ಮ್ಯಾಕ್ಸ್ ವೆಲ್ ಮದುವೆ ಪಾರ್ಟಿಯಲ್ಲಿ ಪುಷ್ಪಾ ಚಿತ್ರದ ಹಾಡಿಗೆ ವಿರಾಟ್ ಕೊಹ್ಲಿಯ ಜಬರ್ದಸ್ತ್ ಡ್ಯಾನ್ಸ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ವನ್ನು ನೀವೆಲ್ಲಾ ಮೈದಾನದಲ್ಲಿ ನೋಡಿದ್ದೀರಾ. ವಿರಾಟ್ ಗೆ ಬಹುಬೇಗನೆ ಸಿಟ್ಟು ಬರುತ್ತೆ ಹಾಗೇ ಬಹುಬೇಗನೆ ಖುಷಿಯಾಗ್ತಾರೆ. ಈ ಮನುಷ್ಯ ಭಾವನಾತ್ಮಕ ಜೀವಿ ತಮ್ಮ ಒಳಗಿನ ಭಾವನೆಯನ್ನು ಬೇಗನೆ ಹೊರ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ವಿರಾಟ್ ಕೊಹ್ಲಿಯವರ ಅತಿರೇಕದ ವರ್ತನೆಯನ್ನು ನೋಡಿ ಹಲವಾರು ಜನ ಇವರು ಕೋಪಿಷ್ಟ ಎಂದೆಲ್ಲ ಟೀಕೆ ಮಾಡುತ್ತಾರೆ. ಇದು ವಿರಾಟ್ ಕೊಹ್ಲಿ ಅವರ ನೈಸರ್ಗಿಕ ಸ್ವಭಾವವ ಎಂಬುದು ನಿಮಗೆ ನೆನಪಿರಲಿ.
ಇದೀಗ ಐಪಿಎಲ್ ಆಟ ಶುರುವಾಗಿದ್ದು ಅರ್ಧ ಸೀಸನ್ ಮುಗಿದಿದೆ. ಇನ್ನೂ ಅರ್ಧದಷ್ಟು ಆಟ ಬಾಕಿ ಇದೆ. ಇಲ್ಲಿಯವರೆಗೆ ಆಡಿದ ಆಟಗಳಲ್ಲಿ ಕೊಹ್ಲಿ ಅವರು ಆಡಿದ ಆಟದ ಶೈಲಿ ಅಭಿಮಾನಿಗಳಿಗೆ ಬೇಸರ ತಂದಿದೆ ಕೊಹ್ಲಿಯವರು ತಮ್ಮ ಹಳೆಯ ಆಟದ ಶೈಲಿಯನ್ನು ಮರೆತುಬಿಟ್ಟಿದ್ದಾರೆ. ಅಭಿಮಾನಿಗಳಿಗಂತೂ ವಿರಾಟ್ ಕೊಹ್ಲಿ ಯಾವಾಗ ಹಳೆಯ ರೂಪವನ್ನು ಪಡೆಯುತ್ತಾರೆ ಎಂಬುದು ಚಿಂತೆಯಾಗಿದೆ. ಲಕ್ಷಾಂತರ ಅಭಿಮಾನಿಗಳು ಮುಂದಿನ ಮ್ಯಾಚ್ ಗಳಲ್ಲಿ ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೋಡಲು ಆಶಿಸುತ್ತಿದ್ದಾರೆ.
ಬೇಸರಗೊಂಡ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯವರು ವಿಭಿನ್ನ ರೀತಿಯಲ್ಲಿ ಮನೋರಂಜನೆ ನೀಡಲಿದ್ದಾರೆ. ಆರ್ ಸಿಬಿ ಆಟಗಾರ ಮ್ಯಾಕ್ಸ್ ವೆಲ್ ಅವರ ಮದುವೆ ಪಾರ್ಟಿಯಲ್ಲಿ ವಿರಾಟ್ ಕೊಹ್ಲಿಯವರು ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಮ್ಯಾಕ್ಸ್ ವೆಲ್ ಅವರು ವಿನಿ ರಮಣ ಎಂಬ ಚೆನ್ನೈ ಮೂಲದ ಹುಡ್ಗಿಯನ್ನು ಮಾರ್ಚ್ ತಿಂಗಳಿನ ಕೊನೆಯಲ್ಲಿ ಮದುವೆಯಾಗಿದ್ದರು. ಐಪಿಎಲ್ ಶುರುವಾಗುವ ಸಂದರ್ಭದಲ್ಲೇ ಮ್ಯಾಕ್ಸ್ ವೆಲ್ ತಮ್ಮ ಮದುವೆ ಸಂಭ್ರಮದಲ್ಲಿದ್ದರು.
ಮ್ಯಾಕ್ಸ್ ವೆಲ್ ಅವರ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಐಪಿಎಲ್ ಶುರುವಾಗಿತ್ತು. ಆದಕಾರಣ ಆರ್ ಸಿಬಿ ಸಹ ಆಟಗಾರರಿಗೆ ಮ್ಯಾಕ್ಸ್ ವೆಲ್ ಅವರ ಮದುವೆಗೆ ಹೋಗೋಕೆ ಸಾಧ್ಯವಾಗಿರಲಿಲ್ಲ. ಆದಕಾರಣ ಮ್ಯಾಕ್ಸ್ ವೆಲ್ ಅವರು ಇದೀಗ ಆರ್ ಸಿಬಿ ತಂಡದ ಸಹ ಆಟಗಾರರಿಗೆ ತಮ್ಮ ಮದುವೆ ಪಾರ್ಟಿ ಯನ್ನು ಅರೇಂಜ್ ಮಾಡಿದ್ದಾರೆ. ಮ್ಯಾಕ್ಸ್ ವೆಲ್ ಅವರ ಈ ಮದುವೆ ಪಾರ್ಟಿಯಲ್ಲಿ ಎಲ್ಲಾ ಆರ್ ಸಿಬಿ ಆಟಗಾರ ಡ್ಯಾನ್ಸ್ ಮಾಡಿಕೊಂಡು ಹಾಡು ಹಾಡಿಕೊಂಡು ಮೋಜು ಮಸ್ತಿ ಮಾಡಿದ್ದಾರೆ.
ಮ್ಯಾಕ್ಸ್ ವೆಲ್ ಅವರ ಈ ಮದುವೆ ಪಾರ್ಟಿಯಲ್ಲಿ ವಿರಾಟ್ ಜೊತೆ ಅನುಷ್ಕಾ ಶರ್ಮಾ ಅವರು ಕೂಡ ಆಗಮಿಸಿದ್ದರು. ವಿರಾಟ್ ಕೊಹ್ಲಿ ಅವರು ಮೂಲತಃ ಪಂಜಾಬಿನ ಕುಟುಂಬದವರು. ವಿರಾಟ್ ಕೊಹ್ಲಿ ಅವರು ಪಂಜಾಬಿನ ಶೈಲಿಯಲ್ಲಿ ತೆಲುಗಿನ ಪುಷ್ಪಾ ಚಿತ್ರದ ಊ ಅಂತಿಯಾ ಮಾವಾ ಊಊ ಅಂತಿಯಾ ಮಾವ ಹಾಡಿಗೆ ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ವಿರಾಟ್ ಕೊಹ್ಲಿಯವರ ಡ್ಯಾನ್ಸ್ ಸ್ಟೆಪ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈ’ರ’ಲ್ ಆಗಿದೆ. ವಿರಾಟ್ ಅವರ ಜೊತೆ ಆರ್ ಸಿಬಿ ಆಟಗಾರರಾದ ಡು ಪ್ಲೆಸಿಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಶಾಬಾಜ್ ಅಹ್ಮದ್ ಸಹ ಕೂಡಿಕೊಂಡು ಒಟ್ಟಿಗೆ ಡ್ಯಾನ್ಸ್ ಮಾಡಿರುವ ಕ್ಷಣಗಳು ಅಭಿಮಾನಿಗಳಿಗೆ ಖುಷಿ ತಂದಿದೆ.