ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಂದ ಸಾನ್ಯಾ ಅಯ್ಯರ್ ಅವರಿಗೆ ಸಿಕ್ಕಂತಹ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 9 ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ತನ್ನ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಾರಿ ವಿವಿಧ ಕ್ಷೇತ್ರದಿಂದ ವಿವಿಧ ಸಾಧಕರು ಅದರಲ್ಲಿಯೂ ನವೀನರು ಪ್ರವೀಣರು ಎನ್ನುವ ಕಾನ್ಸೆಪ್ಟ್ ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಪ್ರೇಕ್ಷಕರು ಸ್ಪರ್ಧಿಗಳ ಆಯ್ಕೆಯ ಕುರಿತಂತೆ ಅಪಸ್ವರವನ್ನು ಎತ್ತಿದರು ಕೂಡ ನಂತರದ ದಿನಗಳಲ್ಲಿ ಅವರು ಕೂಡ ಈ ಕಾರ್ಯಕ್ರಮವನ್ನು ಎಂಜಾಯ್ ಮಾಡುವಂತಹ ಪರಿಸ್ಥಿತಿಗೆ ಬಂದರು.

ಇನ್ನು ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 9 ಈಗಾಗಲೇ ಆರನೇ ವಾರವನ್ನು ಮುಗಿಸಿದ್ದು, ಆರನೇ ವಾರದ ಎಲಿಮಿನೇಷನ್ ಪ್ರಯುಕ್ತ ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ.

ಪುಟ್ಟಗೌರಿ ಮದುವೆಯ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಎಲ್ಲರೂ ಕೂಡ ಆಶ್ಚರ್ಯಪಟ್ಟಿದ್ದರು. ಅಷ್ಟೊಂದು ಚಿಕ್ಕವಯಸ್ಸಿನಲ್ಲಿ ಕಾಣಿಸಿಕೊಂಡಿದ್ದ ಅವರು ಈಗ ಇಷ್ಟೊಂದು ಸುಂದರವಾಗಿ ಕಾಣಿಸಿಕೊಂಡಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು ಅಂದ್ರೆ ತಪ್ಪಾಗಲ್ಲ. ಇನ್ನೂ ಓಟಿಪಿ ಸೀಸನ್ ಅನ್ನು ಮುಗಿಸಿ ಮುಖ್ಯ ಬಿಗ್ ಬಾಸ್ ನಲ್ಲಿ ಕೂಡ ಆರು ವಾರವನ್ನು ಪೂರೈಸಿ ಮನೆಯಿಂದ ಹೊರಬಂದಿರುವ ಸಾನ್ಯಾ ಅಯ್ಯರ್ ಅವರು ಪಡೆದಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ವಾರಕ್ಕೆ 3.5 ಲಕ್ಷ ರೂಪಾಯಿಯಂತೆ ಸಾನ್ಯಾ ಅಯ್ಯರ್ ಅವರಿಗೆ ಬಿಗ್ ಬಾಸ್ ಸಂಭಾವನೆಯನ್ನು ನೀಡಿದೆ. ಅಂದರೆ ಒಟ್ಟಾರೆಯಾಗಿ 6ನೇ ವಾರದಿಂದ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಾನ್ಯಾ ಅಯ್ಯರ್ ಅವರಿಗೆ ಒಟ್ಟಾರೆಯಾಗಿ ಭರ್ಜರಿ 21 ಲಕ್ಷ ಸಂಭಾವನೆಯನ್ನು ಕಲರ್ಸ್ ಕನ್ನಡ ವಾಹಿನಿ ನೀಡಿದೆ ಎಂಬುದಾಗಿ ಕೆಲವು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!