ಮದುವೆಯಾದ ಕೆಲವೇ ವರ್ಷದಲ್ಲಿ ನಿವೇದಿತ ಬಿಟ್ಟು ಹೊರಟ ಚಂದನ್ ಶೆಟ್ಟಿ. ಏನಿದು ಶಾಕಿಂಗ್ ಸುದ್ದಿ?

ಕನ್ನಡ ಕಿರುತೆರೆಯ ಶ್ರೀಮಂತ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಕೂಡ ಪರಸ್ಪರ ಒಬ್ಬರಿಗೊಬ್ಬರು ಪರಿಚಿತರಾಗುತ್ತಾರೆ. ನಂತರ ಇಬ್ಬರೂ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಸಾಕಷ್ಟು ಆಪ್ತರಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ಎಲ್ಲೂ ಕೂಡ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುವುದಿಲ್ಲ.

ನಂತರ ಒಂದು ದಿನ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪರ್ಫಾಮೆನ್ಸ್ ನೀಡಲು ಬಂದಿದ್ದ ಸಂದರ್ಭದಲ್ಲಿ ನಿವೇದಿತಾ ಗೌಡ ಅವರಿಗೆ ಸಾವಿರಾರು ಲಕ್ಷಾಂತರ ಜನರ ಎದುರಿಗೆ ಚಂದನ್ ಶೆಟ್ಟಿ ಅವರು ಪ್ರಪೋಸ್ ಮಾಡಿ ಮದುವೆ ಆಗುವ ಬಗ್ಗೆ ತಿಳಿಸುತ್ತಾರೆ. ದಸರ ಕಾರ್ಯಕ್ರಮದಲ್ಲಿ ಲವ್ ಪ್ರಪೋಸ್ ಮಾಡಿದ್ದಕ್ಕೆ ಇವರಿಬ್ಬರ ಮೇಲೆ ಸಾಕಷ್ಟು ವಿವಾದವು ಕೂಡ ಭುಗಿಲೆದಿತ್ತು ಆದರೆ ಅವೆಲ್ಲವನ್ನು ಮೇರಿ ಕೂಡ ಇವರಿಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗುತ್ತಾರೆ.

ಇನ್ನು ಸದ್ಯಕ್ಕೆ ಇವರಿಬ್ಬರು ಮದುವೆಯಾಗಿ ಕೆಲವು ವರ್ಷಗಳಷ್ಟೇ ಕಳೆದಿವೆ ಆದರೆ ನಿವೇದಿತಾ ಗೌಡ ಅವರನ್ನು ಬಿಟ್ಟು ಚಂದನ್ ಶೆಟ್ಟಿ ಈಗ ಬೇರೆ ಹೋಗುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ನೀವು ಬೇರೆ ತಿಳಿದುಕೊಳ್ಳಬೇಡಿ ಚಂದನ್ ಶೆಟ್ಟಿ ಅವರು ಹೋಗುತ್ತಿರುವುದು ವಿದೇಶಕ್ಕೆ ಅದು ಕೂಡ ಸಿನಿಮಾದ ಚಿತ್ರೀಕರಣಕ್ಕಾಗಿ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಎಲ್ಲರೂ ತಿಳಿದುಕೊಂಡಿರುವುದು ಕೂಡ ನಿವೇದಿತಾ ಗೌಡ ಅವರು ಲೇಟೆಸ್ಟ್ ಆಗಿ ಪೋಸ್ಟ್ ಮಾಡಿರುವ ರೀಲ್ಸ್ ವಿಡಿಯೋ ಮುಖಾಂತರ. ಈ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ

ಹೌದು ಮಿತ್ರರೇ ನಿವೇದಿತಾ ಗೌಡ ಅವರು ಇನ್ಸ್ಟಾಗ್ರಾಮ್ ನಲ್ಲಿ ಚಂದನ್ ಶೆಟ್ಟಿ ಅವರಿಗೆ ಚುಂಬಿಸಿ ವಿದಾಯವನ್ನು ಹೇಳಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಿಸ್ ಯು ಎನ್ನುವುದಾಗಿ ಕ್ಯಾಪ್ಶನ್ ನೀಡಿದ್ದಾರೆ. ಇವರಿಬ್ಬರ ನಡುವೆ ವಯಸ್ಸಿನ ಸಾಕಷ್ಟು ಅಂತರವಿದ್ದರೂ ಕೂಡ ಇವರಿಬ್ಬರ ಪ್ರೀತಿ ಎನ್ನುವುದು ವಯಸ್ಸಿಗೂ ಮೀರಿ ಇವರಿಬ್ಬರನ್ನು ಒಂದು ಮಾಡಿದೆ ಎಂದು ಹೇಳಬಹುದಾಗಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!