಮಾತನಾಡುತ್ತೇನೆ.ಕನ್ನಡವನ್ನು ಪ್ರೀತಿಸುವ ಮತ್ತು ಭಾಷೆ ಬಗ್ಗೆ ಕಾಳಜಿ ತೋರಿಸುವ ರೀತಿ ಬೇರೆಯದಿರಬಹುದು ಅಷ್ಟೇ…ಕನ್ನಡದ ಬಗ್ಗೆ ಕಾಳಜಿ ಇರೋದು ನಿಮಗೊಬ್ರಿಗೆ ಅಂತ ತಿಳಿದಿದ್ದೀರಾ? ಎಂದು ಮಯೂರಿಯವರು ರೂಪೇಶ್ ರಾಜಣ್ಣ ಅವರ ಬಳಿ ಹೇಳಿದ್ದಾರೆ.

Leave a Comment

error: Content is protected !!