KL Rahul ಕೆಎಲ್ ರಾಹುಲ್ ಮದುವೆಗೆ ಧೋನಿ ಹಾಗೂ ಕೊಹ್ಲಿ ನೀಡಿದ ಗಿಫ್ಟ್ ಎಂಥದ್ದು ಗೊತ್ತಾ? ಎಲ್ರೂ ಬಾಯ್ ಬಿಡ್ತಿದ್ದಾರೆ.

Kl Rahul ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಆಗಿರುವ ಕರ್ನಾಟಕ ಮೂಲದ ಕೆ ಎಲ್ ರಾಹುಲ್ ರವರು ಬಾಲಿವುಡ್ ಮೂಲದ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಪುತ್ರಿಯಾಗಿರುವ ನಟಿ ಅಥಿಯ ಶೆಟ್ಟಿಯವರನ್ನು ಇತ್ತೀಚಿಗಷ್ಟೇ ಮದುವೆ(Married) ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ಸಮಯಗಳಿಂದ ಇವರಿಬ್ಬರ ನಡುವೆ ಇರುವಂತಹ ಲವ್ವಿ ಡವ್ವಿಯ ಕುರಿತಂತೆ ಬಾಲಿವುಡ್ ಅಂಗಳದಲ್ಲಿ ಸುದ್ದಿ ಆಗುತ್ತಲೇ ಇತ್ತು. ಈಗ ಇದು ಕೊನೆಗೂ ಮದುವೆಯ ಮೂಲಕ ಅಧಿಕೃತವಾಗಿದೆ ಎಂದು ಎಲ್ಲರೂ ಸಂತೋಷ ಪಡುತ್ತಿದ್ದಾರೆ.

ಸಿನಿಮಾ ಹಾಗೂ ಕ್ರಿಕೆಟ್ ಕ್ಷೇತ್ರದ ಜೋಡಿಗಳ ಕುರಿತಂತೆ ನೀವು ನೋಡುವುದಾದರೆ ನಮ್ಮ ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ಸಿಕ್ಕಬಹುದು. ಜಹೀರ್ ಖಾನ್ ವಿರಾಟ್ ಕೊಹ್ಲಿ ಹರ್ಭಜನ್ ಸಿಂಗ್ ಹೀಗೆ ಲಿಸ್ಟ್ ಮುಂದುವರೆಯುತ್ತದೆ. ಈಗ ಇದೇ ಸಾಲಿಗೆ ನಮ್ಮ ಕನ್ನಡದ ಹುಡುಗ ಕೆ ಎಲ್ ರಾಹುಲ್ ಕೂಡ ಸೇರ್ಪಡೆ ಆಗಿರುವುದು ಸಂತೋಷದ ವಿಚಾರವಾಗಿದೆ. ಇನ್ನು ಈ ಮದುವೆಯನ್ನು ಅತ್ಯಂತ ಗುಪ್ತವಾಗಿಯೇ ಅರೆಂಜ್ ಮಾಡಿದ್ದು ಕೇವಲ ಆಪ್ತರಿಗಷ್ಟೇ(Close People) ಮಾತ್ರ ಈ ಮದುವೆಯಲ್ಲಿ ಆಹ್ವಾನವನ್ನು ನೀಡಲಾಗಿತ್ತು.

Kl Rahul & Athiya Shetty

ಸೈಲೆಂಟ್(Silent) ಆಗಿಯೇ ಮದುವೆ ಆಗಿರುವ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ರವರ ಮದುವೆ ಇನ್ನೊಂದು ವಿಚಾರಕ್ಕಾಗಿ ಕೂಡ ಈಗಾಗಲೇ ಸುದ್ದಿಯಾಗುತ್ತಿದೆ ಎನ್ನುವುದನ್ನು ಸಾಮಾಜಿಕ ಜಾಲತಾಣಗಳಿಂದ ನೀವು ಕೇಳಿ ತಿಳಿದಿರಬಹುದು. ಹೌದು ಗೆಳೆಯರೇ ಖ್ಯಾತ ಕ್ರಿಕೆಟಿಗರಾಗಿರುವ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಕೂಡ ಈ ಮದುವೆಗೆ ಆಗಮಿಸಿದ್ದು ತಮ್ಮ ಸಹ ಆಟಗಾರ ಕೆಎಲ್ ರಾಹುಲ್ ಅವರಿಗೆ ನೀಡಿರುವಂತಹ ಉಡುಗೊರೆ ಈಗ ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡುತ್ತಿದೆ.

ಮೂಲೆಗಳ ಪ್ರಕಾರ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಅವರಿಗೆ 2.17 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ರವರು ಕೆ ಎಲ್ ರಾಹುಲ್ ಅವರಿಗೆ 80 ಲಕ್ಷಕ್ಕೂ ಅಧಿಕ ಮೌಲ್ಯದ ಕವಾಸಕಿ ನಿಂಜಾ ಎನ್ನುವ ದುಬಾರಿ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವರಿಬ್ಬರ ಈ ಲಕ್ಷಾಂತರ ಕೋಟ್ಯಾಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಹೆಚ್ಚಾಗಿದೆ. ಈ ಉಡುಗೊರೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!