ಒಂದು Instagram ಪೋಸ್ಟ್ ಗೆ ವಿರಾಟ್ ಕೊಹ್ಲಿ ಪಡೆಯೋ ಹಣ ಎಷ್ಟು ಗೊತ್ತಾ? ಯಪ್ಪಾ ಏನ್ ಗುರು ದುಡ್ಡಿನ ದೊಡ್ಡಪ್ಪ.

Virat Kohli ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅತ್ಯಂತ ಭರವಸೆ ಆಟಗಾರ ಆಗಿರುವ ವಿರಾಟ್ ಕೊಹ್ಲಿ ಅವರು ಇಡೀ ಜಗತ್ತಿಗೆ ಪರಿಚಯ ಇದ್ದಾರೆ. ಕ್ರಿಕೆಟ್ ಗೊತ್ತಿರೋದೇ ಇರುವವರೆಗೂ ಕೂಡ ವಿರಾಟ್ ಕೊಹ್ಲಿ ಅತ್ಯಂತ ನೆಚ್ಚಿನ ಕ್ರೀಡಾಪಟುವಾಗಿ(Athlete) ಕಾಣಿಸಿಕೊಳ್ಳುತ್ತಾರೆ. ಇಡೀ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ನಮಗೆ ಹೆಮ್ಮೆ.

ಇನ್ನೂ ಐಪಿಎಲ್ ನಲ್ಲಿ(IPL) ನಮ್ಮ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಆಟಗಾರನಾಗಿ ತಮ್ಮ ಆರಂಭಿಕ ದಿನಗಳಿಂದಲೂ ಕೂಡ ಇಲ್ಲಿಯವರೆಗೂ ಕಾಣಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ಮಧ್ಯಭಾಗದಲ್ಲಿ ತಮ್ಮ ಫಾರ್ಮ್ ಕಳೆದುಕೊಂಡು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಈಗ ತಂಡದ ಟಾಪ್ ಬ್ಯಾಟ್ಸ್ಮನ್ ಆಗಿ ತಮ್ಮ ಬ್ಯಾಟಿಂಗ್ ವಿಶ್ವರೂಪವನ್ನು ಪ್ರದರ್ಶಿಸುತ್ತಿದ್ದಾರೆ. ತಂಡದ ಗೆಲುವಿನ ಕುದುರೆಯಾಗಿ ಇಂದಿಗೂ ಕೂಡ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ ಅವರ ಮೇಲೆ ಇಡೀ ತಂಡವೆ ಅವಲಂಬಿತವಾಗಿದೆ ಎಂದರು ಕೂಡ ತಪ್ಪಾಗಲಾರದು.

Virat Kohli

ಎಲ್ಲಕ್ಕಿಂತ ಪ್ರಮುಖವಾಗಿ ಸದ್ಯದ ಮಟ್ಟಿಗೆ ಭಾರತದಲ್ಲಿ ಅತ್ಯಂತ ಶ್ರೀಮಂತ(Richest) ಕ್ರೀಡಾಪಟು ಆಗಿ ಕೂಡ ವಿರಾಟ್ ಕೊಹ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಎಲ್ಲರಿಗಿಂತ ಹೆಚ್ಚಿನ ಫಾಲೋವರ್ಸ್ ಗಳನ್ನು ಜಾಗತಿಕ ಮಟ್ಟದಲ್ಲಿ ವಿರಾಟ್ ಕೊಹ್ಲಿ ಅವರು ಹೊಂದಿದ್ದಾರೆ. ಅದರಲ್ಲಿ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ(Instagram) 234 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇನ್ನು instagram ನಲ್ಲಿ ಜಾಹೀರಾತಿಗಾಗಿ ಒಂದು ಪೋಸ್ಟ್ ಮಾಡಲು ವಿರಾಟ್ ಕೊಹ್ಲಿ ಅವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯಲು ಇಂದು ಹೊರಟಿದ್ದೇವೆ.

ಹೌದು ಫ್ರೆಂಡ್ಸ್ ಒಂದು ಜಾಹಿರಾತಿಗಾಗಿ ವಿರಾಟ್ ಕೊಹ್ಲಿ ಅವರು ಪಡೆಯುವ ಸಂಭಾವನೆ ಕೋಟ್ಯಾಂತರ ರೂಪಾಯಿಗಳಲ್ಲಿ ಇರುತ್ತದೆ. ಇನ್ನು ಅದೇ ಜಾಹೀರಾತಿನ ಕುರಿತಂತೆ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಲು ವಿರಾಟ್ ಕೊಹ್ಲಿ ಅವರು ಭರ್ಜರಿ ಹತ್ತರಿಂದ ಹನ್ನೆರಡು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಅಂದರೆ ಒಂದೇ ಒಂದು ಪೋಸ್ಟ್ ಮೂಲಕ ವಿರಾಟ್ ಕೊಹ್ಲಿ ಅವರು ಸುಲಭವಾಗಿ ಕೋಟ್ಯಾಧಿಪತಿ ಆಗಬಹುದು. ವಿರಾಟ್ ಕೊಹ್ಲಿ ಅವರ ಈ ವಿಚಾರದ ಬಗ್ಗೆ ನಿಮಗೇನು ಅನ್ನಿಸಿತು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!