19 ತಿಂಗಳಿನ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆ ಗೆ ಬಂದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಕಾರಣವೇನು?
ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ.ಸಂಖ್ಯೆ 9ರಲ್ಲೇ ಇರೋದು ವಿಶೇಷತೆ; ಏನಪ್ಪಾ ಅಂದ್ರೆ 9 ಜನ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳು ಮತ್ತು 9 ಹೊಸ ಸ್ಪರ್ಧಿಗಳು; ಓಟಿಟಿಯಿಂದ ಕೆಲ ಕಾಲದ ಅನುಭವ ಉಳ್ಳವರು ಇವರೊಂದಿಗೆ ಸೇರಿದ್ದಾರೆ. ಈ ಶೋನಲ್ಲಿ ಕಿರುತೆರೆಯ ತಾರೆಗಳು, ಸೋಶಿಯಲ್ ಮೀಡಿಯಾದ ಸ್ಟಾರ್ಗಳು, ಬೈಕ್ ರೇಸರ್ ಗಳು ಇದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ.
ಅಶ್ವಿನಿ-ನಕ್ಷತ್ರ ಧಾರವಾಹಿಯ ಮೂಲಕ ಅಶ್ವಿನಿಯಾಗಿಯೇ ಜನರಿಗೆ ಚಿರಪರಿಚಿತರಾದ ನಾಯಕಿ ಮಯೂರಿಯವರು ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ರಂಗು ರಂಗಿನ ಬಟ್ಟೆ ತೊಟ್ಟು ಸ್ಟೇಜ್ ಮೇಲೆ ಸ್ಟೆಪ್ ಹಾಕಿ ಕಣ್ಮನಸಳೆದಿದ್ದಾರೆ. ಮುದ್ದಾಗಿ ಸ್ಮೈಲ್ ಮಾಡುತ್ತಾ ಮಾತಾಡೊ ಇವರು ಬಿಗ್ ಬಾಸ್ ಮನೆಯಿಂದ ತನಗೆ ಹೊಸ ಅನುಭವ ಸಿಗಲಿದೆ ಎಂದಿದ್ದಾರೆ.
ಮಯೂರಿಯವರು ಮೂಲತಃ ಹುಬ್ಬಳ್ಳಿಯವರು. ಇವರು ಹತ್ತು ವರ್ಷಗಳ ಕಾಲ ಪ್ರೀತಿಸಿದ ಅರುಣ್ ಅವರನ್ನು ಮದುವೆಯಾಗಿದ್ದಾರೆ. ಅಲ್ಲದೆ ಮುದ್ದಾದ ಮಗನನ್ನು ಹೊಂದಿದ್ದಾರೆ. ಮಗನ ಹೆಸರು ಆರವ್, ಆತನಿಗಿನ್ನೂ ಒಂದೂವರೆ ವರ್ಷ. ಮಗನ ಆಟೋಗಳನ್ನ ನೋಡುತ್ತಾ, ಪೋಷಿಸುತ್ತಾ ಕುಟುಂಬದ ಜೊತೆ ಇದ್ದ ಮಯೂರಿಯವರು ಈಗ ತನ್ನ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣ ದಿನಗಳ ಕಾಲ ಉಳಿದು ಆಟಗಲ್ಲಬೇಕೆಂದು ಆಸೆ ಹೊತ್ತು ಬಂದಿದ್ದಾರೆ.
ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಕಾಲಿಡುವಾಗ ವೇದಿಕೆಯಲ್ಲಿ ಮಯೂರಿಯವರು ಈ ರೀತಿಯಾಗಿ ಹೇಳಿದ್ದಾರೆ. ‘ತೆರೆಯ ಮೇಲೆ ನನ್ನ ಮೊದಲ ಹೆಜ್ಜೆ ಪ್ರಾರಂಭವಾದದ್ದು ಬಿಗ್ ಬಾಸ್ ವೇದಿಕೆಯಿಂದಲೇ. ಅಶ್ವಿನಿ ನಕ್ಷತ್ರ ಧಾರವಾಹಿ ಪ್ರಮೋಷನ್ ಆಗಿದ್ದು ಈ ವೇದಿಕೆಯಲ್ಲೇ. ಅದೇ ನಂಟಿನೊಂದಿಗೆ ಕಷ್ಟ ಸುಖ ಎರಡನ್ನು ಕಂಡಿರುವ ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದೇನೆ. ನಾನು ಪ್ರೈವೇಟ್ ಪರ್ಸನ್ ಆಗಿದ್ದರೂ ಕೂಡ ಎಲ್ಲರೊಂದಿಗೆ ಬೆರೆಯಲು ಪ್ರಯತ್ನ ಮಾಡುತ್ತೇನೆ. ಬಿಗ್ ಬಾಸ್ ಒಂದು ರೀತಿಯಲ್ಲಿ ನನಗೆ ಚಾಲೆಂಜ್ ಆದರೆ, ಒಂದೂವರೆ ವರ್ಷದ ಆರವ್ ನನ್ನು ಬಿಟ್ಟಿರೋದು ಕೂಡ ದೊಡ್ಡ ಚಾಲೆಂಜ್.ನನ್ನ ಮಗ ನನ್ನ ಜೀವನವನ್ನೇ ಬದಲಾಯಿಸಿದ್ದಾನೆ. ಆರವ್ ಅಪ್ಪನೊಂದಿಗೆ ಆಟ ಆಡುತ್ತಾ ಖುಷಿಯಾಗಿ ಕಾಲ ಕಳೆಯುತ್ತಾನೆ. ಅತ್ತೆ ,ಅಮ್ಮ ಎಲ್ಲರೂ ಇದ್ದಾರೆ ಎಂಬ ನಂಬಿಕೆಯೊಂದಿಗೆ ಹೊಸ ಅನುಭವಕ್ಕಾಗಿ ಹೆಮ್ಮೆಯಿಂದ ಇಲ್ಲಿ ನಿಂತಿದ್ದೇನೆ’ ಎಂದಿದ್ದಾರೆ.