ಬಿಗ್ ಬಾಸ್ ಸೀಸನ್ 9 ಗೆ ಬಂದಿರುವ ಸ್ಪರ್ಧಿಗಳ ಹೆಸರು ಕೇಳಿ ಶಾಕ್ ಆದ ವೀಕ್ಷಕರು ವೀಕ್ಷಕರಿಗೆ ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ 9

ಕನ್ನಡದ ಜನತೆ ಬಿಗ್ ಬಾಸ್ ಸೀಸನ್ 9 ಗಾಗಿ ಕಾದು ಕುಳಿತಿದ್ದು ಸ್ಪರ್ಧಿಗಳು ಹೇಗಿರುತ್ತಾರಪ್ಪಾ? ಯಾವ ಯಾವ ಕ್ಷೇತ್ರದಿಂದ ಬಂದವರಪ್ಪಾ? ಎಂದು ತಿಳಿಯಲು ತುಂಬಾ ಕಾತುರರಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಆಯ್ಕೆಯಾಗಲು ಸಿನಿಮಾ ಅಥವಾ ಕಿರುತೆರೆಯ ನಟ – ನಟಿಯರೇ ಆಗಬೇಕಂತಿಲ್ಲ. ನಾಟ್ಯ , ಸಂಗೀತ, ಚಿತ್ರಕಲೆ,ಸಾಹಿತ್ಯ ಯಾವುದೇ ಕ್ಷೇತ್ರದವರಾಗಿರಬಹುದು. ಅಥವಾ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ ವಿವಿಧ ಪ್ರದೇಶದ ಸ್ಟಾರ್ ಗಳಿರಬಹುದು.

ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ರೀತಿಯಲ್ಲಿ ವಿಡಿಯೋ; ಸಿಂಡ್ರಲ್ಲಾ- ಅಂಬ್ರೆಲ್ಲಾ, ಹ್ಯಾಪಿ ಬರ್ತಡೆ ಹಾಡುಗಳನ್ನಾ ಹೇಳ್ತಾ, ಶಿವಣ್ಣ, ಪುನೀತ್ ಅಣ್ಣ ಅವರ ಅಭಿಮಾನಿ ನಾನು ಎನ್ನುತ್ತಾ ಸ್ಟಾರ್ ಆದ ಕಾಫಿನಾಡು ಚಂದು ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ ಎನ್ನಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿ, ಇನ್ಸ್ಟಾದಲ್ಲಿ ಹಾಡು ಹಾಡುತ್ತಾ ಜನರಿಗೆ ಎಂಟರ್ಟೈನ್ಮೆಂಟ್ ನೀಡಿದ್ದಾರೆ. ತನ್ನ ಕೈಲಾದ ಸಮಾಜ ಸೇವೆಯನ್ನು ಕೂಡ ಇವರು ಮಾಡಿದ್ದಾರೆ.ಇನ್ನು ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿನ ಸಣ್ಣಪುಟ್ಟ ಬೀದಿಗಳಲ್ಲಿ ಬೈಕ್ ರೇಸ್ ಮಾಡಿಕೊಂಡು ತನ್ನ ಸತತ ಪ್ರಯತ್ನದಿಂದ ವಿಶ್ವಮಟ್ಟದಲ್ಲೇ ಮೋಟರ್ ಸೈಕಲ್ ಕ್ರೀಡಾಪಟುವಾಗಿ ಬೆಳೆದು ಪ್ರಶಸ್ತಿ ಗಳಿಸಿಕೊಂಡಿರುವ ಐಶ್ವರ್ಯ ಪಿಸ್ಸೆ ಇವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರಂತೆ. ರೇಸ್ ಅಲ್ಲಿ ಒಬ್ಬರೇ ಇದ್ರೆ ಆಗುತ್ತಾ? ಇಲ್ಲ. ಹಾಗೆ ಇನ್ನೊಬ್ಬ ಬೈಕ್ ರೇಸರ್ ಕೂಡ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರಂತೆ. ಬೆಂಗಳೂರಿನ ನಿವಾಸಿಯಾದ ಸಂದೇಶ ಪ್ರಸನ್ನ ಕುಮಾರ್ ಇವರು ಬೈಕ್ ರೇಸ್ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.ಥೈಲ್ಯಾಂಡ್ ನ ಸೂಪರ್ ಬೈಕ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಗೆದ್ದಂತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯು ಇವರದಾಗಿದೆ.

ತಮ್ಮ ಪ್ರಾಸಪದ ಬಳಕೆಯಿಂದಲೇ ಉಪೇಂದ್ರ, ಡಾಲಿ ಧನಂಜಯ್ ರಂತಹ ಸಿನಿ ಸ್ಟಾರ್ ಗಳನ್ನೇ ಮೆಚ್ಚಿಸಿದ ಪಂಚಿಂಗ್ ಡೈಲಾಗ್ ಕಿಂಗ್ ರಿವ್ಯೂ ನವಾಜ್ ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರಂತೆ. ಥಿಯೇಟರ್ ಪೋಸ್ಟರ್ ಗಳ ಎದುರಲ್ಲಿ ಡೈಲಾಗ್ ಮೇಲೆ ಡೈಲಾಗು ಹೊಡ್ದು ಫೇಮಸ್ ಆಗಿರೋ ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನ ಫಾಲೋವರ್ಸ್ ಇದ್ದಾರೆ.ಯಾರು,ಯಾವ ಕ್ಷೇತ್ರದಿಂದಾದರೂ ಬಂದವರಾಗಿರಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೇ. ಇಷ್ಟೊಂದು ವಿಶೇಷ ಸ್ಪರ್ಧಿಗಳನ್ನೊಳಗೊಂಡ ಒಂದೇ ಮನೆಯ ಆಟ-ಓಟ, ರಂಪಾಟಗಳನ್ನಾ ಸಂಭಾಳಿಸೋದಿಕ್ಕೆ ಕಿಚ್ಚ ಸುದೀಪ್ ಅವರು ಇದ್ದೇ ಇರುತ್ತಾರೆ. ಯಾರು ಹೇಗೆ ಆಟ ಆಡಿ ಸ್ಪರ್ಧೆಯನ್ನು ಗೆಲ್ಲುತ್ತಾರೆ ಅನ್ನೋದನ್ನ ನಾವು ನೋಡೋಣ.

ಈ ವರ್ಷದ ಬಿಗ್ ಬಾಸ್ ಸೀಸನ್ ರಲ್ಲಿ ಇನ್ನೊಂದು ವಿಶೇಷತೆಯೇನೆಂದರೆ ಹೊಗೆಯ ಬಿಗ್ ಬಾಸ್ ಸ್ಪರ್ಧಿಗಳೇ ಮತ್ತೆ ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ. ಹಳೆಯ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡುಗ ಅನುಪಮಾ ಗೌಡ ದೀಪಿಕಾ ದಾಸ್ ಪ್ರಶಾಂತ್ ಸಂಬರ್ಗಿ ಹೀಗೆ ಇನ್ನೂ ಕೆಲವು ಮಾಜಿ ಬಿಗ್ ಬಾಸ್ ಸ್ಪರ್ಧಿಗಳೇ ಈ ಸೀಸನ್ ಗೆ ಮರು ಎಂಟ್ರಿ ನೀಡಲಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.

Leave a Comment

error: Content is protected !!