ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸಾನ್ಯ ಮತ್ತು ರೂಪೇಶ್ ಈಗಾಗಲೇ ಓಟಿಟಿಯಲ್ಲಿ ಉತ್ತಮ ಜೋಡಿ ಎನಿಸಿಕೊಂಡವರು. ಬಿಗ್ ಬಾಸ್ ಪ್ರಯಾಣದ ಝಲಕ್ ನ್ನು ಓಟಿಟಿಯಲ್ಲಿಯೇ ಪಡೆದವರು. ಬಿಗ್ ಬಾಸ್ ಅಂದ್ರೆ ಸುಮ್ನೆ ಅಲ್ಲ. ಹೊಸ ಹೊಸ ಟಾಸ್ಕ್ ಗಳೊಂದಿಗೆ ಹೊಸ ಹೊಸ ಅನುಭವ ಪಡೆಯುತ್ತಲೇ ಇರಬೇಕು. ಬಿಗ್ ಬಾಸ್ ಸೀಸನ್ 9 ಮೊದಲನೇ ವಾರದಲ್ಲಿ ಜೋಡಿ ಆಟ ಪ್ರಾರಂಭವಾಗಿದೆ.

ನಮಗೆ ತಿಳಿದಿರುವ ಹಾಗೆ ಪ್ರೀತಿ ಇರಲಿ ಸ್ನೇಹವಿರಲಿ ಒಬ್ಬರು ಮತ್ತೊಬ್ಬರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಾಮಾನ್ಯವಾಗಿ ಎಷ್ಟೇ ವರ್ಷದ ಗೆಳೆತನವಾಗಿದ್ದರು ಬಿರುಕು ಮೂಡುವುದು ಒಬ್ಬರು ಇನ್ನೊಬ್ಬರ ಜೊತೆ ಸ್ಪೆಂಡ್ ಮಾಡೋ ಟೈಮಲ್ಲಿ ವ್ಯತ್ಯಾಸ ಆದಾಗ. ಇನ್ನು ನಮಗೆ ಕೊಡಬೇಕಾಗಿರುವ ಸಮಯದಲ್ಲಿ ಬೇರೊಬ್ಬರ ಜೊತೆ ಇದ್ದಾರೆ ಅಂದ್ರೆ ಮುಗಿದೆ ಹೋಯಿತು; ಕಾಳಗ ಗ್ಯಾರೆಂಟಿ.

ಬಿಗ್ ಬಾಸ್ ಮನೆಯಲ್ಲಿ ಬಾಸ್ ಹೇಳಿದಂತೆ ಕೇಳಲೇಬೇಕು. ಆಟ ವಿಚಾರದಲ್ಲೆಂತು ತಪ್ಪುವಂತಿಲ್ಲ. ನಿಯಮಗಳ ಉಲ್ಲಂಘನೆ ಆದರೆ ಅವರಿಗೆ ಶಿಕ್ಷೆಯು ತಪ್ಪಿದ್ದಲ್ಲ. ಪದೇ ಪದೇ ಆಟದ ನಿಯಮಗಳನ್ನು ತಪ್ಪುತ್ತಾ, ಉಳಿದ ಸದಸ್ಯರಿಗೆ ಬೇಸರ ಉಂಟು ಮಾಡಿದರೆ ಅವರಿಗೆ ಆ ವಾರದ ಕಳಪೆ ಪ್ರದರ್ಶನ ಬಿರುದು ಪಕ್ಕಾ. ತುಂಬಾ ಹತ್ತಿರದ ಗೆಳೆಯ/ ಗೆಳತಿಯೇ ಆದರೂ ಕೆಲವೊಮ್ಮೆ ಟಾಸ್ಕ್ ನ ನಿಯಮದ ಅನುಸಾರ ವಿರುದ್ಧ ಗುಂಪಿನಲ್ಲಿದ್ದುಕೊಂಡೆ ಆಡಬೇಕಾಗುತ್ತದೆ.

ಇದೀಗ ಮೊದಲ ವಾರದ ಟಾಸ್ಕ್ ಪ್ರಾರಂಭವಾಗಿದ್ದು ಇದನ್ನು ಜೋಡಿ ಆಟ ಎನ್ನಬಹುದು. ಅನುಭವವುಳ್ಳ ಹಳೆಯ ಸ್ಪರ್ಧಿ ಹೊಸ ಸ್ಪರ್ಧೆಯೊಂದಿಗೆ ಜೋಡಿಯಾಗಿ ಆಡಬೇಕು. ಈ ಆಟದಲ್ಲಿ ಸಾನ್ಯ ಜೊತೆ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಜೋಡಿಯಾಗಿದ್ದಾರೆ. ರೂಪೇಶ್ ಜೊತೆ ಮಂಗಳ ಗೌರಿ ಖ್ಯಾತಿಯ ಕಾವ್ಯ ಜೋಡಿಯಾಗಿದ್ದಾರೆ. ಇದರಿಂದಾಗಿ ಸಾನ್ಯ ಮತ್ತು ರೂಪೇಶ್ ಒಟ್ಟಿಗಿದ್ದು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ತಮ್ಮಿಬ್ಬರ ಮಧ್ಯ ಏನು ಇಲ್ಲ ಎಂದು ಹೇಳುತ್ತಲೇ ಬಿಗ್ ಬಾಸ್ ಸೀಸನ್ 9 ಗೆ ಎಂಟ್ರಿ ಕೊಟ್ಟ ಸಾನ್ಯ ಮತ್ತು ರೂಪೇಶ್ ಮೊದಲ ವಾರವೇ ಬೇರೆ ಬೇರೆ ಸದಸ್ಯರ ಜೊತೆ ಜೋಡಿ ಆಗಬೇಕಾಗಿದೆ. ಕಾವ್ಯ ಅವರ ಜೊತೆ ರೂಪೇಶ್ ತುಂಬಾ ಕ್ಲೋಸ್ ಆಗ್ತಿದ್ದಾರೆ ಅಂತ ಸಾನ್ಯ ಗರಂ ಆಗಿದ್ದಾಳಂತೆ. ಇವರಿಬ್ಬರ ಜೋಡಿ ಬಿಗ್ ಬಾಸ್ ಮುಗಿಯೋವಷ್ಟರಲ್ಲಿ ಏನಾಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

By admin

Leave a Reply

Your email address will not be published.