ವಿರಾಟ್ ಕೊಹ್ಲಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. 2006 ರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಚೊಚ್ಚಲ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಐಪಿಎಲ್ ಆಟಕ್ಕೆ ವಿರಾಟ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 15 ವರ್ಷಗಳ ಕಾಲ ಒಂದೇ ಟೇಕ್ ನಲ್ಲಿ ಆಟವಾಡಿದ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ ಮಾತ್ರ. 2008 ರಿಂದ 2022 ರವರೆಗೆ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದಲ್ಲಿ ಆಟವಾಡುತ್ತಿರುವ ಏಕೈಕ ನಿಷ್ಠಾವಂತ ಆಟಗಾರ.

ಈ ವರ್ಷದ ಐಪಿಎಲ್ ನಲ್ಲಿ ಕೊಹ್ಲಿ ಅವರ ಆಟದ ವೈಖರಿ ಹಲವಾರು ಜನರಿಗೆ ಬೇಸರ ತಂದಿದೆ. ಒಂದು ಕಾಲದಲ್ಲಿ ರನ್ ಮಷಿನ್ ಅಂತ ಹೆಸರಾಗಿದ್ದ ವಿರಾಟ್ ಕೊಹ್ಲಿ ಇಂದು ಒಂದೇ ಒಂದು ರನ್ ಕೂಡ ಹೊಡೆಯಲಾಗದೆ ಡಕೌಟ್ ಅಗುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ವಿಫಲತೆ ಅಭಿಮಾನಿಗಳಲ್ಲಿ ಬೇಸರ ತಂದಿರುವುದು ಖಡಾ ಖಂಡಿತ ಹೌದು. ಟಿ 20 ವಿಶ್ವಕಪ್ ಕೂಡ ಹತ್ತಿರ ಬರುತ್ತಿದೆ ಇಂಥ ಸಮಯದಲ್ಲಿ ಕೊಹ್ಲಿ ತನ್ನ ಫಾರ್ಮ್ ಕಳೆದುಕೊಂಡಿರುವುದು ಭಿಕ್ಷುಕರಲ್ಲಿ ಆತಂಕ ಮನೆ ಮಾಡಿದೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳನ್ನು ಕಲೆಹಾಕಿರುವ ಆಟಗಾರ ವಿರಾಟ್ ಕೊಹ್ಲಿ ಅವರು. ಹಾಗೆ ಅತಿಹೆಚ್ಚು ಸೆಂಚುರಿಯನ್ನು ಬಾರಿಸಿದರ ಆಟಗಾರ ಕೂಡ ವಿರಾಟ್ ಕೊಹ್ಲಿಯವರೇ. ದಾಖಲೆ ಮೇಲೆ ದಾಖಲೆ ಮಾಡಿರುವ ಈ ದಾಖಲೆ ಶೂರನ ಈಗಿನ ಆಟದ ವೈಖರಿ ಯಾಕೆ ಹದಗೆಟ್ಟಿದೆ ಎಂಬುದು ಕುತೂಹಲದ ಪ್ರಶ್ನೆ. ಕ್ರಿಕೆಟ್ ನಲ್ಲಿ ಎಲ್ಲ ಶ್ರೇಷ್ಠ ಆಟಗಾರರು ಕೊಹ್ಲಿ ಅವರ ಹಾಗೆ ಇಂಥ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಎಲ್ಲ ಆಟಗಾರರ ಹಾಗೆ ಕೊಹ್ಲಿ ಅವರು ಕೂಡ ಮುಂದೊಂದು ದಿನ ತಮ್ಮ ಹಳೆಯ ಫಾರ್ಮ್ ಗೆ ಬಂದೇ ಬರುತ್ತಾರೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ಐಪಿಎಲ್ ಆಟ ಆಡಲು ಕೊಹ್ಲಿ ಅವರು ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದುಕೊಳ್ಳುವ ಕುತೂಹಲ ವೀಕ್ಷಕರಿಗಿರುತ್ತದೆ. 2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹನ್ನೆರಡು ಲಕ್ಷ ರುಪಾಯಿಗಳನ್ನು ಕೊಟ್ಟು ವಿರಾಟ್ ಕೊಹ್ಲಿಯನ್ನು ಖರೀದಿ ಮಾಡಿದ್ದಾರೆ. 3 ವರ್ಷಗಳ ಕಾಲ ಹನ್ನೆರಡು ಲಕ್ಷ ರುಪಾಯಿಗಳಿಗೆ ವಿರಾಟ್ ಕೊಹ್ಲಿಯವರು ಆಟವಾಡಿದ್ದಾರೆ. ತದನಂತರ 2011ರ ಹರಾಜು ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿಯವರಿಗೆ ಎಂಟು ಕೋಟಿ ರೂಪಾಯಿಗಳನ್ನು ಕೊಟ್ಟು ಆರ್ ಸಿಬಿ ಖರೀದಿ ಮಾಡಿದೆ.

2011,2012 ಮತ್ತು 2013 ರಲ್ಲಿ ವಿರಾಟ್ ಕೊಹ್ಲಿ ಅವರಿಗೆ ಪ್ರತಿವರ್ಷ ಎಂಟು ಕೋಟಿ ರುಪಾಯಿಗಳನ್ನು ನೀಡಲಾಗಿದೆ. 2014 ರಲ್ಲಿ ಕೊಹ್ಲಿಗೆ ಹನ್ನೆರಡುವರೆ ಕೋಟಿ ರುಪಾಯಿಗಳನ್ನು ಕೊಡೋಕೆ ಶುರು ಮಾಡಿದ್ರು. 2014, 2015,2016 ಮತ್ತು 2017 ರ ತನಕವೂ ಆರ್ ಸಿ ಬಿ ತಂಡ ವಿರಾಟ್ ಗೆ ಹನ್ನೆರಡು ಕೋಟಿ ರುಪಾಯಿಗಳನ್ನು ಕೊಟ್ಟಿದೆ. ತದನಂತರ 2017 ರಿಂದ 2021 ರವರೆಗೆ ವಿರಾಟ್ ಕೊಹ್ಲಿಯವರಿಗೆ ಪ್ರತಿವರ್ಷ ಹದಿನೇಳು ಕೋಟಿ ರುಪಾಯಿಗಳಂತೆ 4 ವರ್ಷಕ್ಕೆ ಅರವತ್ತೊಂಬತ್ತು ಕೋಟಿ ಸಂಭಾವನೆ ನೀಡಲಾಗಿದೆ. ಈ ವರ್ಷ 2022 ರಲ್ಲಿ ವಿರಾಟ್ ಗೆ ಸಿಕ್ಕಿದ್ದು 15 ಕೋಟಿ ರೂಪಾಯಿ ಗಳು. ಒಟ್ಟಾರೆ ಹದಿನೈದು ಐಪಿಎಲ್ ಸೀಸನ್ ಗಳಲ್ಲಿ ವಿರಾಟ್ ನೂರಾ ಐವತ್ತೆಂಟು ಕೋಟಿ ಗಳಿಸಿದ್ದಾರೆ. ಐಪಿಎಲ್ ಅತಿ ಹೆಚ್ಚು ಹಣವನ್ನು ಗಳಿಸಿರುವ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನ ಪಡೆದರೆ , ಅವರ ನಂತರ ವಿರಾಟ್ ಎರಡನೇ ಸ್ಥಾನ ಪಡೆದಿದ್ದಾರೆ.

Leave a Comment

error: Content is protected !!