Vanshika: ದುಡ್ಡಿಗಾಗಿ ಮಗಳನ್ನು ಶೋಗಳಿಗೆ ಕಳಿಸ್ತೀರಾ ಎಂದು ಹೇಳಿದವರಿಗೆ ಮಾಸ್ಟರ್ ಆನಂದ್ ಹೇಳಿದ್ದೇನು ಗೊತ್ತಾ?

Master Anand ಕನ್ನಡ ಚಿತ್ರರಂಗದಲ್ಲಿ ನಟಿಸಿ ಬಾಲ ನಟನಾಗಿ ಮಿಂಚಿರುವಂತಹ ಹಲವಾರು ಕಲಾವಿದರಲ್ಲಿ ಇಂದಿಗೂ ಕೂಡ ಎಲ್ಲರ ಮನಸಿನಲ್ಲಿ ನೆನಪಿರುವಂತಹ ಕಲಾವಿದ ಎಂದರೆ ಅದು ಮಾಸ್ಟರ್ ಆನಂದ್(Master Anand). ನಿಜಕ್ಕೂ ಮಾಸ್ಟರ್ ಆನಂದ್ ರವರು ಚಿಕ್ಕವಯಸ್ಸಿನಲ್ಲಿ ಮಿಂಚಿದ್ದ ರೀತಿಯನ್ನು ನೋಡಿ ಎಲ್ಲರೂ ಕೂಡ ದೊಡ್ಡವನಾದ ಮೇಲೆ ಈತ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳುತ್ತಾನೆ ಎಂಬುದಾಗಿ ಭಾವಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ.

ಈಗ ಅವರ ರೀತಿ ಅವರ ಮಗಳು ಕೂಡ ಚಿಕ್ಕವಯಸ್ಸಿನಿಂದಲೇ ಕಿರುತೆರೆಯ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾಳೆ. ಹೌದು ನಾವು ಮಾತನಾಡುತ್ತಿರುವುದು ಮಾಸ್ಟರ್ ಆನಂದ ಪುತ್ರಿ ಆಗಿರುವ ವಂಶಿಕ ಅಂಜನಿ ಕಶ್ಯಪ್(Vanshika Anjani Kashyap) ಅವರ ಬಗ್ಗೆ. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಎಲ್ಲರಿಗೂ ಪರಿಚಿತರಾಗಿರುವ ವಂಶಿಕ ನಂತರ ಗಿಚ್ಚಿ ಗಿಲಿ ಗಿಲಿ(Gicchi Gili Gili) ಕಾರ್ಯಕ್ರಮದ ಮೂಲಕವೂ ಕೂಡ ಗೆದ್ದು ಬೀಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲೇ ಲಕ್ಷ ಸಂಪಾದನೆ ಮಾಡುತ್ತಿರುವ ವಂಶಿಕಾಳನ್ನು ದೊಡ್ಡವರ ಕಾರ್ಯಕ್ರಮಕ್ಕೆ ಹಣ ಮಾಡಲು ಕಳುಹಿಸುತ್ತೀರಾ ಎಂಬುದಾಗಿ ಅವರ ಪೋಷಕರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಕೆಲವು ಮೀಡಿಯಾದವರು ಕೇಳಿದಾಗ ಮಾಸ್ಟರ್ ಆನಂದ್(Master Anand) ಅವರು ನೀಡಿದ ಉತ್ತರವೇನು ಗೊತ್ತಾ ಬನ್ನಿ ತಿಳಿಯೋಣ.

ಇದಕ್ಕೆ ಪ್ರತ್ಯುತ್ತರ ಎನ್ನುವಂತೆ ಮಾಸ್ಟರ್ ಆನಂದ್(Master Anand), ಅವಳು ಚೆನ್ನಾಗಿ ನಟನೆ ಮಾಡುತ್ತಾಳೆ ಇದಕ್ಕಾಗಿ ಇಂದು ಅವಳನ್ನು ಪ್ರೇಕ್ಷಕರು ಆ ಸ್ಥಾನದಲ್ಲಿ ಇಟ್ಟಿದ್ದಾರೆ. ಅವಳಿಗೆ(Vanshika) ಇಷ್ಟ ಇರುವುದನ್ನು ನಾವು ಮಾಡಲು ಬಿಟ್ಟಿರುವುದು ಇದರಲ್ಲಿ ಯಾರ ಬಲವಂತತವು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳು ನನ್ನ ಮಗಳು ನನಗೆ ತಿಳಿದಿದೆ ಯಾವ ಕಾರ್ಯಕ್ರಮಕ್ಕೆ ಕಳುಹಿಸಬೇಕು ಯಾವ ಕಾರ್ಯಕ್ರಮಕ್ಕೆ ಕಳುಹಿಸಬಾರದು ಎನ್ನುವುದು ಎಂಬುದಾಗಿ ಖಾರವಾಗಿಯೇ ಮಾಸ್ಟರ್ ಆನಂದ್ ಉತ್ತರವನ್ನು ನೀಡಿದ್ದಾರೆ.

Leave A Reply

Your email address will not be published.