ರಂಜನಿ ರಾಘವನ್ ಅನುಬಂಧ ಅವಾರ್ಡ್ ಶೋ ಗೆ ಧರಿಸಿದ ಸೀರೆಯ ಬೆಲೆ ಎಷ್ಟು ಗೊತ್ತಾ?

ಕೆಲವು ಕಿರುತೆರೆ ನಟಿಯರು ಸಿನಿಮಾರಂಗದ ನಟಿಯರಷ್ಟೇ ಪ್ರೇಕ್ಷಕರಲ್ಲಿ ಜನಪ್ರಿಯ ರಾಗಿರುತ್ತಾರೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿ ಕೂಡ ಇವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅವರಲ್ಲಿ ನಟಿ ರಂಜನಿ ರಾಘವನ್ ಕೂಡ ಒಬ್ಬರಾಗಿದ್ದಾರೆ. ರಂಜನಿ ರಾಘವನ್ ರವರು ಕಿರುತೆರೆಯ ಮೂಲಕ ತಮ್ಮ ನಟನೆ ಹಾಗೂ ಪ್ರತಿಭೆಯನ್ನು ಕಿರುದರೆ ಪ್ರೇಕ್ಷಕರಿಗೆ ತೋರ್ಪಡಿಸಿ ಅವರ ಮೆಚ್ಚುಗೆಯನ್ನು ಗಳಿಸಿಕೊಂಡು ಕಿರುತೆರೆ ಕ್ಷೇತ್ರದ ಸ್ಟಾರ್ ನಟಿಯರಲ್ಲಿ ಅಗ್ರಪಂಕಿಯಲ್ಲಿ ಕಾಣ ಸಿಗುತ್ತಾರೆ.

ಇನ್ನು ರಂಜಿನಿ ರಾಘವನ್ ಅವರು ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಮೊದಲಿಗೆ ಪರಿಚಿತರಾಗಿದ್ದು ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ ಆಗಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ. ಈ ಧಾರವಾಹಿಯಲ್ಲಿ ಕಾಣಿಸಿಕೊಂಡ ನಂತರ ಮತ್ತೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಸಿನಿಮಾ ಲೆವೆಲ್ ನಲ್ಲಿ ಕಿರುತೆರೆಯಲ್ಲಿ ಕೂಡ ಅತ್ಯುತ್ತಮ ನಟನ ಶೈಲಿಯನ್ನು ಪ್ರದರ್ಶಿಸುತ್ತಿರುವ ಪ್ರತಿಭಾನ್ವಿತ ನಟಿ ಎಂದು ಹೇಳಬಹುದಾಗಿದೆ.

ಇನ್ನು ಸದ್ಯಕ್ಕೆ ರಂಜನಿ ರಾಘವನ್ ಅವರು ಕಿರಣ್ ರಾಜ್ ನಾಯಕನಾಗಿ ಕಾಣಿಸಿಕೊಂಡಿರುವ ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿರುವ ಕನ್ನಡತಿ ಧಾರವಾಹಿಯಲ್ಲಿ ಭುವಿ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಕನ್ನಡದ ಸ್ಪಷ್ಟತೆ ಹಾಗೂ ವಿಭಿನ್ನ ಗುಣವಿಶೇಷಗಳನ್ನು ಒಳಗೊಂಡ ಈ ಪಾತ್ರದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನೆ ಮಗಳಾಗಿ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಅನುಬಂಧ ಅವಾರ್ಡ್ಸ್ ನಲ್ಲಿ ರಂಜನಿ ರಾಘವನ್ ಕೂಡ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹಾಕಿಕೊಂಡಿರುವ ಸೀರೆ ಎಲ್ಲರ ಗಮನವನ್ನು ಸೆಳೆದಿದ್ದು, ಇದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ರಂಜನಿ ರಾಘವನ್ ಪೋಸ್ಟ್ ಮಾಡಿದ್ದಾರೆ. ಇನ್ನೂ ಇದರ ಬೆಲೆ ಕೂಡ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸ್ಕೈ ಬ್ಲು ಹಾಗೂ ಬಿಳಿ ರೇಖೆಗಳ ಕಾಂಬಿನೇಷನ್ ಕಲರ್ ಅನ್ನು ಹೊಂದಿರುವ ಈ ಗ್ಲಾಮರಸ್ ಸೀರೆಯ ಬೆಲೆ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳಾಗಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!