ಕ್ಯಾಪ್ಟನ್ ಆದರು ಕೂಡ ರೋಹಿತ್ ಶರ್ಮಾಗೆ ಕೊಹ್ಲಿಗಿಂತ ಹೆಚ್ಚು ಸಂಬಳ ಸಿಗುತ್ತಿಲ್ಲ. ರೋಹಿತ್ ಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ

ಭಾರತ ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಎಂದೇ ಪ್ರಸಿದ್ಧರಾಗಿರುವ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟ್ಸ್ ಮೆನ್ ಅನ್ನುವುದರಲ್ಲಿ ಯಾವುದೇ ಮಾತಿಲ್ಲ. ಅತಿ ಹೆಚ್ಚು ಬ್ಯಾಟಿಂಗ್ ಎವರೇಜನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಅತಿ ವೇಗವಾಗಿ 12 ಸಾವಿರ ರನ್ ಗಳನ್ನು ಹೊಡೆದಿರುವ ಮೊದಲ ಕ್ರಿಕೆಟ್ ಆಟಗಾರ ಎಂಬ ಬಿರುದು ವಿರಾಟ್ ಅವರಿಗಿದೆ. ಕೊಹ್ಲಿ ಒಬ್ಬ ಒಳ್ಳೆಯ ಆಟಗಾರನಾದರೂ ಸಹ ನಾಯಕತ್ವದ ಅದೃಷ್ಟ ಒಲಿಯಲಿಲ್ಲ.

ವಿರಾಟ್ ಕೊಹ್ಲಿ ಅವರು 2013 ರಿಂದ 2021 ರ ತನಕ ಭಾರತದ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕೊಹ್ಲಿ ನಾಯಕತ್ವದಲ್ಲಿ ಸುಮಾರು 95 ಮ್ಯಾಚ್ ಗಳನ್ನು ಆಡಿದ್ದಾರೆ.ಆಡಿದ 95 ಮ್ಯಾಚ್ ಗಳಲ್ಲಿ 65 ಮ್ಯಾಚ್ ಗಳನ್ನು ಗೆದ್ದಿದ್ದಾರೆ ಮತ್ತು 27 ಮ್ಯಾಚುಗಳನ್ನು ಸೋತಿದ್ದಾರೆ. ಶೇಕಡಾ 70 ರಷ್ಟು ಗೆಲುವಿನ ರೇಷಿಯೊ ಹೊಂದಿದ್ದಾರೆ. ಕೊಹ್ಲಿ ಅವರು ನಾಯಕತ್ವ ನಿಭಾಯಿಸುವುದರಲ್ಲಿ ಸಫಲರಾದರು ಕೂಡ ಕೊಹ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ಕಾರಣ ಬೇರೆಯೇ ಇದೆ.

ಕೋಹ್ಲಿಯವರು ನಾಯಕತ್ವವನ್ನು ನಿಭಾಯಿಸುವ ಒತ್ತಡದಲ್ಲಿ ತಮ್ಮ ವೈಯಕ್ತಿಕ ಆಟದ ಕಡೆ ಹೆಚ್ಚು ಗಮನ ಹರಿಸುವುದು ಕಷ್ಟವಾಗುತ್ತಿತ್ತು . ಆದ್ದರಿಂದ ಕೊಹ್ಲಿ ಅವರ ಬದಲಾಗಿ ರೋಹಿತ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ದೂರ ಉಳಿದಿರುವುದು ಹಲವು ಅಭಿಮಾನಿಗಳು ಬೇಸರ ತರಿಸಿದೆ. ಏನೇ ಇರಲಿ ರೋಹಿತ್ ಶರ್ಮಾ ಅವರು ತಮ್ಮ ನಾಯಕತ್ವವನ್ನು ಚಾಕಚಕ್ಯತೆಯನ್ನು ನಿಭಾಯಿಸುತ್ತಿದ್ದಾರೆ. ಕೊಹ್ಲಿ ಬದಲಾಗಿ ರೋಹಿತ್ ಶರ್ಮ ನಾಯಕತ್ವವನ್ನು ನಿಭಾಯಿಸುತ್ತಿದ್ದರೂ ಸಹ ಸಂಬಳದ ವಿಷಯದಲ್ಲಿ ವಿರಾಟ್ ಕೊಹ್ಲಿ ರಾಜಿಯಾಗಿಲ್ಲ.

ಹೌದು ಗೆಳೆಯರೆ ಆಶ್ಚರ್ಯದ ಸಂಗತಿಯೇನೆಂದರೆ ನಾಯಕತ್ವ ವಹಿಸುತ್ತಿರುವ ರೋಹಿತ್ ಶರ್ಮಾ ಮತ್ತು ಆಟಗಾರನಾಗಿರುವ ಕೊಹ್ಲಿ ಇಬ್ಬರಿಗೂ ಬಿಸಿಸಿಐ ಸಮನಾದ ಸಂಭಾವನೆ ನೀಡುತ್ತಿದೆ. GQ ರಿಪೋರ್ಟ್ ಗಳ ಪ್ರಕಾರ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ 1 ವರ್ಷಕ್ಕೆ 7 ಕೋಟಿ ರುಪಾಯಿಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ಜಸ್ ಪ್ರೀತ್ ಬೂಮ್ರಾ ಅವರು ಕೂಡ 7 ಕೋಟಿ ರುಪಾಯಿಗಳನ್ನು ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಮತ್ತು ಬುಮ್ರಾ 3 ಆಟಗಾರರು A+ ಕಾಂಟ್ರ್ಯಾಕ್ಟ್ ಗೆ ಸಹಿ ಮಾಡಿದ್ದಾರೆ. ಆದ್ದರಿಂದ ಈ 3 ಆಟಗಾರರು ಸಮನಾದ ಸ್ಯಾಲರಿ ಪಡೆಯುತ್ತಿದ್ದಾರೆ.

Leave a Comment

error: Content is protected !!