40 ವರ್ಷ ವಯಸ್ಸಾದರೂ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಇನ್ನೂ ಮದುವೆ ಆಗಿಲ್ಲ ಕಾರಣ ಏನು ಗೊತ್ತಾ

ಲೇಡಿ ಸಚಿನ್ ಎಂದೇ ಕರೆಸಿಕೊಳ್ಳುವ ಈ ಆಟಗಾರ್ತಿ, ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರದ ಪರ ಆಡಿದ್ದು ಏರ್ ಇಂಡಿಯಾ ಮತ್ತು ರೈಲ್ವೇಸ್ ತಂಡಗಳಲ್ಲಿಯೂ ಆಟ ಆಡಿ 10,000 ರನ್ ಗಳಿಸಿರುವ ಭಾರತದ ಮೊದಲ ಮಹಿಳಾ ಕ್ರಿಕೆಟಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೋರ್ಟ್ಸ್ ಆಕ್ಟಿವ್ ಮಹಿಳೆಯರನ್ನಾ ವಿಚಿತ್ರವಾಗಿ ನೋಡೊ ಕಾಲದಿಂದಲೇ ಬ್ಯಾಟ್ ಹಿಡಿದು ಅಬ್ಬರಿಸಿದ ಭಾರತೀಯ ಈ ಹಿರಿಯ ಕ್ರಿಕೆಟ್ ಆಟಗಾರ್ತಿ ಮಹಿಳಾ ಕ್ರಿಕೆಟ್ ಮೇಲಿನ ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ.

ಇವರೇ ಮಿಥಾಲಿ ರಾಜ್. ಇವರು ಡಿಸೆಂಬರ್ 3,1982 ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಜನಿಸಿದರು.ಓದಿರುವುದು ಹೈದರಾಬಾದ್ ನಲ್ಲಿ. ಮೊದಲಿನಿಂದಲೂ ಇವರಿಗೆ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ; ಇವರ ವೃತ್ತಿ ಜೀವನದ ಆಯ್ಕೆ ಕೂಡ ಕ್ರಿಕೆಟ ಆಗಿತ್ತು. ಇವರಿಗೆ 22ನೇ ವಯಸ್ಸಿನಲ್ಲಿ ಕುಟುಂಬದ ಸದಸ್ಯರು ಮದುವೆಯಾಗುವಂತೆ ಸೂಚಿಸಿದ್ದರಂತೆ. ಆದರೆ ಮದುವೆಯಾಗಲಿಚ್ಚಿಸಿ ಬರುವವರು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಬೇಕೆಂದರಂತೆ. ಕ್ರಿಕೆಟ್ ನಲ್ಲಿ ಕನಸು ಕಂಡಿರುವ ಇವರು ಬಂದಿರುವ ಸಂಬಂಧಗಳನ್ನು ನಿರಾಕರಿಸಿದರಂತೆ. ವೈಯಕ್ತಿಕ ಜೀವನವನ್ನು ಬದಿಗಿರಿಸಿ, ರನ್ ಮೇಲೆ ರನ್ ಗಳಿಸಿ ಭಾರತದ ಓರ್ವ ಶ್ರೇಷ್ಠ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.

2018ರಲ್ಲಿ ‘ನಾನು ಮದುವೆಯಾಗದೆ ಇರೋದಕ್ಕೆ ಯಾವುದೇ ಬೇಸರವಿಲ್ಲ. ಮದುವೆಯಾದವರನ್ನ ನೋಡಿ ಒಂಟಿಯಾಗಿರುವುದೆ ತುಂಬಾ ಖುಷಿ ಕೊಡುತ್ತಿದೆ; ಮೊದಲು ಮದುವೆಯಾಗಬೇಕೆಂದುಕೊಂಡಿದ್ದೆ ಆದರೆ ಈಗ ಅಂತಹ ಯಾವುದೇ ಯೋಚನೆಗಳಿಲ್ಲ’ ಎಂದು ಒಮ್ಮೆ ಹೇಳಿಕೊಂಡಿದ್ದಾರೆ. ಇವರ ತಾಯಿ ಲೀಲಾರಾಜ್ ಕೂಡ ‘ಮದುವೆ ಎಂಬುದು ಆಕೆಗೆ ಮನ ಬಂದಾಗ ಆಗುವಂತದ್ದು; ಅದಕ್ಕಾಗಿ ಅವಳಿಗೆ ಯಾವುದೇ ಒತ್ತಡವಿಲ್ಲ’ ಎಂಬಂತ ಸಪೋರ್ಟಿವ್ ಮಾತುಗಳನ್ನಾ ಆಡಿದ್ದಾರೆ.

ವೃತ್ತಿ ಜೀವನಕ್ಕಾಗಿ ಮದುವೆ ತ್ಯಾಗ ಮಾಡಿದ ಮಿಥಾಲಿ ರಾಜ್ ಅವರಿಗೆ 39 ವರ್ಷ. ಕ್ರಿಕೆಟ್ ನಲ್ಲಿಯೇ ಬ್ಯುಸಿಯಾಗಿದ್ದ ಇವರು ಇದೀಗ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಮದುವೆಯಾಗದೆ ಇರುವ ಪ್ರಶ್ನೆಗೆ ಉತ್ತರವೆಂತು ಸಿಕ್ಕಿದ್ದಾಗಿದೆ.ನಿವೃತ್ತಿಯನಂತರ, ವೈವಾಹಿಕ ಜೀವನದ ಕುರಿತು ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. 39ನೇ ವಯಸ್ಸಿನವರೆಗೂ ಕ್ರಿಕೆಟ್ ಗಾಗಿ ಬದುಕಿರುವುದಂತೂ ಸತ್ಯ.

Leave a Comment

error: Content is protected !!