ಯಾವುದೇ ಸರ್ಜರಿ ಇಲ್ಲದೆ ನೈಸರ್ಗಿಕವಾಗಿ 30 ಕೆಜಿ ತೂಕ ಇಳಿಸಿಕೊಂಡ ಬ್ರಹ್ಮಗಂಟು ಖ್ಯಾತಿಯ ಗೀತಾ! ಹೇಗೆ ಗೊತ್ತಾ

ಕನ್ನಡ ಚಿತ್ರರಂಗದ ನಟಿಯರಿರಲಿ, ಕಿರುತೆರೆಯ ಪರದೆಯ ಮೇಲೆ ಮಿಂಚುತ್ತಿರುವವರಿರಲಿ ಅದರಲ್ಲೂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವವರು ಸಾಮಾನ್ಯವಾಗಿ ಬಳಕುವಂತಹ ಮೈ ಮಾಟವನ್ನು ಹೊಂದಿರುತ್ತಾರೆ. ಜೀರೋ ಸೈಜ್ ಮೆಂಟೇನ್ ಮಾಡುವವರು ಬಹಳ ಮಂದಿ ಇದ್ದಾರೆ. ನಾವೀಗ ಹೊತ್ತು ತಂದಿರುವ ಸುದ್ದಿ ಅಪರೂಪದ ತಾರೆಯದ್ದು.

ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಮಿಂಚಿದ ಗೀತಾ ಭಾರತಿ ಭಟ್ ಅವರು ಪ್ರೇಕ್ಷಕರ ಮನದಲ್ಲಿ ಮುದ್ದಿನ ಗುಂಡಮ್ಮನಾಗಿ ಪ್ರಿಯವಾಗಿದ್ದಾರೆ. ಗೀತಾ ಭಾರತಿ ಭಟ್ ಇವರು ಮೂಲತಹ ಕರ್ನಾಟಕದ ಮೂಡಬಿದ್ರೆಯವರು. ಅವರಿಗೆ ಈಗ 28 ವರ್ಷ.

ಪ್ರಾರಂಭಿಕ ಹಂತದ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲಿಯೇ ಮುಗಿಸಿ ಬಿಕಾಂ ಪದವಿಗಾಗಿ ಕರ್ನಾಟಕ ಯೂನಿವರ್ಸಿಟಿಯನ್ನು ಸೇರುತ್ತಾರೆ. ಚಿಕ್ಕಂದಿನಿಂದಲೂ ತಮ್ಮ ಸುಮಧುರ ಕಂಠದಿಂದ ಚೆನ್ನಾಗಿ ಹಾಡು ಹೇಳುತ್ತಿದ್ದ ಗೀತಾ ಅವರಿಗೆ ಸಂಗೀತವೆಂದರೆ ಬಹಳವೇ ಇಷ್ಟ.. ಹಲವಾರು ಕನ್ನಡ ಚಿತ್ರಗಳಿಗೆ ಹಾಡಿ ಗಾಯಕಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಶಾಲಾ ಕಾಲೇಜಿನ ದಿನಗಳಲ್ಲಿ ಗೀತಾ ಅವರು ತುಂಬಾ ದಪ್ಪನಾಗಿರುವುದರಿಂದ ಹಾಸ್ಯಕ್ಕೊಳಗಾಗಿದ್ದಾರಂತೆ. ಆದರೆ ಗೀತಾ ಅವರು ಕಿರುತೆರೆಯಲ್ಲಿ ಮಿಂಚಲು ದೊರೆತ ಅವಕಾಶಕ್ಕೆ ಅವರ ಆಕಾರವೇ ಕಾರಣವಾಯಿತು. ತುಂಬಾ ಹೆಚ್ಚು ತೂಕವಿರುವ ಮುದ್ದಾದ ಹುಡುಗಿ; ಆ ಹುಡುಗಿಗೆ ಸುಂದರವಾದ ಸಾಧಾರಣ ಮೈಕಟ್ಟಿನ ಹುಡುಗನ ಮೇಲೆ ಪ್ರೀತಿ ಉಂಟಾಗಿ, ವಿವಾಹವಾಗಿ ಸಂಸಾರ ನಡೆಸುವ ಕಥೆಯೇ ಬ್ರಹ್ಮಗಂಟು ಧಾರವಾಹಿಯದ್ದಾಗಿತ್ತು.

ಇದಕ್ಕೆ ತಕ್ಕನಾದ ಆಕಾರ, ಮುದ್ದು ಮೊಗ, ಸುಂದರ ನಗು, ಆಕರ್ಷಕ ಕಂಗಳು, ಅಭಿನಯದಲ್ಲಿ ಆಸಕ್ತಿಯನ್ನು ಹೊಂದಿದ ಗೀತಾ ಅವರು ಆಯ್ಕೆಯಾಗಿ ಕರ್ನಾಟಕದ ಮನೆ ಮಂದಿಗೆಲ್ಲ ಹತ್ತಿರದವರಾಗಿದ್ದಾರೆ. ಈ ಧಾರವಾಹಿಯಲ್ಲಿ ಇವರ ನಟನೆಗೆ ಜಿ ಕುಟುಂಬ ಅವಾರ್ಡ್ ದೊರಕಿದೆ. ಅಲ್ಲದೆ ಕನ್ನಡಿಗರ ನೆಚ್ಚಿನ ಶೋ ಬಿಗ್ ಬಾಸ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ತೂಕವನ್ನು ಇಳಿಸಿಕೊಳ್ಳಲು ಸತತವಾಗಿ ಪ್ರಯತ್ನ ಮಾಡುತ್ತಿರುವ ಗೀತಾ ಅವರು ತಾವು ಮಾಡುತ್ತಿರುವ ವರ್ಕೌಟ್ಸ್ ಗಳ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದರು. ಅದರ ಫಲವಾಗಿ ಅವರಿಂದು 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ. ಸಿಹಿ ಕಹಿ ಚಂದ್ರು ಅವರ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಗೀತಾ ಅವರು ಈ ಕುರಿತಾಗಿ ಮಾತನಾಡಿದ್ದಾರೆ.

‘ಮತ್ತಷ್ಟು ತೂಕ ಇಳಿಸಿಕೊಳ್ಳಲಿದ್ದೇನೆ’ ಎಂದು ಬೊಂಬಾಟ್ ಭೋಜನ ಶೋನಲ್ಲಿ ಭಾಗವಹಿಸಿದ ಗೀತಾ ಅವರು ಹೇಳಿದ್ದಾರೆ. ಅಲ್ಲದೆ ಇಳಿದ ತೂಕದಲ್ಲಿ ಇವರನ್ನು ನೋಡಿದ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ವರ್ಕೌಟ್ಸ್ ಗಳನ್ನು ಮಾಡಿ ಸುಂದರವಾದ ದೇಹವನ್ನು ಪಡೆಯುತ್ತಿರುವ ಗೀತಾ ಅವರ ಫೋಟೋವನ್ನು ನೋಡಿದರೆ ಸಾಕು; ಅವರು ತೆಳ್ಳಗಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

Leave a Comment

error: Content is protected !!