Weekend With Ramesh: ಡಾ ಬ್ರೋ ಗಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕುರಿತು ಉರಿದು ಬಿದ್ದ ನೆಟ್ಟಿಗರು. ಅಷ್ಟಕ್ಕೂ ಆಗಿದ್ದೇನು?

Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು.

ಅವರ ವಿಡಿಯೋಗಳನ್ನು ನೋಡುವಂತಹ ದೊಡ್ಡ ಅಭಿಮಾನಿ ಬಳಗವೇ ಕನ್ನಡದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಇದೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅವರನ್ನು ವೀಕೆಂಡ್ ವಿತ್ ರಮೇಶ್(Weekend with Ramesh) ಕಾರ್ಯಕ್ರಮಕ್ಕೆ ಕರೆತರುವಂತಹ ಪ್ರಯತ್ನ ಕೂಡ ನಡೆದಿತ್ತು ಎಂಬುದಾಗಿ ಸುದ್ದಿ ಆಗಿತ್ತು ಹೀಗಾಗಿ ಅವರನ್ನು ಆ ಸಾಧಕರ ಸೇಟಿನಲ್ಲಿ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ನೋಡುವಂತಹ ಕಾತುರತೆ ಅವರ ಅಭಿಮಾನಿಗಳಲ್ಲಿತ್ತು.

ಆದರೆ ಇದೇ ಪ್ರಶ್ನೆಯನ್ನು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಆಗಿರುವಂತಹ ರಾಘವೇಂದ್ರ(Raghavendra Hunsur) ಹುಣಸೂರು ಅವರ ಬಳಿ ಕೇಳಿದಾಗ ಅವರು ನೀಡಿರುವಂತಹ ಉತ್ತರ ನಿಜಕ್ಕೂ ಕೂಡ ಆಶ್ಚರ್ಯ ತರಿಸುವಂತೆ ಇತ್ತು. ನೆಟ್ಟಿಗರಲ್ಲಿ ಕೆಲವರು ರಾಘವೇಂದ್ರ ಹುಣಸೂರು ಅವರು ನೀಡಿರುವ ಉತ್ತರವನ್ನು ತಪ್ಪು ಅರ್ಥದಲ್ಲಿ ತೆಗೆದುಕೊಂಡು ಅವರ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಹೌದು ಮಿತ್ರರೇ ಡಾಕ್ಟರ್ ಬ್ರೋ(Dr Bro) ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ ಎಂಬುದಾಗಿ ರಾಘವೇಂದ್ರ ಹುಣಸೂರು ಅವರ ಬಳಿ ಕೇಳಿದಾಗ ನಿಮ್ಮ ಅಜ್ಜಿ ಹಾಗೂ ತಾಯಿಗೆ ಡಾಕ್ಟರ್ ಬ್ರೋ ಗೊತ್ತಾ ಎಂಬುದಾಗಿ ಕೇಳುವ ಮೂಲಕ ಡಾ. ಬ್ರೋ ಅವರ ಜನಪ್ರಿಯತೆಯನ್ನು ಅನುಮಾನಿಸುವ ರೀತಿಯಲ್ಲಿ ರಾಘವೇಂದ್ರ ಹುಣಸೂರು ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ ಮಾಧ್ಯಮದಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪರಿಚಿತರಾಗಿರುವಂತಹ ವ್ಯಕ್ತಿಗಳನ್ನು ಮಾತ್ರ ನಾವು ಈ ಕಾರ್ಯಕ್ರಮಕ್ಕೆ ತರುತ್ತೇವೆ ಎಂಬುದಾಗಿ ರಾಘವೇಂದ್ರ ಹುಣಸೂರು ಹೇಳುವ ಮೂಲಕ ಡಾ. ಬ್ರೋ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ.

Leave a Comment

error: Content is protected !!