ಅಮ್ಮನ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದ ನಟಿಯ ವಯಸ್ಸೆಷ್ಟು ಗೊತ್ತಾ? ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ


ಚಿಕ್ಕ ವಯಸ್ಸಿನವರ ಅಭಿನಯದಲ್ಲಿರಲಿ, ನೆಗೆಟಿವ್ ರೋಲ್ ಆಗಿರಲಿ ಅಥವಾ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರ ಪಾತ್ರವಿರಲಿ ಯಾವುದಾದರೂ ಸರಿ ಪಾತ್ರಕ್ಕೆ ಅನಿವಾರ್ಯವಾದ ಬಣ್ಣವನ್ನು ಬಳಿದರೆ ಸಾಕು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ನೈಜತೆಯೊಂದಿಗೆ ಸ್ವಲ್ಪವೂ ಮುಜುಗರವಿಲ್ಲದೆ ಮಾಡುವುದೇ ಪ್ರಭಾವಿ ಕಲಾವಿದರ ತಾಕತ್ತು..

ಕಿರುತೆರೆಯಲ್ಲಿ ಒಮ್ಮೆ ಅವಕಾಶ ದೊರೆತು ನಟಿಸಿ ಜನಪ್ರಿಯಗೊಂಡರೆ ನಂತರದಲ್ಲಿ ಕಲಾವಿದರಿಗೆ ಯಾವುದೇ ರೀತಿಯ ಪಾತ್ರ ಸಿಕ್ಕರು ಅಭಿನಯಿಸಲು ಸಿದ್ಧರಿದ್ದು ನಟನೆಯಲ್ಲಿ ಜೀವನ ಕಟ್ಟಿಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ಸ್ವಾತಿ ಹೆಚ್ ವಿ ಇವರು ಕಲರ್ಸ್ ಕನ್ನಡ ವಾಹಿನಿಯ ಕನ್ಯಾಕುಮಾರಿ ಧಾರವಾಹಿಯಲ್ಲಿ ಕನ್ನಿಕಾಳ ಅಮ್ಮನಾಗಿ ನಟಿಸಿದ್ದು, ಇದೀಗ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಾರ್ಟಿ ಸ್ವಾತಿ ಹೆಚ್ ವಿ ಅವರು ಜನಿಸಿದ್ದು ಮೇ 14 1988 ರಲ್ಲಿ. ಅವರಿಗೀಗ 34 ವರ್ಷ. ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ, ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿಯವರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಅವಕಾಶ ದೊರಕಿ, ಎಂತಹ ಪಾತ್ರಗಳೆಲ್ಲಾದರೂ ಸೈ ಎನಿಸಿಕೊಂಡು ಜನಮನ ಗೆದ್ದಿದ್ದಾರೆ.

Kannada serial kanyakumari actress swati h marraige photo
Kannada serial kanyakumari actress swati h marraige photo

ಇವರು ಸ್ಟಾರ್ ಸುವರ್ಣ ವಾಹಿನಿಯ ಸರ್ವ ಮಂಗಳ ಮಾಂಗಲ್ಯೆ, ಕಲರ್ ಸೂಪರ್ ವಾಹಿನಿಯ ನಾಗಕನ್ನಿಕೆ, ಜೀ ಕನ್ನಡ ವಾಹಿನಿಯ ಗಂಗಾ, ಶುಭ ವಿವಾಹ, ಗಟ್ಟಿಮೇಳ, ಕಲರ್ಸ್ ಕನ್ನಡ ವಾಹಿನಿಯ ರಂಗನಾಯಕಿ ಮತ್ತು ಕನ್ಯಾಕುಮಾರಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಾದೇಶ, ವಾರಸ್ದಾರ, ಉಡ, ಹುಂಜ, ವಿಘ್ನೇಶ್ವರ ಸೇರಿದಂತೆ ಹಲವಾರು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಇದೀಗ ಸ್ವಾತಿ ಅವರು ನಾಗಾರ್ಜುನ ರವಿ ಎಂಬುವವರನ್ನು ವಿವಾಹವಾಗಿದ್ದು ಮೈಸೂರಿನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕಿರುತೆರೆಯ ಹಲವು ಕಲಾವಿದರು ಬಂದು ಶುಭ ಹಾರೈಸಿದರು. ಕನ್ಯಾಕುಮಾರಿ ದಾರವಾಹಿಯಲ್ಲಿ ನಟ ನಟಿಯಾಗಿ ನಟಿಸಿದ್ದ ಚರಣ್ ಹಾಗೂ ಕನ್ನಿಕ ಕೂಡ ಆಗಮಿಸಿದ್ದು ತಮ್ಮ ಸಹಕಲಾವಿದೆಯ ನವಜೀವನಕ್ಕೆ ವಿಶ್ ಮಾಡಿ ಹೋಗಿದ್ದಾರೆ. ಸ್ವಾತಿ ಅವರ ವಿವಾಹದ ಫೋಟೋಗಳನ್ನು ನೋಡಿ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರಂತೆ.

Kannada serial kanyakumari actress swati h kanyakumari serial actress marriage kannika
Kannada serial kanyakumari actress swati h marraige photo

Leave A Reply

Your email address will not be published.